ನಟ ವಿಶ್ವಪ್ರಕಾಶ ಮಲಗೊಂಡಗೆ ಅಚಿವರ್ ಆಫ್ ಸಿಂದಗಿ ಪ್ರಶಸ್ತಿ
ವಿಜಯಪುರ 17: ಸ್ನೇಹ ಸಂಗಮ ಶಿಕ್ಷಣ ಸಂಸ್ಥೆ ಆಯೋಜಿಸಿರುವ ಲಿಟಲ್ ವಿಂಗ್ಸ್ ಫೆಸ್ಟೆವಲ್ ನಲ್ಲಿ ವಿಜಯಪುರದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಅಚಿವರ್ ಆಫ್ ಸಿಂದಗಿ ಪ್ರಶಸ್ತಿ ನೀಡಲಾಯಿತು.
ಶನಿವಾರ ಸಂಜೆ ಪಟ್ಟಣದ ಮಾಂಗಲ್ಯ ಭವನದಲ್ಲಿ ಜರುಗಿದ ಲಿಟಲ್ ವಿಂಗ್ಸ್ ಫೆಸ್ಟೆವಲ್ ನಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆಗೈದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಕೆಪಿಸಿಸಿ ವಕ್ತಾರ ಎಸ್ ಎಮ್ ಪಾಟೀಲ ಗಣಿಹಾರ, ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗ ಚೌಧರಿ, ಮಾಜಿ ಸಚಿವ ದಿ.ಎಮ್ ಸಿ ಮನಗೂಳಿ ಅವರ ಮೊಮ್ಮಗ ಮಾಂತೇಶ ಅರವಿಂದ ಮನಗೂಳಿ ಪ್ರಶಸ್ತಿ ಪ್ರದಾನ ಮಾಡಿದರು.
ಫೆಸ್ಟಿವಲ್‌ನಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾ ಜೀ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಅಶೋಕ ವಾರದ, ಬಿಜೆಪಿ ಧುರೀಣ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಡಾ.ಪ್ರಭುಗೌಡ ಪಾಟೀಲ ಲಿಂಗದಲ್ಲಿ, ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ, ಡಾ.ಹಬೀಬ ನಾಗರಲ್ಲಿ, ಸ್ನೇಹ ಸಂಗಮ ವಿದ್ಯಾ ಸಂಸ್ಥೆ ಅಧ್ಯಕ್ಷ ಅಭಿಷೇಕ ಸಿದ್ದಲಿಂಗ ಚೌಧರಿ, ಪ್ರವೀಣ ಕಂಠಿಗೊಂಡ, ಉಪನ್ಯಾಸಕ ಸಿದ್ದಲಿಂಗ ಕಿಣಗಿ, ಶಿಲ್ಪಾ ಕುದರಗೊಂಡ, ಭಾರತಿ ಚೌಧರಿ, ಕಾವೇರಿ ಮಲ್ಲೇವಾಡಿ ಉಪಸ್ಥಿತರಿದ್ದರು.