ಅಪಘಾತ ವಿಮೆ ಪರಿಹಾರ ರೂ.10 ಲಕ್ಷದ ಚೆಕ್ ವಿತರಣೆ
Accident insurance compensation cheque of Rs. 10 lakhs distributed
ಧಾರವಾಡ ಜ. 17: ಹುಬ್ಬಳ್ಳಿ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಇಂದು (ಜ.17) ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಾಗೂ ಬಜಾಜ್ ಜನರಲ್ ಇನ್ಸೂರೆನ್ಸ್ ಸಹಭಾಗಿತ್ವದಲ್ಲಿ ಅಪಘಾತ ವಿಮಾ ಚೆಕ್ ವಿತರಣಾ ಕಾರ್ಯಕ್ರಮ ಜರುಗಿತು.
ದಿ.ಮಲ್ಲಿಕಾರ್ಜುನ ಮೆಣಸಿನಕಾಯಿ ದುರದೃಷ್ಟವಶಾತ್ ಕಳೆದ ತಿಂಗಳು ಅಪಘಾತದಲ್ಲಿ ಅಸುನೀಗಿದರು. ದಿ.ಮಲ್ಲಿಕಾರ್ಜುನ ಮೆಣಸಿನಕಾಯಿ ಅವರು ಅಂಚೆ ಕಚೇರಿಯಲ್ಲಿ ರೂ. 557 ರ ಅಪಘಾತ ವಿಮೆ ಮಾಡಿಸಿದ್ದು, ಅವರ ಕಾಲಾನಂತರ ನಾಮಿನಿಯಾದ ಪವಿತ್ರಾ ಮಲ್ಲಿಕಾರ್ಜುನ ಮೆಣಸಿನಕಾಯಿ ಅವರಿಗೆ ರೂ. 10 ಲಕ್ಷದ ಚೆಕ್‌ನ್ನು ವಿತರಿಸಲಾಯಿತು. ಇವರಿಗೆ ವಿಜಯನಗರ ಸಬ್ ಆಫೀಸ್ ಪೋಸ್ಟವಿಮೆನ್ ಸಿದ್ದಮ್ಮ ಹೆಬಸೂರ್ ಅವರು ಅಪಘಾತ ವಿಮೆಯನ್ನು ನೀಡಿದ್ದರು.
ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಜಗದೀಶ್ ಚಿಕ್ಕನರಗುಂದ, ಹುಬ್ಬಳ್ಳಿ ಹೆಡ್ ಪೋಸ್ಟ್ ಮಾಸ್ಟರ್ ಮಧು ಸಾಗರ್, ಹುಬ್ಬಳ್ಳಿ ಪೂರ್ವ ವಲಯದ ಉಪ ವಿಭಾಗದ ಮುಖ್ಯಸ್ಥ ವಿವೇಕ್ ನಿಂಬರಗಿ, ಧಾರವಾಡ ಐಪಿಪಿಬಿ ಮ್ಯಾನೇಜರ್ ಶಿವಯೋಗಿ ಅವರ ಉಪಸ್ಥಿತಿಯಲ್ಲಿ ಚೆಕ್ಕನ್ನು ವಿತರಿಸಲಾಯಿತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 