ಅಧಿಕಾರಿಗಳ ಆಡಳಿತ.. ಅಭಿವೃದ್ದಿ ಕುಂಠಿತ..

- ಸುಧೀರ ನಾಯರ್

ಮೂಡಲಗಿ 05: ಪುರಸಭೆ ಚುನಾವಣೆ ಮುಗಿದು ಏರಡು ವರ್ಷ ಸಮೀಪಿಸುತ್ತಿದ್ದರೂ ಇಲ್ಲಿನ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗದೇ ಮುಖ್ಯಾಧಿಕಾರಿಗಳ ಆಡಳಿತದಿಂದ ಅಭಿವೃದ್ದಿಗೆ ಅಡ್ಡಿಯಾಗುವ ಮೂಲಕ ಪಟ್ಟಣದ ಪ್ರಗತಿ  ಕುಂಠಿತಗೊಂಡಿದೆ. ಅಧ್ಯಕ್ಷ ಉಪಾಧ್ಯಕ್ಷರಿಲ್ಲದೇ ಯಾವ ಕೆಲಸಕ್ಕೆ ಎಷ್ಟು ಹಣ ಮತ್ತು ಯಾವ ವಾರ್ಡಗೆ ಎಷ್ಟು ಹಣ ಮಿಸಲಿಡಬೇಕು ಎಂಬ ಗೊಂದಲ ಅಧಿಕಾರಿಗಳನ್ನು ಕಾಡುತ್ತಿದೆ. 

   ಒಂದು ವರ್ಷದಿಂದ ಪುರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೇ  ಬಿಕೋ ಎನ್ನುತ್ತಿದೆ. 2019ರ ಮೇ 8ರಂದು ಮೊದಲ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಬೇಕಾಗಿತ್ತು ಈಗ ಒಂದು ವರ್ಷ ಆಗುತ್ತಾ ಬಂದಿದೆ ಐದು ವರ್ಷದ ಅಧಿಕಾರವನ್ನು ಎರಡುವರೇ ವರ್ಷಕ್ಕಾಗಿ ಹಂಚಿಕೆ ಮಾಡಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯುತ್ತದೆ ಈಗ ಪ್ರತಿಯೊಬ್ಬರ ಅವಧಿ ಈಗಲೇ ಚುನಾವಣೆಯಾದರೆ ಎರಡು ವರ್ಷಕ್ಕೆ ಮುಗಿಸುವ ಅನಿವಾರ್ಯತೆ ಬರುತ್ತದೆ ಅದಲ್ಲದೇ ಅತಂತ್ರ ಪರಸಭೆ ನಿಮರ್ಾಣವಾಗಿದೆ. ಮೂಡಲಗಿ ಪುರಸಭೆಯ ಒಟ್ಟು 23 ವಾಡರ್್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 15 ಜೆಡಿಎಸ್8 ಅಭ್ಯಥರ್ಿಗಳು ಆಯ್ಕೆಯಾಗಿದ್ದರು. ಆದರೆ ಪುರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರು ಇಲ್ಲದೆ ಪಟ್ಟಣದ ಪ್ರಗತಿ ಕುಂಠಿತಗೊಂಡಿರುವುದರೊಂದಿಗೆ ಸರಕಾರದಿಂದ ವಿಶೇಷ ಅನುದಾನ ತರಲು ಯಾರು ಇಲ್ಲದಂತಾಗಿದೆ. 

   10 ತಿಂಗಳಿಂದ ಅಧ್ಯಕ್ಷ ಉಪಾಧ್ಯಕ್ಷರಿಲ್ಲದೇ ಪುರಸಭೆ ಸರಕಾರ ಯಾವಾಗ ಮೀಸಲಾತಿ ಹೊರಡಿಸುತ್ತದೆ ಎಂದು ಆಕಾಂಕ್ಷಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಹಿಂದೆ ಪ್ರಕಟಿಸಿದ್ದ ಮೀಸಲಾತಿ ಸಮರ್ಪಕವಾಗಿಲ್ಲ ಎಂದು ರಾಜ್ಯದ ಕೆಲವೆಡೆ ಕೋರ್ಟ ಮೆಟ್ಟಿಲೇರಿದ್ದರಿಂದ ಪ್ರಕ್ರಿಯೆ ತಡವಾಗಿದೆ. ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೇ ಯಾವ ಪುರಸಭೆಗೆ ಯಾವ ಮಿಸಲಾತಿ ಕೊಡಬೇಕೆಂಬುದನ್ನು ಪರಿಗಣಿಸಿ ಪ್ರಕಟಿಸಬೇಕೆಂದು ಸರಕಾರಕ್ಕೆ ಕೋಟರ್್ ನಿದರ್ೇಶನ ನೀಡಿದ್ದರೂ ಸಹ ಇಲ್ಲಿ ತನಕ ಕೆಲಸ ಕಾರ್ಯಗಳು ಆಗಿಲ್ಲ. ಸರಕಾರ ಮೀಸಲಾತಿ ಪ್ರಕಟಿಸಲು ಮೀನಮೇಷ ಎಣಿಸುತ್ತದೆ ಎಂಬುದು ಸದಸ್ಯರ ಆರೋಪ. ಪುರಸಭೆ ಸದಸ್ಯರ ಅವಧಿ ಈಗಾಗಲೇ ಕೇವಲ 4 ವರ್ಷ ಉಳಿದಿದ್ದು ಇದ್ದ ಕಡಿಮೆ ಅವಧಿಗಾದರೂ ಅಧ್ಯಕ್ಷ ಉಪಾಧ್ಯಕ್ಷರಾಗಬೇಕೆಂದು ಅನೇಕ ಸದಸ್ಯರು ಕಾದು ಕುಳಿತಿದ್ದಾರೆ. ಮೊದಲ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಎರಡುವರೆ ವರ್ಷದ ಅವಧಿ ಈಗಾಗಲೇ ಒಂದು ವರ್ಷ ಮುಗಿದಿದ್ದು ಉಳಿದ ಒಂದುವರೆ ವರ್ಷದ ಅಧಿಕಾರಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟಗೊಳ್ಳದಿರುವುದು ಆಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿದೆ.

  ಈ ಹಿಂದೆ ಇದೇ ಹುದ್ದೆಗೆ ಎರಡುವರೇ ವರ್ಷದ ಅವಧಿಗೆ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಮೀಸಲಾಗಿತ್ತು ಆದರೆ ವಿವಾದ ಕೋಟರ್್ ಮೆಟ್ಟಲೇರಿದ್ದರಿಂದ ಇಲ್ಲಿಯೂ ತಡೆಯಾಜ್ಞೆಯಿದೆ. ಪರಸಭೆಗೆ ಈಗಾಗಲೇ ಪ್ರಕಟಗೊಂಡ ಮೀಸಲಾತಿ ಮುಂದುವರೆಯುತ್ತಿದೆಯೋ ಅಥವಾ ಹೊಸ ಮೀಸಲಾತಿ ಬರುತ್ತದೆಯೋ ಎಂದು ಸದಸ್ಯರಲ್ಲಿ ಆತಂಕ ಶುರುವಾಗಿದೆ. ಸಕರ್ಾರ ಅದಷ್ಟು ಬೇಗ ಇದಕ್ಕೆ ಪರಿಹಾರ ಸೂಚಿಸಲಿ ಎನ್ನುವುದೇ ಸಾರ್ವಜನಿಕರ ಆಶಾಭಾವನೆಯಾಗಿದೆ.