ಲೋಕದರ್ಶನ ವರದಿ
ಮೂಡಲಗಿ 19: ಸಕ್ಕರೆ ಕಾಖರ್ಾನೆಗಳು ಪ್ರಸಕ್ತ ಹಂಗಾಮನ್ನು ಪ್ರಾರಂಭಿಸಿವೆ ಇದರಿಂದ ರೈತರು ಸಹನೆ ಕಳೆದುಕೊಳ್ಳುವಂತಾಗಿದೆ ಅನೇಕ ದಿನಗಳಿಂದ ರೈತರ ಬೇಡಿಕೆ ಈಡೇರಿಕೆಗೆ ಕಾಖರ್ಾನೆಯವರು ಸ್ಪಂದಿಸುತ್ತಿಲ್ಲಾ. ಶೀಘ್ರವೇ ಕಬ್ಬಿನ ಬಾಕಿ ಹಣ ಪಾವತಿಸಬೇಕು ಹಾಗೂ ಪ್ರಸಕ್ತ ಸಾಲಿನಲ್ಲಿ ದರ ನೀಡಬೇಕು ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಕಾಖರ್ಾನೆಯವರು ಹಾಗೂ ಸರಕಾರವೇ ನೇರ ಹೋಣೆಯಾಗುತ್ತದೆ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಎಲ್.ಹುಣಶ್ಯಾಳ ಎಚ್ಚರಿಸಿದರು.
ಅವರು ಸ್ಥಳೀಯ ದಿವಾಣಿ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ಕಬ್ಬು ಬೆಳೆಗಾರರಿಗೆ ಬೆಂಬಲ ಸೂಚಿಸಿ ನ್ಯಾಯಾಲಯದ ಕೋರ್ಟ ಕಲಾಪಗಳಿಂದ ನ್ಯಾಯವಾದಿಗಳು ಹೊರಗುಳಿದು ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ತೀವ್ರಗೊಂಡಿದೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರೊಂದಿಗೆ ನಡೆಸಲು ಉದ್ದೇಶಿಸಿದ ಸಭೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರದ್ದುಪಡಿಸಿ ಬೆಂಗಳೂರಿಗೆ ವಗರ್ಾಯಿಸಿದನ್ನು ವಿರೋಧಿಸಿ ಬಾಕಿ ಪಾವತಿ ಹಾಗೂ ದರ ನಿಗದಿಯನ್ನು ಒತ್ತಾಯಿಸಿ ನ್ಯಾಯವಾದಿಗಳು ಪ್ರತಿಭಟಿಸಿದರು.
ಹಿರಿಯ ನ್ಯಾಯವಾದಿ ಎ.ಕೆ.ಮದಗನ್ನವರ ಮಾತನಾಡುತ್ತಾ ಕಳೆದ ಇಪ್ಪತ್ತು ದಿನಗಳಿಂದ ಕಬ್ಬಿನ ದರಕ್ಕಾಗಿ ರೈತರು ಹೋರಾಟ ಪ್ರಾರಂಭಿಸಿದ್ದಾರೆ. ರೈತರ ಬೇಡಿಕೆಗಳಿಗೆ ಯಾವುದೇ ಕಾಖರ್ಾನೆಗಳು ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳು ರೈತರನ್ನು ಭೇಟಿಯಾಗುವ ಸೌಜನ್ಯತೆ ತೋರುತ್ತಿಲ್ಲಾ ಇದು ದುದರ್ೈವ ಈಗಲೂ ಕಾಲ ಮಿಂಚಿಲ್ಲಾ ರೈತರು ಮತ್ತು ಕಾಖರ್ಾನೆಗಳ ಸಮಸ್ಯೆಗಳಿಗೆ ಮಧ್ಯಸ್ಥಿಗಳಾಗಿ ಜನಪ್ರತಿನಿದಿಗಳು ಸ್ಪಂದಿಸಿರಿ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಆಯ್.ಎಮ್.ಹಿರೇಮಠ ಸಹ ಕಾರ್ಯದಶರ್ಿ ಬಿ.ವಾಯ್.ಹೆಬ್ಬಾಳ, ಆರ್.ಎಮ್.ಐಹೊಳೆ, ಖಜಾಂಚಿ ಎ.ಎಸ್.ಕೌಜಲಗಿ, ಹಿರಿಯ ನ್ಯಾಯವಾದಿಗಳಾದ ಯು.ಆರ್.ಜೋಕಿ, ಎಲ್.ವಾಯ್.ಅಡಿಹುಡಿ, ವಿ.ವಿ.ನಾಯಿಕ, ಎಸ್.ಎಲ್.ಪಾಟೀಲ, ಎಲ್.ಬಿ.ವಡೇರ, ಎಮ್.ಆಯ್.ಬಡಿಗೇರ, ಎಸ್.ವಾಯ್.ಹೊಸಟ್ಟಿ, ವ್ಹಿ.ಸಿ.ಗಾಡವಿ, ಎಮ್.ಎಲ್.ಸವಸುದ್ದಿ, ಪಿ.ಎಸ್.ಮಲ್ಲಾಪೂರ, ಆರ್.ಬಿ.ಮಮದಾಪೂರ ಡಿ.ಎಸ್.ರೊಡ್ಡನ್ನವರ ವ್ಹಿ.ಕೆ.ಪಾಟೀಲ, ಪಿ.ಎಲ್.ಮನ್ನಿಕೇರಿ, ವಾಯ್.ಎಸ್.ಖಾನಟ್ಟಿ, ಆರ್ ವಾಯ್.ಶಾಬನ್ನವರ, ಎಸ್.ತೋಳಮಡರ್ಿ, ಆರ್.ಬಿ.ಕುಳ್ಳೂರ, ಹಾಗೂ ಇನ್ನುಳಿದ ನ್ಯಾಯವಾದಿಗಳು ಭಾಗವಹಿಸಿ ಪ್ರತಿಭಟಿಸಿದರು.