ಶಿರಗುಪ್ಪಿ ಪ್ರಾಥಮಿಕ ಶಾಲೆೆ ಮಕ್ಕಳಿಗೆ ಐಹೊಳೆ ಪಾಠ

ಕಾಗವಾಡ 06: ದೇಶದ ಅನೇಕ ರಾಜ್ಯಗಳಲ್ಲಿ ಶಾಲೆಯಲ್ಲಿ ಓದುತ್ತಿರುವ ಚಿಕ್ಕ ಬಾಲಿಕೆಯರ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದೆ. ಅದನ್ನು ತಡೆಯಲು ಸರಕಾರ ಫೋಕ್ಸೊ ಕಾಯಿದೆ ಜಾರಿಗೆ ತಂದಿದೆ. ಈ ಕಾಯಿದೆ ಬಗ್ಗೆ ಶಾಲೆಯ ವಿದ್ಯಾಥರ್ಿನಿಯರಿಗೆ ಮಾಹಿತಿ ನೀಡಿ, ಅವರಲ್ಲಿ ಅರಿವು ಮೂಡಿಸಿ ಯಾವ ರೀತಿ ಇದನ್ನು ತಡೆಗಟ್ಟಲು, ಎದುರಿಸಬಹುದು ಈ ಬಗ್ಗೆ ಬೆಳಗಾವಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ಐಹೊಳೆ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡು ಗಂಟೆ ಮಕ್ಕಳೊಂದಿಗೆ ಉಳಿದು ಮಾಹಿತಿ ನೀಡಿದರು.

ಬುಧವಾರ ದಿ. 5ರಂದು ಬೆಳಗಾವಿ ಜಿಲ್ಲಾ ಪಂಚಾಯತಿಯ ಅಧ್ಯಕ್ಷೆ ಆಶಾ ಐಹೊಳೆ ಇವರು ಶಿರಗುಪ್ಪಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಅಲ್ಲಿಯ ವಿದ್ಯಾಥರ್ಿಗಳಿಗೆ ನೇರವಾಗಿ ವಿದ್ಯಾಭ್ಯಾಸ ಅಧ್ಯಯನ ಪ್ರಾರಂಭಿಸಿದರು. 

ನುರಿತ ಶಿಕ್ಷಕರಕ್ಕಿಂತ ಉತ್ತಮವಾಗಿ ಮಕ್ಕಳಿಗೆ ಪಾಠ ಹೇಳಲು ಪ್ರಾರಂಭಿಸಿದರು. ಮಕ್ಕಳ ಮನಗೆದ್ದು ಅವರಲ್ಲಿ ಉತ್ಸಾಹ ತುಂಬಿದರು. ನಂತರ ಎಲ್ಲೆಡೆ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಹೇಳುತ್ತಾ, ನೀವು ಬೇರೆ ಯಾರೋ ನಿಮಗೆ ಮೈಮುಟ್ಟಿದ್ದರೆ ಯಾವ ರೀತಿ ಪ್ರತಿಕ್ರಿಯಿಸುವುದು ಮತ್ತು ಬಚಾವಕ್ಕಾಗಿ ಏನು ಮಾಡಬಹುದು ಎಂದು ಹೇಳಿ, ಕೂಡಲೆ ಸರಕಾರ ಘೋಷಣೆ ಮಾಡಿರುವ ಸಹಾಯವಾಣಿ 1098ಗೆ ಸಂಪಕರ್ಿಸಿರಿ ಮತ್ತು ಅಧ್ಯಕ್ಷರು ತಮ್ಮ ಮೊಬೈಲ್ ನಂಬರ್ ಮಕ್ಕಳಿಗೆ ನೀಡಿದರು.

ಎಲ್ಲ ವಿದ್ಯಾಥರ್ಿನಿಯರು ಇದನ್ನು ಸಂತಸದಿಂದ ಆಲಿಸಿ, ಆಶಾತಾಯಿ ಐಹೊಳೆ ಇವರು ಫ್ಯಾಮಿಲಿ ಫೌಂಡೇಶನ್ ವತಿಯಿಂದ ಸಂಜೀವಿನಿ, ಆಶಾಕಿರಣ ಮತ್ತು ರಕ್ಷಾ ಬಂಧನ ಕಾರ್ಯಕ್ರಮದ ಮಾಹಿತಿ ತೆಗೆದುಕೊಂಡರು. ಶಿರಗುಪ್ಪಿ ಗ್ರಾಮದ ಸರಕಾರಿ ಕನ್ನಡ, ಉದರ್ು ಪ್ರಾಥಮಿಕ ಮತ್ತು ಪ್ರೌಢಶಾಲೆ, ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು. ಎಲ್ಲ ಶಿಕ್ಷಕರು ಜಿಪಂ ಅಧ್ಯಕ್ಷೆ ನೀಡುತ್ತಿರುವ ಶಿಕ್ಷಣ ಪದ್ಧತಿ ಮತ್ತು ಅವರಲ್ಲಿಯ ಉತ್ಸಾಹ ಕಂಡು ಚಕಿತರಾದರು. 

ಡಾ. ಪ್ರಶಾಂತ ಐಹೋಳೆ, ಬೆಳಗಾವಿಯ ಯುವ ಸಬಲಿಕರಣ ವಿಭಾಗದ ಅಧಿಕಾರಿ ಎನ್.ಎ.ಮಿರಜಕರ, ಶಿರಗುಪ್ಪಿ ಸರಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಿಕೆ ಉಜ್ವಲಾ ಮಗದುಮ್ಮ, ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಮುಖ್ಯಾಧ್ಯಾಪಕ ಎಸ್.ಡಿ.ಬೂವಾ, ಸರಕಾರಿ ಕನ್ನಡ ಶಾಲೆಯ ಮುಖ್ಯಾಧ್ಯಾಪಕ ಟಿ.ಬಿ.ಭೋಸಲೆ, ಉದರ್ು ಶಾಲೆಯ ಮುಖ್ಯಾಧ್ಯಾಪಕ ವಿಜಯ ಮುಲ್ಲಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಚೀನ ಕಾಂಬಳೆ, ಶಿವಾನಂದ ಹವಿನಾಳ, ಸೇರಿದಂತೆ ಅನೇಕರು ಇದ್ದರು.