ಆರೋಗ್ಯ ಮತ್ತು ಬೆಳೆಗಳ ಮೇಲೆ, ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ : ಟಿ. ರಘುನಂದನಮೂರ್ತಿ
ಆರೋಗ್ಯ ಮತ್ತು ಬೆಳೆಗಳ ಮೇಲೆ, ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ : ಟಿ. ರಘುನಂದನಮೂರ್ತಿ
ರಾಣೇಬೆನ್ನೂರು 21: ಹನುಮನಹಳ್ಳಿ ಹತ್ತಿರ ಬೃಹದಾಕಾರವಾಗಿ ನಿರ್ಮಾಣವಾಗಿದ್ದ ಗ್ರೀನ್ ಎನರ್ಜಿ ಬಯೋ ರಿಫನ್ ರೈಜ್ ಎಥನಾಲ್ ಫ್ಯಾಕ್ಟರಿ (ಪೆಟ್ರೋಲಿಯಂ ಉತ್ಪನ್ನ) ಪ್ರಾರಂಭವಾಗಿ ಕೆಲವೆ ತಿಂಗಳ ಒಳಗಾಗಿ ಸ್ಥಳೀಯ ನಿವಾಸಿಗಳ ಭಾರಿ ವಿರೋಧ ಫ್ಯಾಕ್ಟರಿ ಹೊರ ಸೂಸುವ ಕಲ್ಮಶವಾದ ನೀರು, ಗಾಳಿಯನ್ನು ಹೊರಸೂಸುತ್ತದೆ ಎಂದು ಆರೋಗ್ಯ ಮತ್ತು ಬೆಳೆಗಳ ಮೇಲೆ, ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಭಾರಿ ವಿರೋಧ ಮಾಡಿದ ಹಿನ್ನೆಲೆಯಲ್ಲಿ ಕಳೆದ ಮೇ 18 ರಂದು ಈ ಹಿಂದೆ ಆಗಿನ ಜಿಲ್ಲಾಧಿಕಾರಿ ಟಿ. ರಘುನಂದನಮೂರ್ತಿ ಕಂಪನಿಗೆ ದಾವಿಸಿ ಎಥನಾಲ್ ಕಂಪನಿಗೆ ಬೀಗ ಜಡಿದು ಹೋಗಿದ್ದ್ದರು.
ಸ್ಥಳೀಯ ರೇಷ್ಮೆ ಬೆಳಗಾರರು, ಅಡಿಕೆ ಬೆಳೆಗಾರರು, ತರಕಾರಿ ಬೆಳೆಗಾರರು ತಮ್ಮ ಬೆಳೆಗಳ ಮೇಲೆ ಅರ್ಧ ಇಂಚು ಎಥನಾಲ್ ಕಂಪನಿ ಹೊರಸೂಸುವ ಬೂದಿ ಬೆಳೆಗಳ ಮೇಲೆ ಆವರಿಸುತ್ತದೆ ಎಂದು ಆರೋಪ ಮಾಡಿದರೆ, ಸ್ಥಳೀಯ ನಿವಾಸಿಗಳು ಕಂಪನಿಯ ಕರ್ಕಶವಾದ ಶಬ್ದದಿಂದ ನಿದ್ದೆ ಬರುತ್ತಿಲ್ಲ ಶಬ್ದ ಮಾಲಿನ್ಯವಾಗುತ್ತದೆ, ವಾಯು ಮಾಲಿನ್ಯವಾಗುತ್ತದೆ. ನಮ್ಮ ಆರೋಗ್ಯ ಹಾಳಾಗುತ್ತದೆ ಎಂದರಲ್ಲದೆ ತುಂಗಭದ್ರ ನದಿಪಾತ್ರದ ಜನರು ನದಿ ನೀರು ಕಲ್ಮಶವಾಗುತ್ತದೆ ಅಂತಾ ಆರೋಪಮಾಡಿ ಕಂಪನಿ ಶಾಶ್ವತ ಬಂದ್ಗೆ ಪಟ್ಟುಹಿಡಿದಿದ್ದಾರೆ. ಇಂಥ ಸಂದರ್ಭದಲ್ಲಿ ಮತ್ತೆ ಕಂಪನಿಯ ಆಡಳಿತ ಮಂಡಳಿ ಸದ್ದಿಲ್ಲದೆ ಕಾರ್ಯ ಪ್ರಾರಂಭ ಮಾಡುತ್ತಿರುವುದು ಸ್ಥಳೀಯರನ್ನು ನಿದ್ದೆಗೆಡಿಸಿದೆ. ಪ್ರಾರಂಭದಲ್ಲಿ ಕಂಪನಿಯರುವ ಕಂಪನಿಗೆ ವಿರೋಧಿ ಮಾಡುತ್ತಿದ್ದ ರೈತರಿಗೆ, ಸ್ಥಳೀಯ ನಿರುದ್ಯೋಗಿಗಳಿಗೆ ನಾವು ಕಂಪನಿಗೆ ಬೇಕಾದ ಖಚ್ಚಾ ವಸ್ತುವಾಗಿ ಮೆಕ್ಕೆಜೋಳವನ್ನು ಹೇರಳವಾಗಿ ಈ ಭಾಗದ ರೈತರಿಂದ ಯಾವುದೇ ಕಮೀಶನ್ ಇಲ್ಲದೆ ಸರಕಾರದ ಬೆಂಬಲ ಬೆಲೆಗಿಂತ ಹೆಚ್ಚಿನ ದರಕ್ಕೆ ಖರೀದಿಸಿ ನೇರವಾಗಿ ರೈತರ ಖಾತೆ ಹಣ ಜಮಾ ಮಾಡುತ್ತೇವೆ ಅಂತಾ ರೈತರಲ್ಲಿ ಭರವಸೆ ಮೂಡಿಸಿದರೆ ಸ್ಥಳೀಯ ನಿರುದ್ಯೋಗಿ ಪದವಿಧರರಿಗೆ ಉದ್ಯೋಗ ಸೃಷ್ಟಿಯ ಆಸೆ ತೋರಿಸಿ ಭಾರಿ ವಿರೋಧವನ್ನು ತಕ್ಕ ಮಟ್ಟಿಗೆ ಶಾಂತಗೊಳಿಸಿದ್ದರು. ಈಗ ನೋಡಿದರೆ ಕಳೆದ 8-10 ದಿನಗಳಿಂದ ಮತ್ತೆ ಎಥನಾಲ್ ಕಂಪನಿ ಕಾರ್ಯಾರಂಭ ಮಾಡಿಸಲು ಅದಕ್ಕೆ ಬೇಕಾಗುವ ಖಚ್ಚಾ ಪದಾರ್ಥಗಳಲ್ಲಿ ಒಂದಾದ ಮೆಕ್ಕೆಜೋಳವನ್ನು ಭಾರಿ ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದು ಇದರ ಲಾಭವನ್ನು ಸ್ಥಳೀಯ ತಾಲೂಕಿನ, ಜಿಲ್ಲೆಯ ರೈತರು ಪಡೆದುಕೊಳ್ಳಬೇಕಾಗಿತ್ತು. ಅದರ ಬದಲಾಗಿ ದಲಾಲರು, ಖರೀದಿದಾರರು ಲಾಭ ಪಡೆದುಕೊಳ್ಳುತ್ತಿದ್ದಾರೆ. ಅತ್ತ ಎ.ಪಿ.ಎಂ.ಸಿ ಯಲ್ಲಿ ರೈತರಿಗೆ ದಲಾಲರಿಂದ, ಖರೀದಿದಾರರಿಂದ ವಂಚನೆ ಒಂದು ಕಡೆಯಾದರೆ ಇತ್ತ ಕಂಪನಿಯಿಂದಲೂ ಕೂಡ ಮ್ಯಾಚ್ ಫಿಕ್ಸಿಂಗ್ ರೀತಿಯಲ್ಲಿ ವಂಚನೆಯಾಗುತ್ತಿದೆ. ಒಂದರ್ಥದಲ್ಲಿ ಅಂತು ಇಂತು ಕುಂತಿಪುತ್ರರಿಗೆ ರಾಜ್ಯವಿಲ್ಲ ಎನ್ನುವ ಪರಿಸ್ಥಿತಿ ರೈತರದ್ದಾಗಿದೆ. ಸರ್ಕಾರ ಮತ್ತು ಬೆಳೆವಿಮೆ ಇನ್ಸೂರನ್ಸ್ ಕಂಪನಿಯಿಂದ ರೈತರಿಗೆ ಒಂದು ಕಡೆ ವಂಚನೆಯಾಗುತ್ತಿದ್ದರೆ ಇನ್ನೊಂದು ಕಡೆ ಕಾರ್ಖಾನೆಗಳಿಂದಲೂ ಕೂಡ ವಂಚನೆಯಾಗುತ್ತಿರುವುದು ದುರ್ದೈವದ ಸಂಗತಿ ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ರೈತರ ನಿಯೋಗ ರೈತ ಮುಖಂಡರಾದ ರವೀಂದ್ರಗೌಡ ಎಫ್. ಪಾಟೀಲರ ನೇತೃತ್ವದಲ್ಲಿ ನೂರಾರು ಪ್ರಗತಿಪರ ರೈತರೊಂದಿಗೆ, ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಇಂದು ಹಾವೇರಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿ ನ್ಯಾಯ ದೊರಕಿಸಿಕೊಡುವಂತೆ ಹಾಗೂ ರೈತಾಪಿ ವರ್ಗಕ್ಕೆ ದ್ರೋಹ ಎಸಗುವು ತಪ್ಪಿತಸ್ಥರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಲಾಗುವುದೆಂದು ಪ್ರಗತಿಪರ ರೈತರಾದ ಯಶವಂತಗೌಡ ಪಾಟೀಲ, ಪರ್ವತಗೌಡ ಕುಸಗೂರು, ಶ್ರೀನಿವಾಸರಡ್ಡಿ ಕೆಂಚರೆಡ್ಡಿ, ನಾಗಪ್ಪ ರಾಮಾಳದ, ಬಸನಗೌಡ ಒದೇಗೌಡ್ರ ತಿಳಿಸಿದ್ದಾರೆ.