ಕೆ.ಪಿ.ಆರ್‌.ಎಸ್ ರಾಜ್ಯಾಧ್ಯಕ್ಷರಾದ ಜಿ.ಸಿ ಬಯ್ಯಾರೆಡ್ಡಿ ಅವರ ಅಗಲಿಕೆಗೆ ಎಐಕೆಕೆಎಂಎಸ್ ನಿಂದ ಸಂತಾಪ

AIKKMS condoles the demise of KPRS State President GC Bayareddy


ಕೆ.ಪಿ.ಆರ್‌.ಎಸ್ ರಾಜ್ಯಾಧ್ಯಕ್ಷರಾದ ಜಿ.ಸಿ ಬಯ್ಯಾರೆಡ್ಡಿ ಅವರ ಅಗಲಿಕೆಗೆ ಎಐಕೆಕೆಎಂಎಸ್ ನಿಂದ ಸಂತಾಪ 

ಬಳ್ಳಾರಿ 04: ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಕಾಮ್ರೇಡ್ ಜಿ.ಸಿ.ಬಯ್ಯಾರೆಡ್ಡಿ ಅವರ ನಿಧನಕ್ಕೆ   ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಸಂತಾಪ ಸೂಚಿಸುತ್ತಾ ಈ ರೀತಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.  ಅವರು ದಿನಾಂಕ 04-01-2025 ರ ಬೆಳಿಗ್ಗೆ 3 ಗಂಟೆಗೆ ನಿಧನರಾಗಿದ್ದಾರೆ, ಅವರ ನಿಧನಕ್ಕೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಎಂಎಸ್) ತೀವ್ರ ಸಂತಾಪವನ್ನು ಸೂಚಿಸುತ್ತದೆ ಅವರ ನಿಧನದಿಂದಾಗಿ ರೈತ ಚಳುವಳಿಗೆ ಅದರಲ್ಲೂ ಮುಖ್ಯವಾಗಿ ಸಂಯುಕ್ತ ಹೋರಾಟಕ್ಕೆ ಸಾಕಷ್ಟು ನಷ್ಟವಾಗಿದೆ. ರೈತ ವಿರೋಧಿ ಕಾಯ್ದೆಗಳು ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಸಂಘಟಿಸುವಲ್ಲಿ ಹಲವು ದಶಕಗಳ ಕಾಲ ಸಕ್ರಿಯವಾದ ಮತ್ತು ಮಹತ್ವದ ಪಾತ್ರವನ್ನು ಅವರು ವಹಿಸಿದ್ದರು. ರೈತ ಚಳುವಳಿಯಲ್ಲಿ ಅವರ ಆರಂಭಿಶೀಲತೆ ಮತ್ತು ಹುರುಪನ್ನು ನೆನಪಿಸಿಕೊಳ್ಳುತ್ತಾ ಎಐಕೆಕೆಎಂಎಸ್ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ​‍್ಿಸುತ್ತದೆ ಎಂದರು.