ಮುಂಡಗೋಡ 02: ಪಟ್ಟಣದ ಆನಂದ ನಗರದಲ್ಲಿ ಬುಧವಾರ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ.
ಶೇಖಯ್ಯಾ ಹಿರೇಮಠ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮನೆಯವರು ನೀರು ಕಾಯಿಸಲು ಬೆಂಕಿ ಹಚ್ಚಿ ಹೊರಗೆ ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ನೋಡ ನೋಡುತ್ತಲೆ ಬೆಂಕಿಯು ವ್ಯಾಪಿಸಿದೆ ಈ ಬೆಂಕಿ ಇತರ ಮನೆಗಳಿಗೂ ವ್ಯಾಪಿಸುವ ಸಾಧ್ಯತೆ ಕೂಡ ಇತ್ತು. ಆದರೆ ಅಗ್ನಿಶಾಮಕ ದಳದವರ ಕ್ಷಿಪ್ರ ಕಾಯರ್ಾಚರಣೆಯಿಂದಾಗಿ ಬೆಂಕಿ ವ್ಯಾಪಿಸುವುದನ್ನು ತಡೆಯಲು ಸಾಧ್ಯವಾಗಿದೆ. ಈ ಅವಘಡದಿಂದ ಕಟ್ಟಿಗೆ, ಹಂಚು, ಪಾತ್ರೆಗಳು, ಟಿ.ವಿ. ಮುಂತಾದ ಗೃಹಬಳಕೆ ವಸ್ತುಗಳು, ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.ಈ ಅವಘಡದಿಂದ ಸುಮಾರ 15000ರೂ ಹಾನಿಯಾಗಿದೆ ಎನ್ನಲಾಗಿದೆ.
ಅಗ್ನಿ ಶಾಮಕದಳದ ಸಿಬ್ಬಂದಿಗಳಾದ ಯು.ಎಲ್.ಬಾಳೆಕಟ್ಟಿ, ಬಸವರಾಜ ಇಂಚಲ, ಗುರುಪ್ರಸಾದ ಕಮಲಾಕರ, ದುರ್ಗಪ್ಪ ಹರಿಜನ,ಶಿವಾಜಿ ರಾಣಿಗೇರ, ಲಕ್ಷ್ಮಣ ವರಕ ಬೆಂಕಿ ನಂದಿಸುವ ಕಾಯರ್ಾಚರಣೆಯಲ್ಲಿದ್ದರು.