ಕೃಷಿ ವಿ.ವಿ. ಆವರಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿಧರ್ಾರ


ಧಾರವಾಡ 20:  ಧಾರವಾಡದ ಸ್ಥಳೀಯ ಸಾಹಿತಿಗಳು, ಸಂಸ್ಕೃತಿ ಚಿಂತಕರಿಂದ ಇಂದಿನ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಸಮ್ಮೇಳನಕ್ಕೆ ಒಳ್ಳೆಯ ಹೆಸರು ಬರುವ ರೀತಿಯಲ್ಲಿ ಆಯೋಜಿಸಲು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆವರಣ ಸೂಕ್ತ ಸ್ಥಳವಾಗಿದೆ. ಅ.ಭಾ. 84ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೃಷಿ.ವಿ.ವಿ ಆವರಣದಲ್ಲಿ ಆಯೋಜಿಸಲು ಇಂದಿನ ಸಭೆ ನಿಧರ್ಾರ ಕೈಗೊಂಡಿದೆ ಎಂದು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಹೇಳಿದರು.

ಆಲೂರು ವೆಂಕಟರಾವ್ ಸಭಾಭವನದಲ್ಲಿಂದು ಏರ್ಪಡಿಸಲಾಗಿದ್ದ ಸಾಹಿತಿಗಳು, ಉಪ ಸಮಿತಿಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಸಮ್ಮೇಳನ ಆಯೋಜಿಸುವ ಸ್ಥಳದ ಕುರಿತು ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಮುಖ್ಯ ವೇದಿಕೆ, ಪುಸ್ತಕ, ವಾಣಿಜ್ಯ ಮಳಿಗೆ, ಸಾರಿಗೆ ಸಂಚಾರ ನಿಯಂತ್ರಣ, ಆಹಾರ ವ್ಯವಸ್ಥೆ ಮೊದಲಾದ 15 ಅಂಶಗಳನ್ನು ಸಭೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಸ್ಥಳಿಯರು ಅಭಿಪ್ರಾಯ ಮಂಡಿಸಿದರು. ಯಾವುದೇ ವಾಗ್ವಾದಗಳಿಲ್ಲದೆ ಸೌಹಾರ್ದಯತವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಇನ್ನು ಮುಂದೆ ಸಮ್ಮೇಳನದ ಸಿದ್ಧತೆಯ ಕೆಲಸಗಳನ್ನು ಚುರುಕುಗೊಳಿಸಬೇಕು. ಸಮ್ಮೇಳನಕ್ಕಾಗಿ ಸಕರ್ಾರದಿಂದ 12 ಕೋಟಿ ರೂ.ಗಳ ಅನುದಾನ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಜನೆವರಿ 4 ರಂದು ಸಮ್ಮೇಳನದ ಉದ್ಘಾಟನೆಗೆ ಆಗಮಿಸಲಿದ್ದಾರೆ. ಡಿಸೆಂಬರ್ 20ರವರೆಗೆ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳ ನೋಂದಣಿ ಕಾರ್ಯ ನಡೆಯಲಿದೆ. ಈ ಅವಧಿಯಲ್ಲಿ ಮಾತ್ರ ನೋಂದಣಿ ಮಾಡಿಕೊಳ್ಳಲಾಗುವುದು. ನಂತರ ಬಂದರೆ ಊಟ, ವಸತಿ ಸೌಲಭ್ಯ ಕಲ್ಪಿಸಲು ಆಗುವುದಿಲ್ಲ.  ಆದ್ದರಿಂದ ಸಾಹಿತ್ಯಾಸಕ್ತರು ಡಿ.20ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

ಹಿರಿಯ ವಿಮರ್ಶಕರಾದ  ಡಾ. ಸಿ.ಎನ್.ರಾಮಚಂದ್ರನ್ ಅವರ ನೇತೃತ್ವದ ತಜ್ಞರ ತಂಡವು ಗೋಷ್ಠಿಗಳ ಕುರಿತು ಸಲಹೆ ನೀಡಿದೆ. ಅವರ ಸಲಹೆಗಳಂತೆ ಉತ್ತಮ ಗೋಷ್ಠಿಗಳನ್ನು ಆಯೋಜಿಸಲಾಗುವುದು. ಎಲ್ಲ ಪ್ರದೇಶಗಳ ತಜ್ಞರಿಗೂ ಸಮಾನ ಅವಕಾಶಗಳು ಸಿಗಲಿವೆ ಎಂದು ಡಾ. ಮನು ಬಳಿಗಾರ ಹೇಳಿದರು. 

ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಎಲ್ಲ ಉಪಸಮಿತಿಗಳು ಸಭೆ ನಡೆಸಿ ಸಿದ್ಧತೆಗಳನ್ನು ಆರಂಭಿಸಿವೆ.ಕನರ್ಾಟಕ ಕಾಲೇಜು ಅಥವಾ ಕೃಷಿ ವಿವಿ ಆವರಣದಲ್ಲಿ  ಸಮ್ಮೇಳನ ಆಯೋಜಿಸಲು ಇರುವ ಸಾಧ್ಯತೆ ಮತ್ತು ಸವಾಲುಗಳ ಕುರಿತು ವಿವರಿಸಿ, ಸ್ಥಳೀಯ ಸಾಹಿತಿಗಳು ,ಕಸಾಪ ಪದಾಧಿಕಾರಿಗಳು ತೆಗೆದುಕೊಳ್ಳುವ ನಿಧರ್ಾರದಂತೆ ಜಿಲ್ಲಾಡಳಿತ ನಡೆದುಕೊಳ್ಳಲಿದೆ ಎಂದರು.

ನಾಡೋಜ ಡಾ.ಪಾಟೀಲ ಪುಟ್ಟಪ್ಪ, ಅಶೋಕ ಚೊಳಚಗುಡ್ಡ,ಎಂ.ಎಸ್.ಸುಬ್ರಹ್ಮಣ್ಯ, ಬಸವರಾಜ ಸೂಳಿಭಾವಿ, ಲಕ್ಷ್ಮಣ ಬಕ್ಕಾಯಿ, ಪ್ರೊ.ಚವಡಿ, ಪಿ.ಹೆಚ್.ನೀರಲಕೇರಿ, ಮೋಹನ ಲಿಂಬಿಕಾಯಿ, ಡಾ.ವಿಶ್ವನಾಥ ಚಿಂತಾಮಣಿ, ಜಯಶ್ರೀ ಜಾತಿಕರ್ತ, ದೇವಾನಂದ ರತ್ನಾಕರ್, ರಾಘವೇಂದ್ರ ಪಾಟೀಲ, ಡಾ.ರಾಜೇಶ್ವರಿ ಮಹೇಶ್ವರಯ್ಯ, ಸೀಮಾ ಮಸೂತಿ, ಕೆ.ಹೆಚ್.ನಾಯಕ, ಶಂಕರ ಹಲಗತ್ತಿ ಮತ್ತಿತರ ಗಣ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಜಿಪಂ ಸಿಇಓ ಡಾ.ಸತೀಶ ಬಿ.ಸಿ.,ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಮಹಾನಗರಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಉಪ ಪೊಲೀಸ್ ಆಯುಕ್ತ ಡಾ.ಬಿ.ಎಸ್.ನೇಮಗೌಡ, ಆಹಾರ ನಾಗರಿಕ ಸರಬರಾಜು ಇಲಾಖೆ ಜಂಟಿ ನಿದರ್ೇಶಕ ಸದಾಶಿವ ಮಜರ್ಿ ಮತ್ತಿತರರು ಇದ್ದರು.