ಲಿಂಗರಾಜ ಕಾಲೇಜಿನಲ್ಲಿ 27ನೇ ಕಾರ್ಗಿಲ್ ವಿಜಯ ದಿವಸ ಆಚರಣೆ

ಲಿಂಗರಾಜ ಕಾಲೇಜಿನಲ್ಲಿ 27ನೇ ಕಾರ್ಗಿಲ್ ವಿಜಯ ದಿವಸ ಆಚರಣೆ  Celebration of 27th Kargil Vijay Diwas at Lingaraj College

ಬೆಳಗಾವಿ ಜು.27: ಭಾರತ ಶಾಂತಿಪ್ರಿಯ ರಾಷ್ಟ್ರವಾಗಿದ್ದರೂ, ದೇಶದ ಮೇಲೆ ದಾಳಿ ನಡೆಸುವ ಶತ್ರುಗಳಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ಹೊಂದಿದೆ. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ಭಾರತೀಯ ಯೋಧರ ತ್ಯಾಗವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ನಿವೃತ್ತ ಗೌರವಾನ್ವಿತ ಕ್ಯಾಪ್ಟನ್ ಚಂಗಪ್ಪ ಪಾಟೀಲ ಹೇಳಿದರು.  ನಗರದ ಲಿಂಗರಾಜ ಕಾಲೇಜಿನ ಎನ್ಸಿಸಿ ಘಟಕದ ವತಿಯಿಂದ ಆಯೋಜಿಸಿದ್ದ 27ನೇ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಕಾರ್ಗಿಲ್ ಯುದ್ಧವು ಭಾರತೀಯ ಸೇನೆಯ ಶೌರ್ಯ, ಸಾಹಸ ಹಾಗೂ ದೇಶಭಕ್ತಿಯ ಪ್ರತೀಕವಾಗಿದೆ. ಇಂದಿನ ಯುವಜನತೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಶಿಸ್ತು, ಕಠಿಣ ಪರಿಶ್ರಮ, ಉತ್ತಮ ಆರೋಗ್ಯ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.  

ಕರ್ನಾಟಕ ಸುಬೇದಾರ್ ಮೇಜರ್ ಕಲ್ಲಪ್ಪ ಪಾಟೀಲ ಮಾತನಾಡಿ, ದೇಶಸೇವೆ ಎಂದರೆ ಕೇವಲ ಸೇನೆ ಸೇರುವುದಲ್ಲ. ರಾಷ್ಟ್ರದ ಪ್ರತಿಯೊಂದು ಸಂಪತ್ತನ್ನು ಪ್ರೀತಿಸಿ, ಸಂರಕ್ಷಿಸುವುದೂ ದೇಶಸೇವೆಯೇ. ಯುವಕರು ರಾಷ್ಟ್ರೇ​‍್ರಮ ಮತ್ತು ರಾಷ್ಟ್ರೀಯ ಚೇತನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.  

ಎನ್ಸಿಸಿ ಅಧಿಕಾರಿ ಮೇಜರ್ ಡಾ. ಮಹೇಶ್ ಗುರನಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತವು ಹಲವು ಯುದ್ಧಗಳಲ್ಲಿ ಶತ್ರು ರಾಷ್ಟ್ರಗಳಿಗೆ ತಕ್ಕ ಉತ್ತರ ನೀಡಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲ ವೀರಯೋಧರನ್ನು ಸದಾ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಜಿ.ಎನ್‌. ಶೀಲ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಚಾರ್ಯೆ ಗಿರಿಜಾ ಹಿರೇಮಠ, ಡಾ. ಸಿ. ರಾಮರಾವ್, ಡಾ. ಶಿವಾನಂದ ಬುಲಬುಲೆ, ಡಾ. ಎಚ್‌.ಎಂ. ಚನ್ನಪ್ಪಗೌಡ, ಪ್ರೊ. ಸುನೀತ ಮೂಡಲಗಿ, ಪ್ರೊ. ನಂದನ ಕಟಾಂಬಳೆ, ಡಾ. ಮಹಾಂತೇಶ ಸೊಗಲ್, ಡಾ. ವಿ.ಪಿ. ಹಿರೇಮಠ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಎನ್ಸಿಸಿ ಕೆಡೆಟ್ಗಳಾದ ಸೃಷ್ಟಿ ಹಿರೇಮಠ, ಪವಿತ್ರಾ ನಾಯಕ ಹಾಗೂ ಸಿದ್ಧಾರ್ಥ ಕಾರ್ಯಕ್ರಮ ನಿರೂಪಿಸಿದರು.