2011ರ ಜನಗಣತಿ ಆಧಾರದ ಮೇಲೆ ಒಳಮೀಸಲಾತಿ ವರ್ಗೀಕರಣ ಮಾಡಬಾರದು: ರವಿಕಾಂತ ಅಂಗಡಿ

According to 2011 Census no intra-reservation classification should be done: Ravikanta Shop

2011ರ ಜನಗಣತಿ ಆಧಾರದ ಮೇಲೆ ಒಳಮೀಸಲಾತಿ ವರ್ಗೀಕರಣ ಮಾಡಬಾರದು: ರವಿಕಾಂತ ಅಂಗಡಿ 

ಬೆಳಗಾವಿ 20:ಭೋವಿ, ಬಂಜಾರ, ಕೊರಮ, ಕೊರಚ ಜಾತಿಗಳ ಮಹಾ ಒಕ್ಕೂಟದಿಂದ 2011ರ ಜನಗಣಿತ ಆಧಾರದ ಮೇಲೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಂಗಡನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ದಿನಾಂಕ:17.12.2024 ರಂದು ಬೆಳಗಾವಿ ಸುವರ್ಣಸೌಧದ ಎದುರಿಗೆ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. 

ಪ್ರತಿಭಟನೆಯಲ್ಲಿ ಇಲಕಲ್ಲ್‌ ವಿಜಯ ಮಹಾಂತೇಶ್ವರ ಶಾಖಾಮಠ ಲಿಂಗಸೂರಿನ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ಬಿಜಾಪೂರ ತೋರವಿ ತಾಂಡಾ ಬಂಜಾರ ಪೀಠದ ಗೋಪಾಲ ಮಹಾರಾಜರು, ಸಂಡೂರಿನ ಶ್ರೀ ತಿಪ್ಪೇಸ್ವಾಮಿ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. 

ಗೊರಸೇನಾ ಸಂಘಟನೆಯ ರಾಜಾಧ್ಯಕ್ಷರಾದ, ರವಿಕಾಂತ ಅಂಗಡಿ ಮಾತನಾಡಿ ಸಂವಿದಾನ 1950 ರಿಂದ ಈ ಸಮುದಾಯಗಳಿಗೆ ಪರಿಶಿಷ್ಟ ಜಾತಿಯ ಮೀಸಲಾತಿಯ ಸೌಲಭ್ಯ ಆಗಬೇಕಾಗಿತ್ತು ಆದರೆ ಕೆಲವು ಕಾರಣಗಳಿಂದ ಇದು ಸಾಧ್ಯವಾಗಿರಲಿಲ್ಲ, ಕೆಲವು ವರ್ಷಗಳ ನಂತರ ಈ ಸೌಲಭ್ಯವನ್ನು ನಾವು ಪಡೆದವು. ಇತ್ತೀಚೆಗೆ ಪರಿಶಿಷ್ಟ ಜಾತಿಯ ಸೌಲಭ್ಯ ಪಡೆದ ಈ ಸಮುದಾಯಗಳು ಅದೇಗೆ ಮುಂದುವರೆದವು? ಎಂಬುದೇ ಯಕ್ಷ ಪ್ರಶ್ನೆಯಾಗಿದೆ, ಅದಲ್ಲದೆ 1950 ರಿಂದ ಮೀಸಲಾತಿ ಪಡೆದ ಪರಿಶಿಷ್ಟ ಜಾತಿಯ ಕೆಲವು ಸಮುದಾಯಗಳು ಅಭಿವೃದ್ಧಿ ಕಾಣದೇ ಇರುವಾಗ ಇತ್ತೀಚೆಗೆ ಮಿಸಲಾತಿಯಡಿ ಯಲ್ಲಿ ಬಂದ ನಾವುಗಳು ಅದೇಗೆ ಮುಂದುವರೆದವು ಎಂಬುದೆ ಸೋಜುಗದ ಸಂಗತಿಯಾಗಿದೆ.  

ಸರ್ಕಾರ ಸರಿಯಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸಮೀಕ್ಷೆ ಮಾಡಬೇಕು. ಇದಾವುದನ್ನು ಪರಿಗಣಿಸದೆ ಈ ಹಿಂದಿನ 2011ರ ಜನಗಣತಿ ಆಧಾರದ ಮೇಲೆ ಒಳಮೀಸಲಾತಿ ವರ್ಗೀಕರಣ ಮಾಡಬಾರದು. 2024ರ ಜನಸಂಖ್ಯೆಗೆ ಅನುಗುಣವಾಗಿ 99 ಪರಿಶಿಷ್ಟ ಜಾತಿಗಳ ಸಹೋದರರಿಗೆ ಸಮಪಾಲು ನೀಡಬೇಕೆಂಬುದು ಆಗ್ರಹವಾಗಿದೆ. ನಮಗೆ ಅನ್ಯಾಯವೆಸಗಿದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತೇವೆ. ಈ ಸಮುದಾಯಗಳು ಹೊಟ್ಟೆಪಾಡಿಗಾಗಿ ಗುಳೆ ಹೋಗುವುದು, ಕಲ್ಲು ಹೊಡೆಯುವುದು, ಕಟ್ಟಿಗೆ ಮಾರಿ ತಮ್ಮ ತುತ್ತಿನ ಚೀಲವನ್ನು ತುಂಬಲು ಹೆಣಗಾಡುತ್ತಿದ್ದಾರೆ. ಆಯೋಗ ಒಂದೆಡೆ ಕುಳಿತು ವರದಿ ಸಿದ್ಧಪಡಿಸಿದರೆ ಜನರ ವಾಸ್ತವಿಕ ಸಮಸ್ಯೆ ಹೇಗೆ ತಿಳಿಯುತ್ತದೆ ಆಯೋಗ ತಾಂಡಗಳಿಗೆ ಗ್ರಾಮಗಳಿಗೆ ಬರಬೇಕು ವರದಿ ಸಿದ್ಧಪಡಿಸಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 

ಅಖೀಲ ಕರ್ನಾಟಕ ಭೋವಿ ವಡ್ಡರ ವೇದಿಕೆ ರಾಜ್ಯಾಧ್ಯಕ್ಷರಾದ ವೈ. ಕೋಟ್ರೇಶ್ ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡಿರುವ ಮಹಾ ಒಕ್ಕೂಟವು ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕಣ ಮಾಡಲು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ನೆಪವಾಗಿರಿಸಿಕೊಂಡು ರಾಜ್ಯ ಸರ್ಕಾರ ಅವೈಜ್ಞಾನಿಕ, ಅಸಂವಿಧಾನಿಕವಾಗಿ, ಕಾನೂನು ಬಾಹಿರ ಮತ್ತು ದ್ವೇಷ ಆಶಾಂತಿಗೆ ಕಾರಣವಾಗಿರುವ ಒಳಮೀಸಲಾತಿ ವಿಂಗಡನೆಗೆ ಮುಂದಾಗಿರುವುದನ್ನು ವಿರೋಧಿಸುತ್ತೇವೆ. ನಮ್ಮ ಮನವಿಯನ್ನು ಸರ್ಕಾರ ಒಪ್ಪದೇ ಇದ್ದರೆ ಉಗ್ರ ರೂಪದ ಕ್ರಾಂತಿಯ ಹೋರಾಟ ಮಾಡಲಿದ್ದೇವೆ. ನಮಗೆ ಮೀಸಲಾತಿ ಕೊಟ್ಟಿರುವದು ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರವರ ಸಂವಿದಾನ ಹೊರತು, ಯಾವುದೇ ಸಮುದಾಯಗಳಲ್ಲ. ಯಾವುದೇ ಸರ್ಕಾರವಲ್ಲ ಮೀಸಲಾತಿಯಿಂದ ನಮ್ಮನ್ನು ತಗೆಯುವ ಹಕ್ಕು ಯಾರಿಗೂ ಇಲ್ಲಾ. ಸರ್ಕಾರ ಅಷ್ಟೇಕೆ ತರಾತುರಿಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ ಎಂಬುದು ತೋಚದಂತಾಗಿದೆ. ದಯನೀಯ ಸ್ಥಿತಿಯಲ್ಲಿ ಇರುವ ಈ ಸಮಾಜದ ಮೀಸಲಾತಿ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. 

ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹಾದೇವಪ್ಪ ಮನವಿ ಸ್ವೀಕರಿಸಿ, ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿರುವ ಯಾವುದೇ ಸಮುದಾಯಕ್ಕೂ ಅನ್ಯಾಯ ಆಗುವದಿಲ್ಲ. ರಾಜ್ಯ ಸರ್ಕಾರ ನಿಮ್ಮ ಹಿತವನ್ನು ಕಾಯುತ್ತದೆ. ವೈಜ್ಞಾನಿಕವಾಗಿ, ವಾಸ್ತವಿಕ ದತ್ತಾಂಶಗಳನ್ನು ಸಂಗ್ರಹಿಸಿ ಒಳಮೀಸಲಾತಿ ಕುರಿತಾಗಿ ಮುಂದಿನ ತೀರ್ಮಾನವನ್ನು ಕೈಗೊಳ್ಳುವುದಾಗಿ ತಿಳಿಸಿದರು.  

ಕರ್ನಾಟಕ ವಿಧಾನಸಭೆಯ ಉಪಸಭಾಪತಿಗಳಾದ ರುದ್ರ​‍್ಪ ಲಮಾಣಿ ಮಾತನಾಡಿ, ಕೂಡಲೇ ಒಂದು ನಿಯೋಗ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ನಮ್ಮ ಸಮುದಾಯಗಳ ಪ್ರಸ್ತುತವಿರುವ ದತ್ತಾಂಶಗಳನ್ನು ನಿಖರವಾಗಿ ಸಂಗ್ರಹಿಸುವಂತೆ ಆಗ್ರಹಿಸುವುದಾಗಿ ಹೇಳಿದರು.  

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಭಟನೆ ನಿರತರಿಗೆ ಬೆಂಬಲ ಸೂಚಿಸಿ, ಮಾತನಾಡಿದ ಭೋವಿ, ಬಂಜಾರ, ಕೊರಮ, ಕೊರಚ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಂಗಡನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸುತ್ತದೆ ಅಂತಾ ಹೇಳಿದರು.  

ಶಾಸಕ ಡಾ. ಚಂದ್ರು ಲಮಾಣಿ, ಚಿಂಚೋಳಿಯ ಅವಿನಾಶ್ ಜಾಧವ್, ಹೂವಿನಹಡಗಲಿಯ ಕೃಷ್ಣ ನಾಯ್ಕ್‌, ಹಗರಿಬೊಮ್ಮನಹಳ್ಳಿಯ ನೇಮಿರಾಜ ನಾಯಕ, ಹೊಳಲ್ಕೆರೆಯ ಚಂದ್ರ​‍್ಪ ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರ ತರಾತುರಿಯಲ್ಲಿ ಒಳಮೀಸಲಾತಿ ವಿಚಾರವಾಗಿ ಯಾವುದೇ ದುಡುಕು ತೀರ್ಮಾನವನ್ನು ತೆಗೆದುಕೊಳ್ಳಬಾರದು. ಹಿಂದುಳಿದಿರುವ ಕೊಲಂಬೊ ಸಮುದಾಯಗಳನ್ನು ಮತ್ತು ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಕಡೆಗಣಿಸಬಾರದು ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 

ಈ ಸಂದರ್ಬದಲ್ಲಿ ಕರ್ನಾಟಕ ಬಂಜಾರ ಕಲ್ಯಾಣ ಸಂಘದ ಕಾರ್ಯದರ್ಶಿಗಳಾದ ಚಂದ್ರಕಾಂತ್ ಚವ್ಹಾಣ, ಅಖಿಲ ಕರ್ನಾಟಕ ಭೋವಿ ವಡ್ಡರ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ಹಿರೇಮನಿ, ಅಖಿಲ ಕರ್ನಾಟಕ ಭೋವಿ ವಡ್ಡರ ವೇದಿಕೆ ರಾಜ್ಯ ಮಹಿಳಾ ಅಧ್ಯಕ್ಷ ಸುಶೀಲಮ್ಮ, ಕೊಲಂಬೊ ಸಮುದಾಯಗಳ ಮುಖಂಡರಾದ ಪಾಂಡು ಚವ್ಹಾಣ, ಸುನೀಲ ದೋತ್ರೆ, ಮೋಹನರಾಜ ಭಜಂತ್ರಿ, ರಾಮಚಂದ್ರ, ಶ್ರೀಕಾಂತ ಭಜಂತ್ರಿ, ಸುನಂದಾ, ಸುಮಂಗಲಾ, ಡಿ ಟಿ ಏಕಾಂತ, ಬಸವರಾಜ್ ಬಂಡಿವಡ್ಡರ, ರಾಜು ವಡ್ಡರ, ಅವಿನಾಶ, ಸುರೇಶ ಗಿಡ್ಡಪ್ಪ, ಲಕ್ಷ್ಮೀ ಬಂಡಿವಡ್ಡರ, ತುಕಾರಾಮ ಭಜಂತ್ರಿ, ಪಿ.ವೆಂಕಟೇಶ, ಮಂಜುನಾಥ ಹಳ್ಳಾಳ, ಶ್ರೀನಿವಾಸ ಅವರೋಳ್ಳಿ, ಆನಂದ ಅಂಗಡಿ, ಹನುಮಾ ನಾಯಕ, ಕೃಷ್ಣಜಿ ಚವ್ಹಾಣ, ಐ ಏಸ್ ಪೂಜಾರ, ಶಿವಣ್ಣ ಲಮಾಣಿ, ಮೋಹನ ಭಜಂತ್ರಿ, ದಯಾನಂದ ಪವಾರ, ಅಂಜಯನೇಪ್ಪ ಕಟಗಿ, ಸೋಮು ಲಮಾಣಿ, ಸುಭಾಷ ಗುಡಿಮನಿ, ಜಾನು ಲಮಾಣಿ, ಪರಮೇಶ ನಾಯಕ, ಪಾಂಡುರಂಗ ಪಮ್ಮಾರ, ಮಂಗಲೆಪ್ಪ ಲಮಾಣಿ, ವಾಸು ಲಮಾಣಿ, ಚಂದ್ರಾ ನಾಯಕ, ಕೆ ಸಿ ನಭಾಪುರ, ನೀಲು ರಾಠೋಡ, ಪುಂಡಲೀಕ ಲಮಾಣಿ, ಸುರೇಶ ಮಾಳಗಿಮನಿ, ಗೀರೀಶ, ಜಗದೀಶ, ಮಂಜುನಾಥ, ಶಿವಕುಮಾರ, ನಾಗರಾಜ, ಜ್ಯೋತಿ, ನಾಗಾಸರ, ತಿಪ್ಪೇಸ್ವಾಮಿ ಸೇರಿದಂತೆ ಅನೇಕ ಬಂಜಾರ ಭೋವಿ ಕೊರಮ, ಕೊರಚ ಸಮಾಜದ ಸಂಘಟನೆಗಳ ಮುಖಂಡರು ಹಾಜರಿದ್ದರು.