ಲೋಕದರ್ಶನ ವರದಿ
ಬೈಲಹೊಂಗಲ 16: ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯ ಹೊಟೇಲವೊಂದಕ್ಕೆ ಬೆಳಗಿನ ಜಾವ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ ಸರ್ಕ್ಯೂಟ್ಗೊಂಡು ಸುಮಾರು 2 ಲಕ್ಷ ರೂ. ದಷ್ಟು ಹಾನಿ ಉಂಟಾಗಿದೆ.
ಚನ್ನಮ್ಮ ಸಮಾಧಿ ದ್ವಿಮುಖ ರಸ್ತೆಯ ರಾಜು ಕೋಠಾರಿ ಅವರಿಗೆ ಸೇರಿದ ಹೊಟೆಲನಲ್ಲಿ ಬೆಳಗಿನ ಜಾವ 4 ಗಂಟೆಗೆ ವಿದ್ಯುತ್ ಶಾರ್ಟ ಸಕರ್ಿಟಗೊಂಡು ಹೊಟೇಲ ಮೆಲ್ಚಾವಣಿ, ಟೇಬಲ್, ಹೊಟೇಲ್ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ. ಪಕ್ಕದಲ್ಲೆ ತುಂಬಿದ ಗ್ಯಾಸ ಸ್ಪೋಟಗೊಂಡಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು.
ಬೆಂಕಿ ಹತ್ತಿಕೊಂಡು ಹಂಚಿನ ಮೂಲಕ ಹೊಗೆ ಬರತೊಡಗಿದಾಗ ಬೆಳಗಿನ ಜಾವ ವಾಕಿಂಗ ಹೋಗುವರು ಅದನ್ನು ನೋಡಿ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದಾಗ ತಕ್ಷಣ ಸ್ಪಂದಿಸಿದ ಅವರು ಸ್ಥಳಕ್ಕೆ ಆಗಮಿಸಿ ಮುಂದಾಗುವ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.