ನಾಡನುಡಿ, ಭಾಷೆ, ಜಲ ರಕ್ಷಣೆಗೆ ಬದ್ಧರಾಗಿ: ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಪಾಟೀಲ್

ಲೋಕದರ್ಶನ ವರದಿ

ಯಲಬುರ್ಗಾ 21: ಇಂದು ನಾಡಿನ ಜಲ, ಭಾಷೆ, ನಾಡು ನುಡಿ ವಿಷಯದಲ್ಲಿ ಕನ್ನಡ ಪರ ಸಂಘಟನೆಗಳು ಪ್ರಾಮಾಣಿಕವಾಗಿ ಬದ್ಧತೆಯನ್ನು ತೋರಿ ಕರ್ನಾಟಕ  ರಾಜ್ಯದಲ್ಲಿ ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯ ವಿರುದ್ಧ ಕನ್ನಡಪರ ಸಂಘಟನೆಗಳ ಎಲ್ಲಾ ಮುಖಂಡರು ತಮ್ಮಲ್ಲಿರುವ ಭಿನ್ನಾಭಿಪ್ರಾಯ ಮರೆತು ಮುಂಬರುವ ದಿನಮಾನಗಳಲ್ಲಿ ಒಂದಾಗಿ ರಾಜ್ಯಕ್ಕೆ ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವ ಅವಶ್ಯಕತೆ ಇದೆ ಎಂದು ಕರ್ನಾಟಕ ಜನಕಲ್ಯಾಣ ವೇದಿಕೆಯ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಸ.ಶರಣಪ್ಪ ಪಾಟೀಲ್, ಕರಮುಡಿ ಅಭಿಪ್ರಾಯಪಟ್ಟರು.

    ಅವರು ತಾಲೂಕಿನ ಭೂನಕೊಪ್ಪ ಗ್ರಾಮದಲ್ಲಿ ಕ.ರ.ವೇ. ಯುವಸೇನೆ ಗ್ರಾಮ ಘಟಕ ಉದ್ಘಾಟಿಸಿ, ಮಾತನಾಡಿದರು. ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿ ಮಾತನಾಡಿ ಕನ್ನಡ ಭಾಷೆ ಪ್ರಾಚೀನವಾದ ಐತಿಹಾಸಿಕ ಹಿನ್ನೆಲೆಯುಳ್ಳ ಭಾಷೆಯಾಗಿದೆ. ಆದರೆ ಇಂದು ನಮ್ಮ ಜನತೆ ಮಾತೃ ಭಾಷೆಯನ್ನು ಮರೆತು ಬೇರೆ ಭಾಷೆಯ ಗುಲಾಮರಾಗುತ್ತಿರುವುದ ವಿಷಾಧಕರ ಸಂಗತಿ. ಈ ನಿಟ್ಟಿನಲ್ಲಿ ನಮ್ಮ ಕ.ರ.ವೇ. ಮುಂಬರುವ ದಿನಮಾನಗಳಲ್ಲಿ ಕನ್ನಡ ಭಾಷಾ ಜಾಗೃತಿಗಾಗಿ ಹಲವಾರು ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಈ ಸಂದರ್ಭದಲ್ಲಿ ಕ.ಜ.ವೇ. ರಾಜ್ಯ ಪ್ರಧಾನ ಕಾರ್ಯದಶರ್ಿ ಶರಣಬಸಪ್ಪ ದಾನಕೈ, ತಾಲೂಕಾ ಅಧ್ಯಕ್ಷ ಶಿವಕುಮಾರ ನಾಗನಗೌಡ, ಪ್ರಧಾನ ಕಾರ್ಯದರ್ಶಿ  ಶಿವಕುಮಾರ ನಿಡುಗುಂದಿ, ಜಗದೀಶ ಪೋಪಾ, ಹನಮಗೌಡ ಉಪ್ಪಲದಿನ್ನಿ, ಮಲ್ಲಪ್ಪ ಕುರಿ, ಗಣೇಶ ಚನ್ನದಾಸರ, ಅಶೋಕ ಕುರಿ, ಶಿವಕುಮಾರ ಕರಮುಡಿ, ಶರಣಪ್ಪ ಬಳಿಗಾರ, ಶರಣಪ್ಪ ತಳವಾರ ಇನ್ನಿತರರು ಉಪಸ್ಥಿತರಿದ್ದರು.