ಬಿ.ಎ. ದ್ವಿತೀಯ ಸೆಮಿಸ್ಟರ್ ಫಲಿತಾಂಶ: ಎಸ್‌.ಆರ್‌. ಕಾಂತಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಬಿ.ಎ. ದ್ವಿತೀಯ ಸೆಮಿಸ್ಟರ್ ಫಲಿತಾಂಶ: ಎಸ್‌.ಆರ್‌. ಕಾಂತಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ  B.A. Second Semester Results: Achievement of S.R. Kanthi College Students

ಲೋಕದರ್ಶನ ವರದಿ 

ಮುಧೋಳ 27 : ಬಾಗಲಕೋಟೆ ವಿಶ್ವವಿದ್ಯಾಲಯ, ಜಮಖಂಡಿ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಬಿ.ಎ. 2ನೇ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ.  ಬಾಗಲಕೋಟೆ ವಿಶ್ವವಿದ್ಯಾಲಯದ ಸಂಘದ ಮೂಡೋಳದ ಶ್ರೀ ಎಸ್‌.ಆರ್‌. ಕಾಂತಿ ಮಹಾವಿದ್ಯಾಲಯದ ಕಲಾ ವಿಭಾಗದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 2ನೇ ಸೆಮಿಸ್ಟರ್ನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ಸ್‌ ಫಾರ್ ಮೀಡಿಯಾ ವಿಷಯದಲ್ಲಿ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ.  ಕಲ್ಮೇಶ್ ಜೋಗಿ (78.66ಅ), ಗೌರಮ್ಮ ಕುಂಬಾರ (77.30ಅ), ಚಂದ್ರಿಕಾ ಕಳ್ಳಿಮನಿ (70.66ಅ), ಮೆಹಬೂಬ್ ಬಂದೂಗೋಳ (68ಅ) ಹಾಗೂ ಸಂಜನಾ ಅಮರಾಪುರ (66.66ಅ) ಅಂಕಗಳನ್ನು ಪಡೆದು ಟಾಪರ್ಸ್‌ ಆಗಿದ್ದಾರೆ.  

ವಿದ್ಯಾರ್ಥಿನಿಯರ ಸಾಧನೆಗೆ ಬಾಗಲಕೋಟೆ ವಿಶ್ವವಿದ್ಯಾಲಯ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ್ ಎನ್‌. ಅತನಿ, ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಕಾಲೇಜುಗಳ ಆಡಳಿತಾಧಿಕಾರಿ ಡಾ. ವಿಜಯಕುಮಾರ ಕಟಗಿಹಳ್ಳಿ ಮಠ, ಪದ ನಿಮಿತ್ತ ಕಾರ್ಯದರ್ಶಿ ಡಾ. ಎಸ್‌.ಎನ್‌. ಗಾಂವಕರ್, ಸದಸ್ಯರು, ಕಾಲೇಜಿನ ಪ್ರಾಚಾರ್ಯೆ ಡಾ. ಮಲ್ಲಿಕಾರ್ಜುನ ಜರಕುಂಟಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವನಾಥ ಮುನವಳ್ಳಿ, ಉಪನ್ಯಾಸಕ ಮಹಾಂತೇಶ್ ಹಿರೇಮಠ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.