ಸುದೀರ್ಘ 30 ವರ್ಷಗಳ ನಂತರ ಗುರು ಶಿಷ್ಯರ ಸಮ್ಮಿಲನ: ಗುರುವಂದನೆ
ವಿಜಯಪುರ 16: ಭಾರತ ದೇಶವು ಅಪಾರ ಸಂಸ್ಕೃತಿ ಹೊಂದಿದ ದೇಶವಾಗಿದೆ. ಅನಾದಿ ಕಾಲದಿಂದಲೂ ಈ ಗುರು ಶಿಷ್ಯರ ಪರಂಪರೆಯನ್ನು ಜಗತ್ತಿನ ಶ್ರೇಷ್ಠತೆಯಲ್ಲಿ ಇದು ಒಂದಾಗಿದೆ. ಈ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾದ್ಯವಿಲ್ಲ ಎಂದು ಬೀಳಗಿ ತಾಲೂಕಿನ ಉದ್ಯಮಿ ಮತ್ತು ಸಮಾಜಸೇವಕ ಲಕ್ಷಣ. ಆರ್. ನಿರಾಣಿ ಹೇಳಿದರು. ದಿ. 8ರಂದು ವಿಜಯಪುರ ನಗರದ ಲಿ ಗ್ರಾಂಡಿ ಹೋಟೇಲ್ ಸಭಾಂಗಣದಲ್ಲಿ ವಿಜಯಪುರನ ಸರಕಾರಿ ಬಾಲಕಿಯರ ಪ್ರೌಢ ಶಾಲೆಯ 1993-94 ನೇ ಸಾಲಿನಲ್ಲಿ ಮೇಟ್ರಿಕ್ ಅಧ್ಯಯನ ಮಾಡಿದ ವಿದ್ಯಾರ್ಥಿನಿಯರ ಬಳಗ ಸುದೀರ್ಘ 30 ವರ್ಷಗಳ ನಂತರ ತಮಗೆ ಶಿಕ್ಷಣ ಧಾರೆಯೆರೆದ ಗುರುವೃಂದದವರಿಗಾಗಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಮಹಾ ಸ್ನೇಹ ಸಮ್ಮೇಳನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು. ಗುರುಗಳಿಂದ ಶಿಕ್ಷಣವನ್ನು ಪಡೆದುಕೊಂಡ ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಂಡು ಸಮಾಜದ ಏಳ್ಗೆಗಾಗಿ ಶ್ರಮಿಸಿ, ತಮ್ಮ ಜೀವನ ಸಾರ್ಥಕಗೊಳಿಸಿಕೊಂಡರೆ ಅದೇ ಅವರು ತಮ್ಮ ಗುರುವಿಗೆ ಕೊಟ್ಟ ದೊಡ್ಡ ಕಾಣಿಕೆ ಆಗಿದೆ. ಈ ದಿನ ಹಮ್ಮಿಕೊಂಡ ಕಾರ್ಯಕ್ರಮ ಬಹಳ ಉತ್ತಮವಾಗಿದೆ ಎಂದ ಅವರು ಅಭಿನಂದನೆ ಸಲ್ಲಿಸಿದರು. ದಿವ್ಯ ಸಾನಿಧ್ಯವನ್ನು ಶಾರದಾ ಆಶ್ರಮದ ಕೈವಲ್ಯಮಾತಾಜಿ ಅವರು ವಹಿಸಿಕೊಂಡು ದೀಪ ಬೆಳೆಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಲ್ಲರಿಗೂ ದೇವರು ಆಯುರ ಆರೋಗ್ಯ ಕರುಣಿಸಲಿ ಎಂದು ಶುಭಕೋರಿದರು. ಅಧ್ಯಕ್ಷತೆಯನ್ನು ಆರೋಗ್ಯ ಇಲಾಖೆ ವಿಜಯಪುರನ ನಿವೃತ್ತ ತಾಲೂಕಾ ಆರೋಗ್ಯ ಮೇಲ್ವಿಚಾರಕಿ ಸುಗಲಾದೇವಿ ಹುಗ್ಗಿ ವಹಿಸಿಕೊಂಡಿದ್ದರು. ಕನ್ನಡ ಶಿಕ್ಷಕಿಯರಾದ ಸುರಕೋಡ, ಆದ್ಯ, ಗಣಿತ ಶಿಕ್ಷಕಿ ಎನ್. ಕೆ. ದೇಶಪಾಂಡೆ, ಹಿಂದಿ ಶಿಕ್ಷಕಿಯರಾದ ಜಮಾದಾರ, ಹುಸೇನನಾಯಕ, ಇಂಗ್ಲೀಷ್ ಶಿಕ್ಷಕಿ ಮಮದಾಪುರ, ಶಿಕ್ಷಕ ಸಣಕದ, ಕಸೂತಿ ಶಿಕ್ಷಕಿ ಶಿರಗುಪ್ಪಿ, ಕನ್ನಡ ಶಿಕ್ಷಕಿ, ಪ್ರಸ್ತುತ ಕಾಂಖಡಕಿ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಪಾಟೀಲ, ಸಮಾಜ ವಿಜ್ಞಾನ ಶಿಕ್ಷಕರಾದ ಹಲಂಸಗಿ, ವಿ. ಬಿ. ಪಾಟೀಲ, ನಿವೃತ್ತ ವಿಜ್ಞಾನ ಶಿಕ್ಷಕ ಮನಗೊಂಡ, ದೈಹಿಕ ಶಿಕ್ಷಕ ದೇವಕತೆ, ವಿಜ್ಞಾನ ಶಿಕ್ಷಕಿ ಯಾದವಾಡ ಈ ಎಲ್ಲ ನಿವೃತ್ತ ಗುರುವೃಂದಕ್ಕೆ ವಿಧ್ಯಾರ್ಥಿನಿಯರು ಶಾಲು ಹೊದಿಸಿ ಫಲ ಪುಷ್ಪ ನೆನಪಿನ ಕಾಣಿಕೆ ನೀಡಿ ಗೌರವ ಸನ್ಮಾನದೊಂದಿಗೆ ಗುರು ವಂದನೆ ಸಲ್ಲಿಸಿದರು. ಸನ್ಮಾನಿತರಾದ ಎಲ್ಲ ಶಿಕ್ಷಕರು ಅತೀವ ಸಂತೋಷವನ್ನು ವ್ಯಕ್ತಪಡಿಸಿ ಇದು ನಮ್ಮ ಜೀವನಲ್ಲಿ ಮರೆಯಲಾಗದ ಕ್ಷಣವಾಗಿದೆ. ನಮ್ಮ ನಿವೃತ್ತ ಜೀವನದಲ್ಲಿ ಇದೇ ಪ್ರಥಮ ಗುರುವಂದನಾ ಕಾರ್ಯಕ್ರಮವಾಗಿದೆ. ನಮ್ಮನೆಲ್ಲ ಒಂದುಗೂಡಿಸಿದ ಎಲ್ಲ ವಿದ್ಯಾರ್ಥಿ ಬಳಗಕ್ಕೆ ಅಭಿನಂದನೆ ಸಲ್ಲಿಸಿದರು. ಎಲ್ಲ ವಿದ್ಯಾರ್ಥಿನಿಯರು ಬಹಳ ವರ್ಷಗಳ ನಂತರ ಒಟ್ಟಗೆ ಸೇರಿದ್ದಕ್ಕೆ ಅತೀವ ಹರ್ಷ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಸುಜಾತಾ ಹುಗ್ಗಿ ಮತ್ತು ರೇಣುಕಾ ಕೊಣ್ಣುರ ವಹಿಸಿಕೊಂಡಿದ್ದರು.