ಹಾಲಪ್ಪ ಆಚಾರಗೆ ಮಂತ್ರಿ ಸ್ಥಾನ ನೀಡಲು ಅಳವಂಡಿ ಒತ್ತಾಯ

ಲೋಕದರ್ಶನ ವರದಿ 

ಕೊಪ್ಪಳ 06: ಕೊಪ್ಪಳ ಜಿಲ್ಲೆಯ ಯಲಬುಗರ್ಾ ವಿಧಾನಸಭೆ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸಕರ್ಾರದಲ್ಲಿ ಸಚಿವ ಸ್ಥಾನ ನೀಡಿ ಹಿಂದುಳಿದ ನಮ್ಮ ಈ ಭಾಗ ಹೆಚ್ಚು ಅನುಕೂಲ ಒದಗಿಸಿ ಕೊಡುವಂತೆ ಬಿಜೆಪಿ ಪಕ್ಷದ ಹಿರಿಯ ಮುಖಂಡ ಎಂ.ಬಿ.ಅಳವಂಡಿ ಕೇಂದ್ರ ಸಕರ್ಾರಕ್ಕೆ ಒತ್ತಾಯಿಸಿದ್ದಾರೆ. 

ಈ ಕುರಿತು ಹೇಳಿಕೆ ನೀಡದ ಅವರು ಹಾಲಪ್ಪ ಆಚಾರ ಅವರು ಪಧವಿದರರಾಗಿದ್ದು ಈ ಹಿಂದೆ ವಿಧಾನ ಪರಿಷತ್ತಿನ ಸದಸ್ಯರಾಗಿ ಉಭಯ ರಾಯಚೂರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಒಳ್ಳಯ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿ ಶ್ರಮಿಸಿದವರಾಗಿದ್ದಾರೆ. ಅಲ್ಲದೇ ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷ ಹಾಗೂ ಪಕ್ಷ ರಾಜ್ಯ ಉಪಾಧ್ಯಕ್ಷರಾಗಿಯು ಸಹ ಕೆಲಸ ಮಾಡಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಶ್ರಮಿಸಿದವರಾಗಿದ್ಧಾರೆ. ಸಹಕಾರ ಕ್ಷೇತ್ರದಲ್ಲಯೂ ಸಹ ಉತ್ತಮ ಅಭಿವೃದ್ಧಿ ಕೆಲಸ ಮಾಡುವದರ ಮೂಲಕ ಗಮನ ಸೆಳೆದಿರುವ ಇವರು. ಜಿಲ್ಲೆಯ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಕೃಷ್ಣಾ ಬಿ ಸ್ಕಂ ಯೋಜನೆಗಳ ಅನುಷ್ಠಾನಕ್ಕೆ ಪ್ರಮಾಣಿಕ ಪ್ರಯತ್ನ ಮಾಡಿದ ಇವರು ಜಿಲ್ಲೆಯ ಜನರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸುತ್ತಾ ಬಂದಿರುವ ಇವರು ಜನರ ಸಮಸ್ಯಗಳಿಗೆ ನೇರ ಸ್ಪಂದನೆ ಜಿಲ್ಲೆಯ ಸಾಮಾನ್ಯ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಇಂತಹ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಸವರ್ಾಂಗೀನ ಅಭಿವೃದ್ಧಿಗೆ ಸಾಧ್ಯವಾಗಿದೆ. ಕಾರಣ ರಾಜ್ಯದಲ್ಲಿನ ಬಿಜೆಪಿ ಸಕರ್ಾರದಲ್ಲಿ ಕಾರ್ಯನಿರ್ವಹಿಸುತ್ತರುವ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಹಾಲಪ್ಪ ಆಚಾರ ಅವರಿಗೆ ಸಚಿವ ಸ್ಥಾನ ನೀಡಬೇಕೆಂದ ಬಿಜೆಪಿ ಪಕ್ಷದ ಹಿರಿಯ ಮುಖಂಡ ಎಂ.ಬಿ.ಅಳವಂಡಿ ಕೇಂದ್ರ ಸಕರ್ಾರಕ್ಕೆ ಒತ್ತಾಯಿಸಿದ್ದಾರೆ.