ಲೋಕದರ್ಶನ ವರದಿ
ಬೆಳಗಾವಿ: ನಗರದ ಅಂಗಡಿ ಇಂಟರನ್ಯಾಷನಲ್ ಸ್ಕೂಲಿನ ವಿದ್ಯಾಥರ್ಿಗಳು ಇತ್ತಿಚೆಗೆ ಬೆಂಗಳೂರಿನಲ್ಲಿ ಕಿಡ್ಸ ಕನ್ಸೆಪ್ಟ್ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ಅಬ್ಯಾಕಸ್ (ಮಣಿಚೌಕ) ಸ್ಪಧರ್ೆಯಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿದ್ದಾರೆ.
ದೇಶದ ಹತ್ತಕ್ಕೂ ಹೆಚ್ಚು ರಾಜ್ಯಗಳ ಸ್ಕೂಲಿನ ವಿದ್ಯಾಥರ್ಿಗಳು ಭಾಗವಹಿಸಿದ್ದ ಈ ಸ್ಪಧರ್ೆಯಲ್ಲಿ ನಗರದ ಅಂಗಡಿ ಇಂಟರನ್ಯಾಷನಲ್ ಸ್ಕೂಲಿನ 18 ವಿದ್ಯಾಥರ್ಿಗಳು ಭಾಗವಹಿಸಿದ್ದರು. ಕೇವಲ 6 ನಿಮಿಷದಲ್ಲಿ 100 ಲೆಕ್ಕಗಳನ್ನು ಬಿಡಿಸುವ ಈ ಸ್ಪಧರ್ೆಯಲ್ಲಿ ಅಂಗಡಿ ಸ್ಕೂಲಿನ ಹತ್ತು ವಿದ್ಯಾಥರ್ಿಗಳು ಎಲ್ಲರಿಗಿಂತ ಹೆಚ್ಚು ಲೆಕ್ಕಗಳನ್ನು ಬಿಡಿಸುವುದರ ಮೂಲಕ ಮುಂಚೂಣಿ ಸಾಧಿಸಿ ಪ್ರಥಮ, ದ್ವಿತಿಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿದರು.
ವಿದ್ಯಾಥರ್ಿಗಳಾದ ಸಂಯುಕ್ತ ವಿರಲೆ, ಶಿವಶಂಕರ ಅಂಗಡಿ ಹಾಗೂ ಶೃತಿಕಾ ಮುಲಿಕ್ ಪ್ರಥಮ ಸ್ಥಾನವನ್ನು, ಆಯುಷ್ ಯಲ್ಲೆಟ್ಟಿಕರ ಹಾಗೂ ಸುಜಲ್ ಕುಮಾರ ದ್ವಿತಿಯ ಸ್ಥಾನವನ್ನು, ಪ್ರಜ್ವಲ್ ಎಲಿಗಾರ್ ಹಾಗೂ ರಸಿಕಾ ಚೌಗುಲೆ ತೃತಿಯ ಸ್ಥಾನವನ್ನು ಹಾಗೂ ಡಿ. ಸತ್ಯವಿಜಯ್, ಧನ್ವಿ ರಾಜಪ್ಪನವರ ಮತ್ತು ಕರುಣಾ ಕೋರಜಕರ ಸಮಾಧಾನಕರ ಬಹುಮಾನ ಗಳಿಸಿ ಶಾಲೆಗೆ ಕೀತರ್ಿಯನ್ನು ತಂದಿರುತ್ತಾರೆ.
ವಿದ್ಯಾಥರ್ಿಗಳ ಈ ಯಶಸ್ವಿ ಸಾಧನೆಗೆ ಸಂಸ್ಥೆಯ ಚೇರಮನ್ ಹಾಗೂ ಸಂಸದ ಸುರೇಶ ಅಂಗಡಿ, ನಿದರ್ೇಶಕಿ ಡಾ. ಸ್ಪೂತರ್ಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಮುಖ್ಯೋಪಾಧ್ಯಾಯೆ ಆಶಾ ರಜಪೂತ, ತರಬೇತುದಾರರಾದ ಶೈಲಶ್ರೀ ಪಿ.ಬಿ. ಹಾಗೂ ರಶ್ಮಿ ಆರ. ಬಿ., ದೈಹಿಕ ಶಿಕ್ಷಕ ಮಹಾದೇವ ಶಿರಗಾಂವಕರ, ಶಿಕ್ಷಕ ವೃಂದ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.