ಅಪೌಷ್ಟಿಕ ಹಾಗೂ ತೀವ್ರ ಅಪೌಷ್ಟಿಕ ಮಕ್ಕಳು ಹಾಗೂ ತಾಯಂದಿರ ಆರೋಗ್ಯ ಸಬಲೀಕರಣಕ್ಕೆ ಅಕ್ಸೆಸ್ ಇಂಡಿಯಾ ಫೌಂಡೇಷನ್ ಸಹಕಾರ
ಧಾರವಾಡ 15: ಆಜಾದನಗರ ಶಾಲೆಯಲ್ಲಿ ದಿನಾಂಕ: 14ರಂದು ಬೆಳಿಗ್ಗೆ 11:30ಕ್ಕೆ ಶ್ರೀ ಸತ್ಯಸಾಯಿ ಅನ್ನಪೂರ್ಣಟ್ರಸ್ಟ್ ಚಿಕ್ಕಬಳ್ಳಾಪುರ ಹಾಗೂ ಕ್ರೆಡಿಟ್‌ಅಕ್ಸೆಸ್‌ಇಂಡಿಯಾ ಫೌಂಡೇಷನ್ ಸಹಯೋಗದೊಂದಿಗೆಅಪೌಷ್ಟಿಕ ಹಾಗೂ ತೀವ್ರ ಅಪೌಷ್ಟಿಕ ಮಕ್ಕಳು ಹಾಗೂ ತಾಯಂದಿರಆರೋಗ್ಯ ಸಬಲೀಕರಣಕುರಿತು ಸಮನ್ವಯ ಸಭೆಯನ್ನುಆಯೋಜಿಸಲಾಗಿತ್ತು.
ಸಭೆಯಲ್ಲಿ ಉಪಸ್ಥಿತರಿದ್ದ ಕ್ರೆಡಿಟ್ ಅಕ್ಸೆಸ್ ಇಂಡಿಯಾ ಫೌಂಡೇಷನ್ ವಿಭಾಗೀಯ ವ್ಯವಸ್ಥಾಪಕರಾದ ಆನಂದ ಲಮಾಣಿ ಇವರು ಉಪಸ್ಥಿತರಿದ್ದು, ತಮ್ಮ ಬ್ಯಾಂಕಿಗೆ ಲಭ್ಯವಾಗುವ ಲಾಭಾಂಶದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಹಾಗೂ ಮಕ್ಕಳಲ್ಲಿರುವ ಅಪೌಷ್ಟೀಕತೆಯನ್ನು ಹೋಗಲಾಡಿಸಲು ಶ್ರೀಸತ್ಯಸಾಯಿ ಅನ್ನಪೂರ್ಣಟ್ರಸ್ಟ್ ಚಿಕ್ಕಬಳ್ಳಾಪುರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಧಾರವಾಡ ಸಹಯೋಗದೊಂದಿಗೆ ಉಚಿತವಾಗಿ ಕಳೆದ ನಾಲ್ಕು ತಿಂಗಳಿಂದ ಸಾಯಿ ಶೂರ್‌ಚೊಕೋಮಾಲ್ಟ್‌ನ್ನು ನೀಡಲಾಗುತ್ತಿದ್ದು, ಅದನ್ನು ಸ್ವೀಕರಿಸುವ ಮಕ್ಕಳಲ್ಲಿ ಆರೋಗ್ಯ ಸುಧಾರಣೆಯಾಗಿರುವುದನ್ನು ಗಮನಿಸಲಾಗಿದೆ. ಪ್ರಸ್ತುತರಾಜ್ಯದ 5 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವುಜಾರಿಯಲ್ಲಿದ್ದು, ರಾಜ್ಯದಎಲ್ಲಾ ಜಿಲ್ಲೆಗಳಲ್ಲಿರುವ ಮಕ್ಕಳಿಗೆ ವಿಸ್ತರಿಸಲುಕ್ರಮವಹಿಸಲಾಗುತ್ತಿದೆಎಂದು ತಿಳಿಸಿರುವರು.
ಸಭೆಯಲ್ಲಿ ಉಪಸ್ಥಿತರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಕಾಂಚನಾ ಅಮಟೆಇವರು ಮಕ್ಕಳನ್ನು ಹಾಗೂ ತಾಯಂದಿರನ್ನು ಉದ್ದೇಶಿಸಿ ಮಾತನಾಡುತ್ತಾಒಬ್ಬಗರ್ಭಿಣಿಯಜೀವನದಲ್ಲಿ ಮೊದಲ ಸಾವಿರ ದಿನಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಹಿನ್ನಲೆಯಲ್ಲಿಗರ್ಭಿಣಿ ಮತ್ತು ಬಾಣಂತಿಯರು ಪೌಷ್ಟಿಕ ಆಹಾರವನ್ನು ಸೇವಿಸುವುದು ಹಾಗೂ ನಿಯಮಿತವಾಗಿಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡು ಆರೋಗ್ಯವನ್ನುಕಾಪಾಡಿಕೊಂಡಲ್ಲಿಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದಾಗಿದೆ. ವಿಷೇಶವಾಗಿ ಗರ್ಭಿಣಿಯರುಗರ್ಭಾವಸ್ಥೆಯಲ್ಲಿ ಸುಚಿತ್ವವನ್ನು ಹಾಗೂ ಪೌಷ್ಠಿಕ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಬೇಕೆಂದುಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸತ್ಯಸಾಯಿಅನ್ನಪೂರ್ಣಟ್ರಸ್ಟ್ ಚಿಕ್ಕಬಳ್ಳಾಪುರದ ಪದಾಧಿಕಾರಿಗಳಾದ ಸಂತೋಷ, ಸಾಯಿಭಾಸ್ಕರ, ಕ್ರೆಡಿಟ್‌ಅಕ್ಸೆಸ್‌ಇಂಡಿಯಾ ಫೌಂಡೇಷನ್‌ನ ಪ್ರಾದೇಶಿಕ ವ್ಯವಸ್ಥಾಪಕರಾದ ಹನುಮಂತು, ಶಾಖಾ ವ್ಯವಸ್ಥಾಪಕರಾದ ಅಶೋಕ, ಮಂಜುನಾಥ ಹಾಗೂ ಆಜಾದನಗರ ಶಾಲೆಯ ಮುಖ್ಯೋಪಾಧ್ಯಾಯರಾದ ಸುಧಾಕಟ್ಟಿಮನಿ, ಧಾರವಾಡ ಶಹರ ವಲಯದ ಮೇಲ್ವಿಚಾರಕಿಯರು ಹಾಗೂ ಅಂಗನವಾಡಿಕಾರ್ಯಕರ್ತೆ/ಸಹಾಯಕಿಯರು, ಅಪೌಷ್ಟಿಕ ಮಕ್ಕಳು ಹಾಗೂ ತಾಯಂದಿರು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು. ಶಮೀಮಬಾನು ನದಾಫ ಮಹಿಳಾ ಮೇಲ್ವಿಚಾರಕಿಇವರುಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.