ನವದೆಹಲಿಯಲ್ಲಿ 26.01.2026ರಂದು ನಡೆದ 77 ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಜೆ.ಎಸ್.ಎಸ್. ಕಾಲೇಜಿನ ಎನ್.ಸಿ.ಸಿ. ಕೆಡೆಟ್ ಸಾಧನೆ
Achievement of NCC Cadet of J.S.S. College in the 77th Republic Day Parade held in New Delhi on 26.
ಧಾರವಾಡ 10 : ನವದೆಹಲಿಯಲ್ಲಿ 26.01.2026ರಂದು, 77ನೇ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಪ್ರಧಾನಮಂತ್ರಿ ರಾ್ಯಲಿಯಲ್ಲಿ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಎನ್.ಸಿ.ಸಿ. ಹಿರಿಯ ಅಂಡರ ಆಫೀಸರ್ ಮಂಜುನಾಥ ದೇವರಡ್ಡಿ ಅವರು ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ಮಟ್ಟದಲ್ಲಿ ನಡೆಯುವ ರಿಪಬ್ಲಿಕ್ ಡೇ ಕ್ಯಾಂಪ್ ಆಯ್ಕೆ ಪ್ರಕ್ರಿಯೆ ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕಠಿಣ ಮತ್ತು ಸ್ಪರ್ಧಾತ್ಮಕವಾಗಿದೆ. ಈ ಹಂತಗಳನ್ನು ಯಶಸ್ವಿಯಾಗಿ ಪೊರೈಸಿ, ಆಯ್ಕೆಯಾಗುವುದು ರಾಷ್ಟ್ರಮಟ್ಟದ ಗೌರವನ್ವಿತ ಸಾಧನೆ ಎಂದು ಪರಿಗಣಿಸಲಾಗುತ್ತದೆ. ಈ ಸಾಧನೆ ಕಾಲೇಜಿನ ಹೆಗ್ಗಳಿಕೆಯನ್ನು ಹೆಚ್ಚಿಸಿದೆ. ಈ ವಷದ ರಿಪಬ್ಲಿಕ್ ಡೇ ಕ್ಯಾಂಪ್‌ನಲ್ಲಿ ಪ್ರಧಾನಮಂತ್ರಿ ಬ್ಯಾನರ್‌ನ್ನು ಗೆದ್ದ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ತಂಡದ ಭಾಗವಾಗಿರುವುದೂ ಖಗಓ ಮಂಜುನಾಥ ದೇವರಡ್ಡಿ ಅವರ ಮತ್ತೊಂದು ವಿಶೇಷತೆ ಆಗಿದೆ. ಇದಕ್ಕಾಗಿ ಅವರಿಗೆ ಕಾಲೇಜು ಅಪಾರ ಹೆಮ್ಮೆ ವ್ಯಕ್ತಪಡಿಸಿದೆ.
ಮಂಜುನಾಥ ದೇವರಡ್ಡಿ ಅವರು ಕಾಲೇಜಿನ ಬಿ.ಎ. ವಿದ್ಯಾರ್ಥಿಯಾಗಿದ್ದು, ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ 3/1/28 ಓಅಅ ಕಂಪನಿಯ ಎನ್.ಸಿ.ಸಿ. ಕೆಡೆಟ್ ಆಗಿದ್ದಾರೆ.ಈ ಅಪರೂಪದ ಸಾಧನೆಗೆ ಖಗಓ ಮಂಜುನಾಥ ದೇವರಡ್ಡಿ ಹಾಗೂ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಅಖಿಓ ಆನಂದ ಕಟ್ಟಿಮನಿ ಅವರಿಗೆ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ, ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದ, ಜೆ.ಎಸ್.ಎಸ್. ಎಂ.ಸಿ.ಎ. ಕಾಲೇಜಿನ ನಿದೇರ್ಶಕರಾದ ಡಾ. ಸೂರಜ್ ಜೈನ್, ಪ್ರಾಚಾರ್ಯರಾದ ಪ್ರೊ ವೆಂಕಟೇಶ ಮುತಾಲಿಕ, ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಶೌಕತಅಲಿ ಮೇಗಲಮನಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 