ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಕೊಡಿಸುವದಾಗಿ ಲಕ್ಷಾಂತರ ರೂ. ವಂಚನೆ: ಆರೋಪಿ ಬಂಧನ
Accused arrested for swindling lakhs of rupees by promising to provide a tractor at a subsidized ra
ಲೋಕದರ್ಶನ ವರದಿ
ಜಮಖಂಡಿ 27: ಕೇಂದ್ರ ಸರ್ಕಾರದಿಂದ ಸಬ್ಸಿಡಿ ಯೋಜನೆಯಡಿ ಟ್ರ್ಯಾಕ್ಟರ್, ಟ್ರೇಲರ್, ರೋಟವೇಟರ್, ನೇಗಿಲು ಸೇರಿದಂತೆ ವಿವಿಧ ಕೃಷಿ ಉಪಕರಣಗಳನ್ನು ಕೊಡಿಸುವದಾಗಿ ರೈತರನ್ನು ನಂಬಿಸಿ ಸಿಆರ್‌ಓ ಅಂತಾ ಹೇಳಿಕೊಂಡು ತಿರುಗುತ್ತಿರುವ ರಾಜು ಬಸವಂತ ಗಸ್ತಿ ಬೆಳಗಾವಿ, ಬಾಗಲಕೋಟೆ ಸೇರಿದಂತೆ ವಿವಿಧ ಕಡೆಗಳಲ್ಲಿ ಹಣವನ್ನು ಸಂಗ್ರಹಿಸಿ ವಂಚನೆ ಆರೋಪದ ಮೇಲೆ ಜಮಖಂಡಿ ಶಹರ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಹಾಲಿಂಗಪೂರದ ಕಂಡೇರಮಡ್ಡಿ ನಿವಾಸಿ ರಾಜು ಬಸವಂತ ಗಸ್ತಿ ವಿವಿಧ ಕಡೆಗಳಲ್ಲಿ ಹಣವನ್ನು ಸಂಗ್ರಹಿಸಿ ವಂಚನೆ ಮಾಡಿದ್ದು. ಮೂಡಲಗಿ ತಾಲ್ಲೂಕಿನ ಹೊಸಟ್ಟಿ ಗ್ರಾಮದ ಮಂಜುನಾಥ ಕುಂಬಾರ ಇವರಿಂದ ಹಂತಹಂತವಾಗಿ 5.91ಲಕ್ಷ ಹಣವನ್ನು ತೆಗೆದುಕೊಂಡು ಯಾವುದೇ ಕೃಷಿ ಉಪಕರಣವನ್ನು ನೀಡದೆ ವಂಚಿಸಿದ್ದು ಇವರ ದೂರು ಆಧರಿಸಿ ವಿಚಾರಣೆ ಮಾಡಲಾಗುತ್ತಿದೆ,
ನಗರದ ಜಂಬಗಿ ರಸ್ತೆಯಲ್ಲಿ ಇರುವ ಸಿಆರ್‌ಓ ರಾಜು ಗಸ್ತಿ ಕಚೇರಿ ಮೇಲೆ ದಾಳಿ ಮಾಡಲಾಗಿದ್ದು ಬ್ಯಾಂಕ ಖಾತೆಯನ್ನು ಪರೀಶೀಲನೆ ಮಾಡಲಾಗುತ್ತಿದೆ, ಇನ್ನೂ ಹಲವಾರು ಜನರಿಂದ ಹಣವನ್ನು ವಸೂಲಿ ಮಾಡಿದ್ದು ಮಾಹಿತಿ ಸಿಕ್ಕಿದ್ದು, ಇನ್ನೂ ಯಾರಾದರು ಸಾರ್ವಜನಿಕರು ಹಣ ನೀಡಿ ಉಪಕರಣ ಕೊಡಿಸುವದಾಗಿ ವಂಚನೆಗೆ ಒಳ್ಳಪಟ್ಟವರು ಯಾರಾದರೂ ಇದ್ದರೆ ಅಗತ್ಯ ದಾಖಲೆಗಳೊಂದಿಗೆ ಶಹರ ಠಾಣೆಗೆ ಬಂದು ಮಾಹಿತಿ ನೀಡಬೇಕು ಎಂದು ಪೋಲಿಸರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಗಳ ಅನುಷ್ಠಾನಕ್ಕೆ ಕರ್ನಾಟಕಕ್ಕೆ ಆಯ್ಕೆಯಾಗಿದ್ದೆನೆ ಎಂದು 6 ಲಕ್ಷದಲ್ಲಿ ಟ್ರ್ಯಾಕ್ಟರ್ ಕೊಡಿಸುವದಾಗಿ ಹೇಳಿ ಹಣ ವಸೂಲಿ ಮಾಡಿದ್ದು, ಹಲವು ಜನರಿಗೆ ಟ್ರ್ಯಾಕ್ಟರ್ ನೀಡಿ ಮಠಾಧೀಶರು ಹಾಗೂ ರಾಜಕಾರಣಿಗಳನ್ನು ಕರೆಸಿ ಟ್ರ್ಯಾಕ್ಟರ್ ನೀಡುತ್ತಿದ್ದನು ಹಾಗೂ ಕ್ರಿಕೇಟ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಲಕ್ಷಾಂತರ ಹಣ ನೀಡಿ ಪ್ರಚಾರ ತೆಗೆದುಕೊಳ್ಳುತ್ತಿದ್ದನು. ಇದರಿಂದ ವಿಶ್ವಾಸ ಬಂದು ಹಲವು ಜನರು ಮೋಸ ಹೋಗಿದ್ದು ಕೊಟ್ಯಾಂತರ ಹಣ ವಂಚನೆ ಮಾಡಿರುವ ಮಾಹಿತಿ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಧೋಳದಲ್ಲಿ ಕೃಷಿ ಅಧಿಕಾರಿ ಎಂದು ಕೃಷಿ ಹೊಂಡ, ಸಬ್ಸಿಡಿಯಲ್ಲಿ ಲೋನ್ ಕೊಡಿಸುವದಾಗಿ ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು, ಬಾಗಲಕೋಟನಲ್ಲಿ ನೌಕರಿ ಕೊಡಿಸುವದಾಗಿ ವಂಚನೆ ಮಾಡಿದ್ದು ಎರಡು ಪ್ರಕರಣ ಹಾಗೂ ಮಹಾಲಿಂಗಪೂರದಲ್ಲಿ ನೌಕರಿ ಕೊಡಿಸುವದಾಗಿ ಹಣ ವಸೂಲಿ ಮಾಡಿದ ಬಗ್ಗೆ ಪ್ರಕರಣಗಳು ಸಹ ದಾಖಲಾಗಿವೆ.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 