ಮನರೇಗಾ ಕಾಯ್ದೆ ತಿದ್ದುಪಡಿವಿರೋಧಿಸಿ ಎಐಕೆಕೆಎಂ ಎಸ್ ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ
AIKKMS holds massive statewide protest against MGNREGA amendment
ಧಾರವಾಡ ಹುಬ್ಬಳ್ಳಿ 27: ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ- 2025 (ವಿಬಿಹಿಜಿ ಆರ್ ಎ ಎಮ್ ಜಿ) ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಎಐಕೆಕೆಎಂ ಎಸ್ ರೈತ ಸಂಘಟನೆ ನೇತೃತ್ವದಲ್ಲಿ ನೂರಾರು ಕೂಲಿ ಕಾರ್ಮಿಕರು ಇಂದು ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನಿ ಯವರಿಗೆ ಮತ್ತು ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ರಾಜ್ಯಉಪಾಧ್ಯಕ್ಷರಾದ ವಿ ನಾಗಮ್ಹಾಳ ಅವರು ಮಾತನಾಡುತ್ತಾ ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿಪಡಿಸುವ ಉದ್ದೇಶದಿಂದ ತಂದಿದ್ದ ಎಂಜಿ ನರೇಗಾ ಕಾಯ್ದೆಯ ಬದಲಿಗೆ 'ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ- 2025 ಅನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಹೀನ ಪ್ರಯತ್ನವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ.
ಈ ಮಸೂದೆಯು ಎಂಜಿ ನರೇಗಾ ಕಾಯ್ದೆಯನ್ನು ಮತ್ತು ಅದರಲ್ಲಿದ್ದ ಉದ್ಯೋಗದ ಶಾಸನಬದ್ಧ ಖಾತ್ರಿಯನ್ನು ತೆಗೆದುಹಾಕುವುದು ಹಾಗೂ ಅದರ ಬದಲಿಗೆ ಗ್ರಾಮೀಣ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಯೋಜನೆಯ ಅನುಷ್ಠಾನದಿಂದಾಗಿ ಉದ್ಯೋಗದ ಭರವಸೆಯನ್ನು ಇಲ್ಲವಾಗಿಸುತ್ತದೆ. ಯೋಜನೆಯ ಕುರಿತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಗಳ ಯಾವುದೇ ಪಾತ್ರವನ್ನು ನಿರಾಕರಿಸುತ್ತಾ, ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ನೀಡಿ, ಒಕ್ಕೂಟ ವ್ಯವಸ್ಥೆ ಅಡಿಪಾಯವನ್ನು ನಾಶಗೊಳಿಸುವ ಪ್ರಯತ್ನವಾಗಿದೆ. ಹಾಗೆಯೇ, ಕೇಂದ್ರ ಬಿಜೆಪಿ ಸರ್ಕಾರವು ತನ್ನ ಹಣಕಾಸಿನ ಜವಾಬ್ದಾರಿಯನ್ನು ಶೇ.60 ಕ್ಕೆ (ಹಿಂದೆ ಶೇ.100) ಇಳಿಸುವುದು ಮತ್ತು ಅದರ ಶೇ.40 ರಷ್ಟು ಹೊರೆಯನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸುವುದಾಗಿದೆ.ಜಾಬ್ ಕಾರ್ಡ್‌ಗಳನ್ನು ಸುಧಾರಣೆ ಮಾಡುವ ಘೋಷಣೆಯ ಮೂಲಕ ಗ್ರಾಮೀಣ ಜನರನ್ನು ಉದ್ಯೋಗದ ಹಕ್ಕಿನಿಂದ ವಂಚಿತರನ್ನಾಗಿ ಮಾಡುವುದು ಈ ಯೋಜನೆಯ ಭಾಗವಾಗಿದೆ.ಈಗ ಗ್ರಾಮೀಣ ಬಡ ಜನತೆಗೆ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಒದಗಿಸುವುದು ಈ ಘಳಿಗೆಯ ಅವಶ್ಯಕತೆ ಮತ್ತು ಈ ಕಾರ್ಯ ಕೇಂದ್ರ ಸರ್ಕಾರದ ಜವಾಬ್ದಾರಿ ಆಗಿರುವಾಗ,ಈ ಕೇಂದ್ರ ಬಿಜೆಪಿ ಸರ್ಕಾರ ಅದಕ್ಕೆ ಸಂಪೂರ್ಣವಾಗಿ ವಿರುದ್ಧ ಗತಿಯಲ್ಲಿ ನಡೆದಿದೆ.
ಈ ಪ್ರಸ್ತಾಪಿತ ಮಸೂದೆಯು ಗ್ರಾಮೀಣ ಬಡ ಜನತೆಯ ಬದುಕುವ ಹಕ್ಕಿನ ಮೇಲಿನ ದಾಳಿ ಆಗಿರುವುದರಿಂದ ಅದನ್ನು ತೀರ್ವವಾಗಿ ಖಂಡಿಸುತ್ತೇವೆ ಎಂದರು.ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ ಮಾತನಾಡಿ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಮಸೂದೆಯನ್ನು ಕೈ ಬಿಟ್ಟು, ಈ ಹಿಂದೆ ಇದ್ದ ಮನರೇಗಾ ಯೋಜನೆಯನ್ನು ಮುಂದುವರಿಸಬೇಕು, ಮತ್ತು ಕೂಲಿ ಕಾರ್ಮಿಕರ ಬದುಕನ್ನು ಸುಧಾರಿಸುವ ಸಲುವಾಗಿ ಪ್ರತಿ ಕುಟುಂಬಕ್ಕೆ 200 ಮಾನವ ದಿನಗಳ ಕೆಲಸ, 600 ರೂ ವೇತನವನ್ನು ನೀಡಬೇಕು.ಇಲ್ಲದಿದ್ದಲ್ಲಿ, ಕೇಂದ್ರ ಬಿಜೆಪಿ ಸರ್ಕಾರದ ಈ ಜನ ವಿರೋಧಿ, ಕಾರ್ಮಿಕ ವರ್ಗ ವಿರೋಧಿ ಪ್ರಯತ್ನವನ್ನು ಸೋಲಿಸಲು, ವಿಬಿಜಿ ರಾಮ್‌ಜಿ ಮಸೂದೆ ಹಿಂದಕ್ಕೆ ಪಡೆಯುವವರೆಗೂಕೊನೆಯವರೆಗೂ ಹೋರಾಡಲು, ಮುಂದೆ ಬರಬೇಕೆಂದು ದುಡಿಯುವ ಜನರಿಗೆ ಕರೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶರಣು ಗೋನವರ, ಸಮಿತಿಯ ಸದಸ್ಯರಾದ ರಾಣಪ್ಪ ಸಾವಂತನವರ, ಮಡಿವಾಳಪ್ಪ, ಮಲ್ಲಪ್ಪ, ಮಾರುತಿ ಪೂಜಾರ, ಸಿದ್ದಮ್ಮ, ಮಂಜುನಾಥ ಪಾಟೀಲ, ವಿಜಯಲಕ್ಷ್ಮಿ ನಿಕ್ಕಮ್, ಶ್ರೀದೇವಿ ದೊಡ್ಡಮನೆ, ಹನುಮವ್ವ, ಇಮಾಮ್ ಸಾಬ್, ಮುಂತಾದವರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 