ಲೋಕದರ್ಶನ ವರದಿ
ಬೆಳಗಾವಿ, 20: ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯವು (ಸ್ವಾಯತ್ತ) ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಒಂದು ವಿಶಿಷ್ಟ ಪರಂಪರೆಯನ್ನು ಹೊಂದಿದೆ. ಈ ಸತ್ ಪರಂಪರೆಯ ಹಾದಿಯಲ್ಲಿ ನಮ್ಮ ಮಹಾವಿದ್ಯಾಲಯದ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.
ಮೂವತ್ತು ದಿನಗಳ ಅತ್ಯಂತ ಜಟಿಲ ಹಾಗೂ ಸ್ಪಧರ್ಾತ್ಮಕ ಆಯ್ಕೆ ಪ್ರಕ್ರಿಯೆಯ ಮೂಲಕ ಕನರ್ಾಟಕ ಮತ್ತು ಗೋವಾ ಎನ್.ಸಿ.ಸಿ. ನಿದರ್ೆಶನಾಲಯದಿಂದ 42 ಕೆಡೆಟ್ಸ್ಗಳಲ್ಲಿ ನಮ್ಮ ಮಹಾವಿದ್ಯಾಲಯದ 03 ಕೆಡೆಟ್ಸ್ಗಳು ದಿನಾಂಕ 24-10-2018 ರಿಂದ 02-11-2018ರ ವರೆಗೆ ರಾಜಸ್ಥಾನದ ಜೋಧಪುರದಲ್ಲಿ ಜರುಗಿದ ಅತ್ಯಂತ ಪ್ರತಿಷ್ಠಿತ "ರಾಷ್ಟ್ರಮಟ್ಟದ ಅಖಿಲ ಭಾರತ ವಾಯು ಸೈನಿಕ ಶಿಬಿರ"ಕ್ಕೆ ಆಯ್ಕೆಯಾಗಿ ಪಾಲ್ಗೊಂಡಿದ್ದಾರೆ.
ವಿದ್ಯಾಥರ್ಿಗಳಾದ ಕೆಡೆಟ್ ಅಕ್ಷಯ ಬಕೇಡಿ ಬಿ.ಎಸ್ಸಿ-2 ಈತನು ಸ್ಟ್ಯಾಟಿಕ್ ಏರೋ ಮಾಡಲಿಂಗ್ ವಿಭಾಗದಲ್ಲಿ ರಜತ ಪದಕ ಪಡೆದುಕೊಂಡಿದ್ದಾನೆ ಹಾಗೂ ಕೆಡೆಟ್ ರಶ್ಮಿ ಸಲೋಟಗಿ ಬಿ.ಎಸ್ಸಿ.-3 ಮತ್ತು ವಿವೇಕ ಧಿಮನ್ ಬಿ.ಎಸ್ಸಿ-2 ಇವರುಗಳು ಭಾಗವಹಿಸಿ ಮಹಾವಿದ್ಯಾಲಯಕ್ಕೆ ಕೀತರ್ಿತಂದಿದ್ದಾರೆ.
ವಿದ್ಯಾಥರ್ಿಗಳ ಎನ್.ಸಿ.ಸಿ. ಸಾಧನೆಗೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಸ್.ಜಿ. ನಂಜಪ್ಪನವರ ಉಭಯ ಮಹಾವಿದ್ಯಾಲಯಗಳ ಬೋಧಕ-ಬೋಧಕೇತರ ಸಿಬ್ಬಂದಿವರ್ಗದವರು ಹಾಗೂ ವಿದ್ಯಾಥರ್ಿ ವೃಂದವರು ಅಭಿನಂದನೆ ಸಲ್ಲಿಸಿದ್ದಾರೆ.