ಹೊಸದಿಲ್ಲಿ: ದೆೇಶದಲ್ಲಿ ಗುರುತಿನ ಚೀಟಿ ಆಗಿದ್ದ ಆಧಾರ್ ಕಾಡರ್್ಅನ್ನು ಸಕರ್ಾರದ ಹಲವು ಯೋಜನೆಗಳಿಗೆ ಕೇಂದ್ರ ಸಕರ್ಾರ ಲಿಂಕ್ ಮಾಡಿಸಿದ್ದು, ಕಡ್ಡಾಯಗೊಳಿಸಿದ್ದು ಈಗ ಸಕಾರಾತ್ಮಕ ಪರಿಣಾಮ ಬೀರಿದ್ದುಘಿ, ಇದೊಂದು ಗೇಮ್ ಚೇಂಜರ್ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಈ ಕುರಿತು ೇಸ್ಬುಕ್ ಮಾಹಿತಿ ನೀಡಿರುವ ಜೇಟ್ಲಿಘಿ, ಆಧಾರ್ ಬಳಕೆಯಿಂದ ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಿದೆ. ಈ ಉಳಿಕೆ ಹಣದಿಂದ ಆಯುಷ್ಮಾನ್ ಧಾರತ್ನಂತಹ ಮೂರು ಬೃಹತ್ ಯೋಜನೆ ಜಾರಿಗೊಳಿಸಬಹುದು ಎಂದು ಹೇಳಿದ್ದಾರೆ.
ಯುಪಿಎ ಸಕರ್ಾರದ ಅವಯಲ್ಲಿ ಆಧಾರ್ ಜಾರಿಗೊಳಿಸಿದರೂ, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಲು ಆಗಿರಲಿಲ್ಲಘಿ. ಹಾಗಾಗಿ ನಕಲಿ ಆಧಾರ್ಗಳು ಸೃಷ್ಟಿಯಾಗಿದ್ದವು. ಆದರೆ ಎನ್ಡಿಎ ಸಕರ್ಾರವು ಕಾನೂನು ರಚಿಸಿ, ನಿಯಮ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ನಕಲಿ ಆಧಾರ್ ಕಾಡರ್್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.
ನಕಲಿ ಆಧಾರ್ ಕಾಡರ್್ಗಳ ನಿಷ್ಕ್ರಿಯಗೊಳಿಸುವಿಕೆ, ಇವುಗಳನ್ನು ಬಳಸಿ ಕೇಂದ್ರ ಸಕರ್ಾರದ ಯೋಜನೆಗಳನ್ನು ಅಕ್ರಮವಾಗಿ ಪಡೆಯುವುದು ಸೇರಿ ಹಲವು ಕ್ರಮ ಕೈಗೊಂಡ ಕಾರಣ ಮಾಚರ್್ 2018ರ ವೇಳೆಗೆ ಕೇಂದ್ರ ಸಕರ್ಾರಕ್ಕೆ 90 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆಧಾರ್ ಕಾಡರ್್ ಜಾರಿಗೊಳಿಸಿದ್ದು ನಾವೇ ಎಂದು ಯುಪಿಎ ಬಡಾಯಿ ಕೊಚ್ಚಿಕೊಳ್ಳುತ್ತದೆ. ಆದರೆ, ಆಧಾರ್ಅನ್ನು ಜನರಿಗೆ ಹೇಗೆ ಉಪಯೋಗವಾಗುವಂತೆ ಮಾಡಿ ತೋರಿಸಿದ್ದು ನರೇಂದ್ರ ಮೋದಿ ನೇತೃತ್ವದ ಸಕರ್ಾರ. ಇದರಿಂದ ಸಕರ್ಾರದ ಯೋಜನೆಯ ಹಣವು ಜನರ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ಈ ತಂತ್ರಜ್ಞಾನವು ಅಂತಾರಾಷ್ಟ್ರೀಯವಾಗಿ ಧಾರತದಲ್ಲಿ ಮಾತ್ರ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.
ದೇಶದ ಜನರಿಗೆ ಸಬ್ಸಿಡಿ ಹಣ ವಗರ್ಾವಣೆ ಮಾಡಲು ಆಧಾರ್ ಕಾಡರ್್ ಸಹಕಾರಿಯಾಗಿದೆ. ಇದುವರೆಗೆ ಸಕರ್ಾರವು ಜನರಿಗೆ ಆಧಾರ್ ಪರಿಗಣನೆಗೆ ತೆಗೆದುಕೊಂಡು 1.69 ಲಕ್ಷ ಕೋಟಿ ರೂ. ವಗರ್ಾವಣೆ ಮಾಡಿದೆ.
ಆಧಾರ್ ಸುಧಾರಣೆಗಾಗಿ ಕೇಂದ್ರ ಸಕರ್ಾರವು 2016ರಲ್ಲಿ ಆಧಾರ್ ಮಸೂದೆಗೆ ಅಂಗೀಕಾರ ನೀಡಿ ಕಾಯ್ದೆ ರೂಪಿಸಿದ ಈ 28 ತಿಂಗಳಲ್ಲಿ 122 ಕೋಟಿ ಆಧಾರ್ ಸಂಖ್ಯೆ ನೋಂದಣಿ ಮಾಡಲಾಗಿದೆ. ಅದರಲ್ಲೂ ದೇಶದಲ್ಲಿರುವ 18 ವರ್ಷದ ಯುವಕರಲ್ಲಿ ಶೇ.99ರಷ್ಟು ಜನರಿಗೆ ಆಧಾರ್ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪಾಹಲ್ ಹಾಗೂ ಉಜ್ವಲ ಯೋಜನೆ ಅನ್ವಯ ಅಡುಗೆ ಸಿಲಿಂಡರ್ ಗ್ಯಾಸ್ ಖರೀದಿಗೆ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ಗಳಿಗೆ ನೇರವಾಗಿ 22.80 ಕೋಟಿ ರೂ. ಸಬ್ಸಿಡಿ ಹಣ ವಗರ್ಾಯಿಸಲಾಗಿದೆ. ಇದೇ ರೀತಿ, 58.24 ಕೋಟಿ ರೇಷನ್ ಕಾಡರ್್ ಹೊಂದಿದವರು ಹಾಗೂ ನರೇಗಾ ಕಾಡರ್್ ಇರುವವರಿಗೆ ನೇರವಾಗಿ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.