ನವದೆಹಲಿ 25: ವಿಶಿಷ್ಟ ಗುರುತಿನ ಸಂಖ್ಯೆ(ಆಧಾರ್)ಯ ಸಾಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂ ಕೋಟರ್್ ಬುಧವಾರ ಮಹತ್ವದ ತೀಪರ್ು ಪ್ರಕಟಿಸಲಿದೆ.
ದೇಶದ ಏಕೈಕ ಬಯೋಮೆಟ್ರಿಕ್ ರಾಷ್ಟ್ರೀಯ ಗುರುತಿನ ಚೀಟಿಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ದೇಶಾದ್ಯಂತ ಹಲವಾರು ಅಜರ್ಿಗಳು ಸವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 38 ದಿನಗಳ ಕಾಲ ಎಲ್ಲಾ ಅಜರ್ಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂತರ್ಿಗಳ ಸಾಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿದ್ದು, ನಾಳೆ ಪ್ರಕಟಿಸಲಿದೆ.
ಸುಪ್ರೀಂ ಕೋಟರ್್ ಈ ಹಿಂದೆ ಖಾಸಗಿತನವನ್ನು ಎತ್ತಿ ಹಿಡಿದು ತೀಪರ್ು ನೀಡಿದ್ದರಿಂದಾಗಿ ಆಧಾರ್ ತೀಪರ್ಿನ ಬಗ್ಗೆಯೂ ಈಗ ಕುತೂಹಲ ಮೂಡಿದೆ.
ಕೇಂದ್ರದ ಪರವಾಗಿ ಅಟೊನರ್ಿ ಜನರಲ್ ಕೆ.ಕೆ.ವೇಣುಗೋಪಾಲ್, ಹಿರಿಯ ವಕೀಲರಾದ ಕಪಿಲ್ ಸಿಬಲ್, ಪಿ.ಚಿದಂಬರಂ, ರಾಕೇಶ್ ದ್ವಿವೇದಿ, ಶ್ಯಾಮ್ ದಿವಾನ್, ಅರವಿಂದ್ ದಾತಾರ್ ಅವರು ವಿವಿಧ ಪಕ್ಷಗಳ ಪರವಾಗಿ ವಾದ ಮಂಡಿಸಿದ್ದಾರೆ.
ಸಂವಿಧಾನ ಪೀಠದಲ್ಲಿ ನ್ಯಾಯಮೂತರ್ಿಗಳಾದ ಎ.ಕೆ.ಸಿಕ್ರಿ, ಎ.ಎಮ್.ಖನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಕೂಡ ಇದ್ದಾರೆ.
ಆಧಾರ್ ಸಂಖ್ಯೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕನರ್ಾಟಕ ಹೈಕೋಟರ್್ ನ ಮಾಜಿ ನ್ಯಾಯಾಧೀಶ ನ್ಯಾಯಮೂತರ್ಿ ಕೆ.ಎಸ್.ಪುಟ್ಟಸ್ವಾಮಿ ಅವರು ಮೂಲ ಅಜರ್ಿದಾರರಾಗಿದ್ದು, ಒಟ್ಟು 27 ಅಜರ್ಿದಾರರು ಸುಪ್ರೀಂ ಕೋಟರ್್ ಗೆ ಅಜರ್ಿ ಸಲ್ಲಿಸಿದ್ದರು.
ಆಧಾರ್ ಯೋಜನೆಗೆ ಸಾಂವಿಧಾನಿಕ ಸ್ವರೂಪ ನೀಡುವ ನಿಟ್ಟಿನಲ್ಲಿ ಕೇಂದ್ರ ಸಕರ್ಾರ 2016ರಲ್ಲಿ ಕಾಯ್ದೆ ಪಾಸು ಮಾಡಿತ್ತು.