ಹುಲಕೋಟಿಯ ಚಾಂಪಿಯನ್ ಸ್ಪೋರ್ಟ್ಸ್ ಕರಾಟೆ ಕ್ಲಬ್ ವಿಧ್ಯಾರ್ಥಿಗಳ ಸಾಧನೆ
ಗದಗ 06: ಇತ್ತೀಚಿಗೆ ಹುಬ್ಬಳ್ಳಿ ನಗರದಲ್ಲಿ ನಡೆದ ನ್ಯಾಷನಲ್ ಲೆವೆಲ್ ಚಾಂಪಿಯನಿಶಿಪ್ ಸ್ಪರ್ಧೆಯಲ್ಲಿ ಹುಲಕೋಟಿಯ ಚಾಂಪಿಯನ್ಸ್ ಕರಾಟೆ ಕ್ಲಬ್‌ನ ವಿಧ್ಯಾರ್ಥಿಗಳು ಭಾಗವಹಿಸಿ ಒಟ್ಟು 59 ಪ್ರಶಸ್ತಿಗಳು ಲಭಿಸಿದ್ದು. ಕಟಾ ವಿಭಾಗದಲ್ಲಿ ಒಟ್ಟು 33 ಪ್ರಶಸ್ತಿಗಳು ಅದರಲ್ಲಿ ಪ್ರಥಮ-9, ದ್ವಿತೀಯ-10, ತೃತೀಯ-14 ಮತ್ತು ಕುಮಿಟೆ ವಿಭಾಗದಲ್ಲಿ ಒಟ್ಟು 26 ಪ್ರಶಸ್ತಿಗಳು ಅದರಲ್ಲಿ ಪ್ರಥಮ-9, ದ್ವಿತೀಯ ಹಿ 6, ತೃತೀಯ - 11 ಪ್ರಶಸ್ತಿ ಪಡೆದು ಈ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಸಾಧನೆ ಮಾಡಿದ ಮಕ್ಕಳಿಗೆ ಊರಿನ ಗುರು-ಹಿರಿಯರು ಮತ್ತು ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರು, ಸದಸ್ಯರು ಹಾಗೂ ತರಬೇತುದಾರರಾದ ತಿರುಮಲ ಬಿಂಕದಕಟ್ಟಿ ಹಾಗೂ ಪಾಲಕರು ಅಭಿನಂದಿಸಿದ್ದಾರೆ.
ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಸಾಧನೆ ಮಾಡಿದ ವಿಧ್ಯಾರ್ಥಿಗಳು ಸಂಪತ್- ಎರಡರಲ್ಲಿಯೂ ದ್ವಿತೀಯ, ಯಮನೂರ - ದ್ವಿತೀಯ ಹಾಗೂ ಪ್ರಥಮ, ರಾಹುಲ್- ತೃತೀಯ, ಲಿಖಿತ್-ದ್ವಿತೀಯ ಹಾಗೂ ತೃತೀಯ, ಅನಿಕೇತ-ತೃತೀಯ, ಮೈಲಾರಿ- ಎರಡರಲ್ಲೂ ಪ್ರಥಮ, ವಿನಾಯಕ- ಎರಡರಲ್ಲಿಯೂ ಪ್ರಥಮ, ಸಿದ್ಧರಾಮೇಶ- ಪ್ರಥಮ ಹಾಗೂ ದ್ವಿತೀಯ, ಸಮರ್ಥ.ಎನ್-ತೃತೀಯ ಹಾಗೂ ಪ್ರಥಮ, ನಮಂತ್- ತೃತೀಯ, ಸಮರ್ಥ.ಎಚ್-ತೃತೀಯ, ಪ್ರಶಾಂತ-ದ್ವಿತೀಯ, ಅಕ್ಷಯ್-ದ್ವಿತೀಯ ಹಾಗೂ ತೃತೀಯ, ನಿಂಗರಾಜ- ಎರಡರಲ್ಲಿಯೂ ಪ್ರಥಮ, ಮೊಹಮ್ಮದ್-ತೃತೀಯ, ಯಶವಂತ್ - ಪ್ರಥಮ ಹಾಗೂ ತೃತೀಯ, ಮಲ್ಲಿಕಾರ್ಜುನ್.ಐ.- ಪ್ರಥಮ ಹಾಗೂ ದ್ವಿತೀಯ, ಚೇತನ್-ದ್ವಿತೀಯ ಹಾಗೂ ತೃತೀಯ, ಕಾರ್ತೀಕ ಹಿ ಎರಡರಲ್ಲಿಯೂ ದ್ವಿತೀಯ, ಮಲ್ಲಿಕಾರ್ಜುನ್. ಹೆಚ್.-ಪ್ರಥಮ ಹಾಗೂ ತೃತೀಯ, ಶ್ರೇಯಸ್‌ಹಿತೃತೀಯ, ದೀಕ್ಷಾ-ತೃತೀಯ, ಜಯಶ್ರೀ-ತೃತೀಯ ಹಾಗೂ ಪ್ರಥಮ, ವೈಷ್ಣವಿ - ದ್ವಿತೀಯ ಹಾಗೂ ತೃತೀಯ, ವಿನಿತಾಹಿಎರಡರಲ್ಲಿಯೂ ತೃತೀಯ, ಪ್ರಕೃತಿ- ಎರಡರಲ್ಲಿಯೂ ತೃತೀಯ, ಪೂರ್ವಿ - ತೃತೀಯ ಹಾಗೂ ಪ್ರಥಮ, ಸೌಂದರ್ಯ - ಪ್ರಥಮ ಹಾಗೂ ತೃತೀಯ, ಸೃಷ್ಠಿ-ಪ್ರಥಮ ಹಾಗೂ ದ್ವಿತೀಯ, ಶಾಹಿನ-ದ್ವಿತೀಯ ಹಾಗೂ ಪ್ರಥಮ, ವಿಕಾಸ್ - ದ್ವಿತೀಯ ಹಾಗೂ ಪ್ರಥಮ, ಶಶಿಕಾಂತ್ ಹಿ ಎರಡರಲ್ಲಿಯೂ ತೃತೀಯ ವಿನಯ್ - ಎರಡರಲ್ಲಿಯೂ ತೃತೀಯ ಸ್ಥಾನ ಪಡೆದಿದ್ದಾರೆ.