ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಲೂಲೂ ಎಐಡಿವೈ ಓ ಆಗ್ರಹ

AIDY also demanded to provide basic facilities for post-matric boys hostel

ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಲೂಲೂ ಎಐಡಿವೈ ಓ ಆಗ್ರಹ

ಕೊಪ್ಪಳ 18: ನಗರದ ಡಿಸಿ ಕಛೇರಿ ಹತ್ತಿರದಲ್ಲಿರುವ ಎಸ್ ಟಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ  ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಎಐಡಿವೈ ಓ ನೇತೃತ್ವದಲ್ಲಿ ಜಿಲ್ಲಾ ಅಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.  

ಪ್ರತಿಭಟನೆ ಉದ್ದೇಶಿಸಿ ಎಐಡಿವೈ ಓ  ಮುಖಂಡ ಶರಣು ಗಡ್ಡಿ ಮಾತನಾಡಿ ವಸತಿ ನಿಲಯದಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ,ಕಳಪೆ ಮಟ್ಟದ ದಾನ್ಯಗಳಿಂದ ಅಡುಗೆ ಮಾಡಲಾಗುತ್ತಿದೆ.ಶುದ್ಧ ಕುಡಿಯುವ ನೀರು,  ಗ್ರಂಥಾಲಯದಲ್ಲಿ ಪುಸ್ತಕಗಳು, ಶೌಚಾಲಯ ಸ್ವಚ್ಛತೆ ಇಲ್ಲದಿರುವುದು, ಸಿಸಿಟಿವಿ ಕ್ಯಾಮೆರಾ  ಕಾರ್ಯನಿರ್ವಹಿಸದೆ ಇರುವುದು, ಕಂಪ್ಯೂಟರ್ ಗೆ ಇಂಟರ್ನೆಟ್ ಮತ್ತು ಕೀಪ್ಯಾಡ್  ಮೌಸ್  ತಾಂತ್ರಿಕ ಸಮಸ್ಯೆಗಳು ಸರಿಪಡಿಸುದೆ ಇರುವುದು, ಊಟದ ಮೆನು ಚಾಟ್ ಬದಲಿಸಿದೆ ಇರುವುದು, ವಸತಿ ನಿಲಯದ ಚರಂಡಿ  ಸ್ವಚ್ಛತೆ, ದುರ್ವಾಸನೆ ತಡೆಗಟ್ಟದೇ ಇರುವುದು, ಕಸವನ್ನ ಹಾಕಲು ಕಸ ತೊಟ್ಟಿ ಇಲ್ಲದಿರುವುದು, ಶೌಚಾಲಯದ ಬಾಗಿಲುಗಳು ಮುರಿದು ಹೋದರು ರಿಪೇರಿ ಮಾಡದೇ ಇರುವುದು, ಈ ಎಲ್ಲ ಸಮಸ್ಯೆಗಳ ಕುರಿತು  ವಸತಿ ನಿಲಯದ ವಾರ್ಡನ್  ಅವರಿಗೆ  ಗಮನಕ್ಕೆ ತಂದಿದ್ದರು  ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಆಶ್ವಾಸನೆಗಳನ್ನು ಕೊಡುತ್ತಾ  ಸಮಸ್ಯೆಗಳನ್ನು ಇಟ್ಟುಕೊಂಡು ವಸತಿಗಳನ್ನು ನಿರ್ವಹಿಸುತ್ತಿದ್ದಾರೆ. ಸಮಸ್ಯೆಗಳನ್ನು ಕೇಳಿದರೆ  ಮೇಲಾಧಿಕಾರಿಗಳಿಂದ ಒತ್ತಡ ತಂದು ಇಲ್ಲಸಲ್ಲದ ಆರೋಪವನ್ನು ವಿದ್ಯಾರ್ಥಿಗಳ ಮೇಲೆ ಮಾಡಲಾಗುತ್ತಿದೆ. ಸಮಸ್ಯೆ ಇಲ್ಲಸಲ್ಲದ ಸಬೂಬ್ ಹೇಳುತ್ತಾ ಯಾವ ವಿದ್ಯಾರ್ಥಿ ಸಮಸ್ಯೆ ಹೇಳುತ್ತಾನೇ ಆ ವಿದ್ಯಾರ್ಥಿಯ ಮೇಲೆ ವೈಯಕ್ತಿಕ ಟಾರ್ಗೆಟ್ ಮಾಡಿ ವಿದ್ಯಾರ್ಥಿ ಕುಟುಂಬಸ್ಥರಿಗೆ ಫೋನ್ ಮಾಡಿ   ಆ ವಿದ್ಯಾರ್ಥಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತದೆ. ಸಮಸ್ಯೆ ಕೇಳಿದರೆ  ವಾರ್ಡನ್ ಬೇರೊಂದು ಸಮಸ್ಯೆಯನ್ನು ಹುಟ್ಟು ಹಾಕುತ್ತಾರೆ. ಯಾವುದೇ ಸಮಸ್ಯೆಗೆ ಸ್ಪಂದಿಸದೆ ಇರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಊಟದ ಗುಣಮಟ್ಟ ಮತ್ತು  ವಸತಿ ನಿಲಯದ ಸ್ವಚ್ಛತೆ, ಶೌಚಾಲಯ, ಕನಿಷ್ಠ ಅವಶ್ಯಕತೆಗಳು ಕುರಿತು  ಮಾತನಾಡಬಾರದು ಎಂದರೆ  ಇದು ಯಾವ ನ್ಯಾಯ ಅಧಿಕಾರಿಗಳ  ಬೇಜವಾಬ್ದಾರಿಯೆ ಆಗಿದೆ. ವಾರ್ಡನ್  ಪ್ರತಿ ದಿನ ವಸತಿ ನಿಲಯಕ್ಕೆ ಹಾಜರಾಗುವುದಿಲ್ಲ, ವಿದ್ಯಾರ್ಥಿಗಳ ಮೇಲೆ ಅಸಭ್ಯ ವರ್ತನೆ ಪದಗಳ ಬಳಕೆ ಮಾಡುತ್ತಾರೆ. 

ವಿದ್ಯಾರ್ಥಿಗಳ ಕುಟುಂಬದ ಸದಸ್ಯರಿಗೆ ಫೋನ್ ಮಾಡಿ ಇಲ್ಲಸಲ್ಲದ ಆರೋಪ ಮಾಡುವುದು, ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ನಾಮಕವಸ್ತೆ ಮಾಡುವುದು ಉದಾಹರಣೆ ಸ್ವಾಮಿ ವಿವೇಕಾನಂದ ಜಯಂತಿ. ಸಮಸ್ಯೆಗಳು ಕುರಿತು ಯಾವುದೇ ಸಭೆ ಆಯೋಜಿಸದೆ ಇರುವುದು. ಒಟ್ಟಾರೆಯಾಗಿ ಹಾಸ್ಟೆಲನ್ನು ಸರಿಯಾದ ದಿಕ್ಕಿನಲ್ಲಿ ನಿರ್ವಹಣೆ ಮಾಡದಿರುವುದು ವಾರ್ಡನ್ ಮೇಲಿನ ಆರೋಪವಾಗಿದೆ. ಹಾಗಾಗಿ ಕೂಡಲೇ ಸಮಸ್ಯೆ ಪರಿಹರಿಸಿ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಒಳ್ಳೆಯ ವಾತಾವರಣ ಮತ್ತು  ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸಿ ಕೊಡಬೇಕೆಂದು ವಸತಿ ನಿಲಯದ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಮನವಿ ಮಾಡಿದರು.  

ಈ ಸಂದರ್ಭದಲ್ಲಿ ಮನವಿ ಪತ್ರವನ್ನು  ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಠ ಪಾಂಡೆ ಅವರಿಗೆ ತಾಲೂಕು ಅಧಿಕಾರಿಗಳಾದ ಶರಣಪ್ಪ ಆಶಾಪುರ ಅವರಿಗೆ ಸಲ್ಲಿಸಲಾಯಿತು.. ಒಂದು ವಾರದೊಳಗೆ ಸಮಸ್ಯೆಯನ್ನು ಪರಿಹಾರಿಸುತ್ತೇವೆಂದು ಅಧಿಕಾರಿಗಳು ಬರವಸೆ ನೀಡಿದರು. ಈ ಸಂದರ್ಭದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಾದ  ಪ್ರಕಾಶ್ ಪರಶುರಾಮ್ ನಾಗರಾಜ್ ಬಸವರಾಜ್  ವಿನಾಯಕ್ ಮೂರ್ತಿ ಯಮನೂರ್ ಕನಕರಾಯ ಹನುಮೇಶ್, ಹರಿಕೃಷ್ಣ, ಶರಣಬಸವ, ಮಹೇಶ್, ಮುಂತಾದ ಹಾಸ್ಟೆಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.