ನಾಳೆ ಅಸ್ಕಿ ಫೌಂಡೇಷನ್‌ದಿಂದ ಇಪ್ತಿಯಾರ ಕೂಟ
ಮುದ್ದೇಬಿಹಾಳ 10: ರಂಜಾನ ಹಬ್ಬವು ಮುಸ್ಲಿಂ ಬಾಂಧವರಿಗೆ ಪವಿತ್ರ ಹಬ್ಬವಾಗಿದೆ ಮಾತ್ರವಲ್ಲದೇ ಮುಸ್ಲಿಂ ಸಮುದಾಯದ ಬಹುತೇಕ ಆಚರಣೆಗಳಿಗೆ ವೈಜ್ಞಾನಿಕ ಹಿನ್ನೆಲೆ ಇದ್ದು, ಇವು ಉತ್ತಮ ಆರೋಗ್ಯ ಹೊಂದಲು ಪೂರಕವಾಗಿವೆ. ಈ ಹಿನ್ನೆಲೆಯಲ್ಲಿ ಇದೆ ದಿ. 12ರಂದು ಸಂಜೆ 6 ಗಂಟೆಗೆ ಅಸ್ಕಿ ಪೌಂಡೇಷನ್ ವತಿಯಿಂದ ಮುಸ್ಲೀಂ ಬಾಂಧವರಿಗಾಗಿ ರಂಜಾನ್ ಹಬ್ಬದ ಅಂಗವಾಗಿ ಉಪವಾಸ ನಿರತರಿಗೆ ಪಟ್ಟಣದ ಮೈಬೂಬ ನಗರದಲ್ಲಿರುವ ಶಾದಿ ಹಾಲ್‌ನಲ್ಲಿ ಸಾರ್ವಜನಿಕ ಇಪ್ತಿಯಾರ ಕೂಟ ಹಮ್ಮಿಕೊಳ್ಳಲಾಗಿದೆ ಕಾರಣ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಅಸ್ಕಿ ಫೌಂಡೆಶನ್ ಮುಖ್ಯಸ್ಥ ಸಿ ಬಿ ಅಸ್ಕಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಲವು ವರ್ಷಗಳಿಂದ ಅಸ್ಕೀ ಪೌಂಡೇಷನ್ ವತಿಯಿಂದ ರಸ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ ಹಿಂದೂಗಳ ಧಾರ್ಮಿಕ ಕಾರ್ಯಕ್ರಮ ಹೀಗೆ ಅನೇಕ ರೀತಿಯಲ್ಲಿ ಸಾಮಾಜಿಕ ಸೇವೆ ಮಾಡುತ್ತಲೆ ಬಂದಿದೆ. ಅದರಂತೆ ಕಳೇದ 8 ವರ್ಷಗಳಿಂದ ಅಸ್ಕಿ ಪೌಂಡೇಷನ್ ವತಿಯಿಂದ ರಂಜಾನ ಹಬ್ಬದ ಪ್ರಯುಕ್ತ ಉಪವಾಸ ವೃತ ಆಚಿಸುವ ಮುಸ್ಲಿಂ ಬಾಂದವರಿಗಾಗಿ ಇಪ್ತಿಯಾರ ಕೂಟ ಏರಿ್ಡಸುವ ಮೂಲಕ ಹಿಂದೂ ಮುಸ್ಲಿಂ ಎನ್ನುವ ಭೇದಭಾವ ತೋರದೇ ಎಲ್ಲರೂ ಸಮಾನರೂ ಎನ್ನುವ ತತ್ವದಡಿಯಲ್ಲಿ ಈ ಸಾಮಾಜಿಕ ಕಾರ್ಯ ಮಾಡುತ್ತಿದೆ. ಸ್ಥಿತಿವಂತರು ದಾನ ಮಾಡುವುದು ಒಂದು ಸಂಪ್ರದಾಯವಾದರೆ, ಉಪವಾಸ ಮಾಡಿದರೆ ದೇಹದ ಆರೋಗ್ಯ ಉತ್ತಮವಾಗಿರುವುದು. ಇನ್ನೂ ಪ್ರಾರ್ಥನೆ ಸಲ್ಲಿಸಿ ಉಪವಾಸ ವೃತ ಸಲ್ಲಿಸುವವರಿಗೆ ಅಲ್ಪ ಅಪ್ತಿಯಾರ ಸೇವೆ ಮಾಡುತ್ತಿರುವುದು ಮನಸ್ಸಿಗೆ ಶಾಂತಿ ಲಭಿಸುತ್ತದೆ. ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ. ಧಾರ್ಮಿಕ ಆಚರಣೆ ನೆಪದಲ್ಲಿ ಸೌಹಾರ್ದ ಇಪ್ತಿಯಾರ ಕೂಟ ಹಮ್ಮಿಕೊಳ್ಳುವ ಮೂಲಕ ಪರಸ್ಪರಲ್ಲಿ ಪ್ರೀತಿ ವಿಶ್ವಾಸ ಗಟ್ಟಿಗೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು. ಖಾಜಿ ಅಲ್ಲಾಭಕ್ಷ ಮೋಲಾನಾ, ಇಸಾಕ ಮಾಗಿ ಕಾರಿಸಾಬ, ಹುಸೇನ್ ಮೌಲಾನಾ ಚೌಧರಿ, ರಫೀಕ ಮೌಲಾನಾ ನದಾಫ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಜಬ್ಬಾರ ಗೊಲಂದಾಜ, ಮುನ್ನಾ ಮಕಾಂದಾರ, ಸಂಗಣ್ಣ ಮೇಲಿಮನಿ, ಹುಸೇನ ಮುಲ್ಲಾ, ದಾವಲ ಗೊಳಸಂಗಿ, ರಮಜಾನ ನದಾಫ ಸೇರಿದಂತೆ ಹಲವರು ಇದ್ದರು.