ಕರಡಿ ಮನೆತನದ ಕುಡಿ ಅಭಿನವಗೆ ಅಕಾಡೆಮಿ ಪ್ರಶಸ್ತಿ
Academy Award for the performance of the son of the bear family
ಮಹಾಲಿಂಗಪುರ: ಮಹಾಲಿಂಗಪುರದ ಕರಡಿ ಮನೆತನದ ಕುಡಿ ರಬಕವಿಯ ಪದ್ಮಾವತಿ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಅಭಿನವ ಕರಡಿಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಇಲಾಖೆ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ 2022-23 ನೇ ಸಾಲೀನ ಬಹುಮುಖ ಪ್ರತಿಭೆ ಕ್ಷೇತ್ರದ * ಬಾಲ ಗೌರವ ಪ್ರಶಸ್ತಿ ಪಡೆದ ಕುವರ.
ಇದೇ ಡಿಸೆಂಬರ 16 ರಂದು ಬೆಳಗಾವಿಯ ಸುವರ್ಣಸೌಧದ ಸಭಾಂಗಣದಲ್ಲಿ ಜರುಗಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು.ಸುಮಾರು 22 ತಲೆಮಾರುಗಳಿಂದ ಕರಡಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಸನ್ 1882 ರಲ್ಲಿ ಮುಧೋಳ ಆಸ್ಥಾನದ ಕಲಾವಿದರಾಗಿ ಸೋಲಾಪೂರ ಮಹಾರಾಜರ ಮುಂದೆ ಕಾರ್ಯಕ್ರಮ ನೀಡಿ ಬಂಗಾರದ ಪದಕ ಪಡೆದವರು ಪಟ್ಟಣದ ಕರಡಿ ಮನೆತನದವರು.
ಸುಮಾರು 500 ವರ್ಷಗಳಿಂದ ಪಟ್ಟಣದ ಮಹಾಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ನಿರಂತರ ತಮ್ಮ ಕರಡಿ ಕಲಾ ಸೇವೆ ಸಲ್ಲಿಸುತ್ತಿರುವ ಕಲಾವಿದರ ಮನೆತನದಲ್ಲಿ ಜನಿಸಿದ ಅಭಿನವ ಆತನ ಅಜ್ಜ ಗಂಗಪ್ಪ ತಂದೆ ಚಂದ್ರಶೇಖರ ಅವರಿಂದ ಕಲೆಯನ್ನು ರೂಢಿಸಿಕೊಂಡ.ಕೇವಲ ಮೂರು ವರ್ಷದವನಿದ್ದಾಗಿನಿಂದಲೂ ಕರಡಿ ಕಲಾ ಸೇವೆಯಲ್ಲಿ ತೊಡಗಿರುವ ಈತ ತನ್ನ ವಯಸ್ಸಿನ ಹುಡುಗರನ್ನುಕಟ್ಟಿಕೊಂಡು ಕಲಾ ತಂಡವನ್ನೆ ಕಟ್ಟಿದ್ದಾನೆ.ಹುನ್ನೂರಿನ ಶರಣ ಈಶ್ವರ ಮಂಟೂರ ಅವರು ಗುರುಕುಲ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಈತನಿಗೆ ಕಲೆ ಪ್ರದರ್ಶಿಸಲು ಅವಕಾಶ ನೀಡಿದ್ದರಿಂದ ಅಲ್ಲಿ ಸಂಗೀತಬ್ರಹ್ಮ ಹಂಸಲೇಖಾ ಅವರ ಸಮ್ಮುಖದಲ್ಲಿ ಕರಡಿ ಕಲೆ ಪ್ರದರ್ಶಿಸಿ ಅವರಿಂದ ಸೈ ಎನಿಸಿಕೊಂಡಿದ್ದಾನೆ.
ಪ್ರಶಸ್ತಿಗಳು : ಈಗಾಗಲೇ ಈತನಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಲಾ ಶ್ರೀ ಪ್ರಶಸ್ತಿ ನೀಡಿದೆ.ಬೆಳಗಾವಿ ಜಿಲ್ಲೆಯ ಬ್ಯಾಕೋಡದಲ್ಲಿ ಜರುಗಿದ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಂಸ್ಕೃತಿಕ ಸಮ್ಮೇಳನದಲ್ಲಿ ಕರ್ನಾಟಕ ಬಾಲ ಕಲಾ ರತ್ನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಸನ್ಮಾನಗಳು ಈತನ ಮುಡಿಗೇರಿವೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 