ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ನಡೆಯನ್ನು ಎಐಡಿಎಸ್‌ಓ ಖಂಡನೆ

AIDSO condemns the government's move to close schools

ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ನಡೆಯನ್ನು ಎಐಡಿಎಸ್‌ಓ ಖಂಡನೆ

ಬಳ್ಳಾರಿ 20: ರಾಜ್ಯದಕಾಂಗ್ರೆಸ್ ಸರ್ಕಾರವು ’ ಹಬ್‌ಅಂಡ್ ಸ್ಪೋಕ್ ’ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಕಡಿಮೆ ಹಾಜರಾತಿಇರುವ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ಸಂಯೋಜನೆಗೊಳಿಸುವುದಾಗಿ ಸರ್ಕಾರವು ತಿಳಿಸಿದೆ.ಈ ಮೂಲಕ ಕರ್ನಾಟಕರಾಜ್ಯಕಾಂಗ್ರೆಸ್ ಸರ್ಕಾರವುರಾಜ್ಯದ ಬಡಜನರ ಮಕ್ಕಳ ಶಿಕ್ಷಣದ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ.4ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ಈ ನಡೆಯನ್ನುಎಐಡಿಎಸ್‌ಓ ಬಳ್ಳಾರಿ ಜಿಲ್ಲಾ ಸಮಿತಿಯುಅತ್ಯುಗ್ರ ಪದಗಳಲ್ಲಿ ಖಂಡಿಸುತ್ತದೆ. 

ಹಿಂದಿನ ಬಿಜೆಪಿ ರಾಜ್ಯ ಸರ್ಕಾರವುಇದೇ ನೆಪವೊಡ್ಡಿಎನ್‌ಈಪಿ-2020ರ ಅಡಿಯಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು.ಅದರ ವಿರುದ್ಧರಾಜ್ಯದ ವಿದ್ಯಾರ್ಥಿಗಳು ಎಐಡಿಎಸ್‌ಓ ನೇತೃತ್ವದಲ್ಲಿ ಬೃಹತ್‌ಆಂದೋಲನ ನಡೆಸಿ 35 ಲಕ್ಷಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸುವುದರ ಮೂಲಕ ಶಾಲೆಗಳನ್ನ ರಕ್ಷಿಸಿದ್ದರು.ಆದರೆ, ಈಗ ಮತ್ತೆ ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ಮುಖಾಂತರಕರ್ನಾಟಕರಾಜ್ಯಕಾಂಗ್ರೆಸ್ ಸರ್ಕಾರವುರಾಜ್ಯದರೈತ-ಕಾರ್ಮಿಕರು ಹಾಗೂ ಜನ ಸಾಮಾನ್ಯರಿಗೆ ವಿಶ್ವಾಸದ್ರೋಹವೆಸಗಿದೆ. 

ಬಡವರ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಿತ್ತುಕೊಳ್ಳುವ ಹುನ್ನಾರಇದಾಗಿದೆ. ಹಾಜರಾತಿಕಡಿಮೆಯಿರುವ ಶಾಲೆಗಳನ್ನು ಮುಚ್ಚುವುದು, ’ನೆಗಡಿ ಬಂದರೆ ಮೂಗು ಕತ್ತರಿಸಿದಂತೆ’! ಸರ್ಕಾರವುತನ್ನ ಈ ಅವೈಜ್ಞಾನಿಕ ಮತ್ತುಅಪ್ರಜಾತಾಂತ್ರಿಕಜನವಿರೋಧಿ ನಿರ್ಧಾರವನ್ನುಕೈಬಿಡಬೇಕು ಹಾಗೂ ಕೂಡಲೇ ಹಾಜರಾತಿಕಡಿಮೆಯಿರುವ ಶಾಲೆಗಳನ್ನು ಅವಶ್ಯಕ ಸೌಲಭ್ಯಗಳನ್ನು ನೀಡಿರಕ್ಷಿಸಬೇಕೆಂದುಎಐಡಿಎಸ್‌ಓರಾಜ್ಯ ಸರ್ಕಾರವನ್ನುಆಗ್ರಹಿಸುತ್ತದೆ ಹಾಗೂ ಇದರ ವಿರುದ್ಧ ಪ್ರಬಲ ಪ್ರತಿರೋಧ ಚಳುವಳಿ ಬೆಳೆಸಬೇಕೆಂದು ರಾಜ್ಯದ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಣಪ್ರೇಮಿ ಜನತೆಗೆಕರೆ ನೀಡುತ್ತದೆ.