ವಸತಿ ಶಾಲೆ-ಕಾಲೇಜುಗಳ ಹೊರಗುತ್ತಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಸಲು ಅಹೋರಾತ್ರಿ ಧರಣಿ ಸತ್ಯಾಗ್ರಹ
ಕೊಪ್ಪಳ 20: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕ ಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೊರಾರ್ಜಿ ಶಾಲೆಯಗಳಲ್ಲಿ ಕಳೆದ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಇವರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ.
ಖಾಯಂ ನೌಕರರ ವರ್ಗಾವಣೆಯಿಂದ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುತ್ತಾರೆ. ಕಡಿಮೆ ಸಂಬಳಕ್ಕೆ ವಸತಿ ನಿಲಯ-ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಚತಾಗಾರರು, ಕಾವಲುಗಾರರು, ಡಿ ಗ್ರೂಪ್ ಪ್ರ.ಥಮ ದರ್ಜೆ ಸಹಾಯಕರು. ಕಂಪ್ಯೂಟರ್ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್‌ಗಳು, ಹೊರಗುತ್ತಿಗೆ ಶಿಕ್ಷಕರು, ದಿನಗೂಲಿ ನೌಕರರು ಯಾವುದೇ ಭದ್ರತೆ ಇಲ್ಲದೆ ನಿರಂತರವಾಗಿ ಕೆಲಸ ಮಾಡುತಾ ್ತ ಬಂದಿರುತ್ತಾರೆ. ಗುತ್ತಿಗೆದಾರರು, ವಾರ್ಡನ್‌ರವರು, ತಾಲ್ಲೂಕು ಮತು ್ತ ಜಿಲಾ ್ಲ ಮಟ್ಟದ ಅಧಿಕಾರಿಗಳು ಹೊರಗುತ್ತಿಗೆ ಸಿಬ್ಬಂದಿಗಳನ್ನು ಶೋಷಣೆ ಮಾಡುತ್ತಿದ್ದಾರೆ.
ಈ ನೌಕರರು ತೀರಾ ಕಡಿಮೆ ಸಂಬಳ 500 ರೂಪಾಯಿಗಳಿಂದ ಕಡಿಮೆ ಸಂಬಳದಲ್ಲಿ ದುಡಿಯುತ್ತಾ ಬಂದಿರೆತ್ತಾರೆ.ಈಗಲೂ 6 ಗಂಟೆಯಿಂದ ರಾತ್ರಿ 9 ರವರೆಗೆ 14-15 ತಾಸೂ ಕೆಲಸ ಮಾಡಿದರು ಯಾರಿಗೂ ಕರುಣೆ ಬರುತ್ತಿಲಾ ್ಲ.ವೇತನವೂ ಕೂಡ ಸರಿಯಾಗಿ ತಿಂಗಳ ತಿಂಗಳ ಬರುತ್ತಿಲ್ಲಾ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹೊಸದಾಗಿ ಹಾಸ್ಟೇಲ್ ಪ್ರಾರಂಭವಾಗಿದ್ದು 8-10 ವರ್ಷ ಕೆಲಸ ಮಾಡಿ ಖಾಯಂ ನೌಕರು ಬಂದಾಗ ಕೆಲಸ ಕಳೆದುಕೊಂಡ ಜಿಲ್ಲೆಯ 18 ಸಿಬ್ಬಂದಿಗಳನ್ನು ಬಿಸಿಎಂ ಇಲಾಖೆ ಬೀದಿ ಪಾಲು ಮಾಡಿದ್ದಾರೆ.ಹೆಚು ್ಚವರಿ ಸಿಬ್ಬಂದಿಗಳನ್ನು 18 ಜನ ಸಿಬ್ಬಂದಿಗಳನ್ನ ಮರು ಕೆಲಸಕ್ಕೆ ಸೇರಿಸಕೊಳ್ಳಬೇಕು ಹಾಗೂ ನಾಲ್ಕು ವರ್ಷಗಳಿಂದ ವೇತನವೂ ಹೆಚ್ಚಳವಾಗಿಲ್ಲ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ ವೇತನ ಕಡಿಮೆಯಿಂದ ಕುಟುಂಬ ನಡೆಸಲು ಸಾಧ್ಯವಾಗುತ್ತಿಲ್ಲ.ಅತ್ಯಂತ ಸಂಕಷ್ಟದಲ್ಲಿ ಹೊರಗುತ್ತಿಗೆ ನೌಕರರು ಒದ್ದಾಡುತ್ತಿದ್ದಾರೆ. ಹಾಗಾಗಿ ತಮ್ಮ ಕಛೇರಿಯ ಎದುರು ಅನಿರ್ಧಿಷ್ಠ ಹೋರಾಟ ಮಾಡಿ ಮನವಿ ಸಲ್ಲಿಸುತ್ತಿದ್ದು ಕೆಲವು ಸಮಸ್ಯೆಗಳನ್ನು ಪರಿಹಾರ ಮಾಡಲು ತಾವುಗಳು ಸಭೆ ಕರೆದು ಚರ್ಚಿಸಬೇಕೆಂದು ಈ ಅನಿರ್ಧಿಷ್ಟ ಧರಣಿಯ ಮೂಲಕ ಒತ್ತಾಯಿಸುತ್ತೇವೆ.