ಕಲಬುರಗಿ ಮಾಧ್ಯಮ ಹಬ್ಬದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಾಧನೆ

Achievement of journalism students in Kalaburagi media festival

ಕಲಬುರಗಿ ಮಾಧ್ಯಮ ಹಬ್ಬದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಾಧನೆ

ಬಾಗಲಕೋಟೆ 19 : ಕಲಬುರಗಿ ಶರಣಬಸವ ವಿವಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಮಾಧ್ಯಮ ಹಬ್ಬದಲ್ಲಿ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ವತಿಯಿಂದ ಕಲ್ಯಾಣ ಕರ್ನಾಟಕ ಮಾಧ್ಯಮ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಒಟ್ಟು 8 ವಿಶ್ವವಿದ್ಯಾಲಯ ಮತ್ತು ಒಂದು ಪದವಿ ಮಹಾವಿದ್ಯಾಲಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಸ್ಪರ್ಧೆಯಲ್ಲಿ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಗಂಗಾ ಅಮಾತೆಪ್ಪನವರ, ಸುಪ್ರಿತಾ ಗಾಳಿ, ಗೋವಿಂದಗೌಡ ಪಾಟೀಲ ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಶ್ವನಾಥ ಹಿರೇಮಠ ಫೋಟೋಗ್ರಫಿ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ರೇಡಿಯೋ ಜಾಕಿಯಲ್ಲಿ ತೃತೀಯ ಸ್ಥಾನ ಪಡೆದಿದ್ದು, ಚೇತನ ಹೆಡ್ ಲೈನ್ ಬರವಣಿಗೆಯಲ್ಲಿ ದ್ವಿತೀಯ ಹಾಗೂ ಗೋವಿಂದಗೌಡ ಪಾಟೀಲ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಚರಂತಿಮಠ,ಗೌರವ ಕಾರ್ಯದರ್ಶಿಗಳಾದ ಮಹೇಶ ಎನ್‌. ಅಥಣಿ,ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಬಾವಿ,ಪ್ರಾಚಾರ್ಯರಾದ ಎಸ್‌.ಆರ್‌. ಮೂಗನೂರಮಠ ಪ್ರಾಧ್ಯಾಪಕರುಗಳಾದ ಐ.ಬಿ ಚಿಕ್ಕಮಠ  ಮಹಾಂತೇಶ ದೊಡವಾಡ ಸೇರಿದಂತೆ  ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ವರ್ಗ ಅಭಿನಂದಿಸಿದೆ.