ಎಐಡಿಎ 72ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸುವ ಸಂಕಲ್ಪ

ಎಐಡಿಎ 72ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸುವ ಸಂಕಲ್ಪ AIDA resolves to save public education on the occasion of its 72nd Foundation Day

ಧಾರವಾಡ 28: ಇಂದು 72ನೇ ಂಋಖಓ ವಿದ್ಯಾರ್ಥಿ ಸಂಘಟನೆಯ ಸಂಸ್ಥಾಪನಾ ದಿನಾಚರಣೆಯನ್ನು ಎಐಡಿಎ? ಕಛೇರಿಯಲ್ಲಿ ಆಚರಿಸಲಾಯಿತು. ಈಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ... ಎಐಡಿಎ? ವಿದ್ಯಾರ್ಥಿ ಸಂಘಟನೆಯನ್ನು 28 ಡಿಸೆಂಬರ್ 1954 ರಂದು ಕಾಮ್ರೇಡ್ ಶಿವದಾಸ್ ಘೋಷ್ ಅವರ ವಿಚಾರಗಳ ಪ್ರೇರಣೆಯೊಂದಿಗೆ ಮೊದಲಿಗೆ ಕಲ್ಕತ್ತದಲ್ಲಿ ಸ್ಥಾಪನೆ ಮಾಡಲಾಯಿತು. ಈಗ ಂಋಖಓ ವಿದ್ಯಾರ್ಥಿ ಸಂಘಟನೆಯು ಇಡೀ ದೇಶದಾದ್ಯಂತ ವಿದ್ಯಾರ್ಥಿಗಳ ಸಮಸ್ಯೆಗಳನ್ನು ವಿರೋಧಿಸಿ ನಿರಂತರವಾಗಿ ಹೋರಾಟ ಕಟ್ಟುತ್ತಿದೆ. ಯಾವುದೇ ಮಗು ಹಸಿವೆಯಿಂದ ನರಳಬಾರದು  ಜಾತಿ ಧರ್ಮ, ತಾರತಮ್ಯವಿಲ್ಲದೆ  ಪ್ರತಿಯೊಬ್ಬ ವಿದ್ಯಾರ್ಥಿಗೂ ಉಚಿತ ಶಿಕ್ಷಣ ದೊರೆಯಬೇಕು. ಹಾಗೂ ಪ್ರಜಾಸತ್ತಾತ್ಮಕವಾದ, ವೈಜ್ಞಾನಿಕವಾದ ಮತ್ತು ಧಾರ್ಮನಿರಪೇಕ್ಷ ಶಿಕ್ಷಣ ಎಲ್ಲರಿಗೂ ದೊರಕಬೇಕೆಂಬ ಮಹಾದಾಸಯದೊಂದಿಗೆ ಈ ಸಂಘಟನೆ ಸ್ಥಾಪನೆಯಾಗಿದೆ. 

ಆದರೆ ಈ ವ್ಯವಸ್ಥೆಯಲ್ಲಿ ಬಡ ವಿದ್ಯಾರ್ಥಿಗಳು ಮೆಡಿಕಲ್, ಇಂಜಿನಿಯರಿಂಗ್ ಮತ್ತು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ, ಕಾರಣ ಶಿಕ್ಷಣದ ವ್ಯಾಪಾರಿಕರಣ. ದುಡ್ಡು ಇರುವ ವಿದ್ಯಾರ್ಥಿಗಳು ಮಾತ್ರ ಶಿಕ್ಷಣ ಪಡೆಯುವಂತಹ ಪರಿಸ್ಥಿತಿಯನ್ನು ಈ ವ್ಯವಸ್ಥೆ ಸೃಷ್ಟಿ ಮಾಡಿದೆ. ಹಿಂದೆ ಸಾವಿತ್ರಿಬಾಯಿ ಫುಲೆ, ಜ್ಯೋತಿರಾವ್ ಫುಲೆ, ವಿದ್ಯಾಸಾಗರ್, ಭಗತ್ ಸಿಂಗ್ ಮತ್ತು ನೇತಾಜಿ ಇಂತಹ ಹಲವಾರು ಮಹಾನ್ ವ್ಯಕ್ತಿಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ದೊರೆಯಬೇಕೆಂದು ಹೋರಾಡಿದರು. ಆದರೆ ಈಗಿನ ಸರ್ಕಾರಗಳು ಇವರ ವಿಚಾರಕ್ಕೆ ವಿರುದ್ಧವಾಗಿ ಬಡ ವಿದ್ಯಾರ್ಥಿಗಳಿಂದ ಶಿಕ್ಷಣವನ್ನು ಕಸಿದುಕೊಳ್ಳುತ್ತಿದೆ. ಉಚಿತ ಶಿಕ್ಷಣ ಕೊಡಬೇಕಾದ ಸರಕಾರವೇ ಶಿಕ್ಷಣವನ್ನು ವ್ಯಾಪಾರಿಕರಣಕ್ಕಿಟ್ಟಿದೆ. 

ಹಾಗಾಗಿ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ಅಳವಡಿಸಿಕೊಂಡು, ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವ ಐತಿಹಾಸಿಕ ಜವಾಬ್ದಾರಿ ವಿದ್ಯಾರ್ಥಿಗಳ ಮುಂದೆ ಇದೆ. ಸ್ವಾತಂತ್ರ್ಯ ಬಂದು ನಮ್ಮ ದೇಶಕ್ಕೆ 80ವರ್ಷ ಆಗುತ್ತಿದ್ದರೂ ಇದುವರೆಗೂ ಕೂಡ ಮರ್ಯಾದೆ ಹತ್ಯೆಗಳು ನಿಲ್ಲುತ್ತಿಲ್ಲ,..  ಯಾಕೆಂದರೆ ಇತ್ತಿಚಿನ ದಿನಗಳಲ್ಲಿ ಮಗಳು, ದಲಿತ ಹುಡುಗನ ಮದುವೆ ಮಾಡಿಕೊಂಡಿದ್ದಾಳೆ ಎಂಬ ಕಾರಣಕ್ಕೆ ಸ್ವಂತ ತಂದೆ ತುಂಬು ಗರ್ಭಿಣಿಯನ್ನು ಕೊಲೆ ಮಾಡಿದ ಘಟನೆಗಳನ್ನು ನೊಡುತ್ತಿದ್ದೇವೆ. ಸಮಾಜದಲ್ಲಿ ಬೇರೂರಿರುವ ಜಾತಿ ಮನಸ್ಥಿತಿಗೆ ಧಿಕ್ಕಾರ! 

ಈ ಸಂದರ್ಭದಲ್ಲಿ ಎಐಡಿಎ? ಜಿಲ್ಲಾ ಅಧ್ಯಕ್ಷರು ಸಿಂಧು ಕೌದಿ ಮಾತನಾಡಿ... ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಎಂಬ ಹೆಸರಿನಲ್ಲಿ ರಾಜ್ಯದಲ್ಲಿ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಪ್ರತಿ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳು ಇರುವ ಕಾರಣ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಈಗ ಸರ್ಕಾರ ವೀಲೀನದ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚಿದರೆ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವ ಪರಿಸ್ಥಿತಿ ಉಂಟಾಗುತ್ತದೆ. ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ರಾಜ್ಯ ಸರ್ಕಾರ ಮುಚ್ಚಲು ಹೊರಟಿರುವ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ರಾಜ್ಯದ ವಿದ್ಯಾರ್ಥಿಗಳು ಮತ್ತು ಜನತೆ ಹೋರಾಟಕ್ಕೆ ಮುಂಬರಬೇಕು ಎಂದು ಕರೆ ಕೊಟ್ಟರು. ಈ ಸಂದರ್ಭದಲ್ಲಿ ಂಋಖಓ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರು, ಕಛೇರಿ ಕಾರ್ಯದರ್ಶಿ ಸ್ಪೂರ್ತಿ ಚಿಕ್ಕಮಠ, ಕಾರ್ಯಕರ್ತರಾದ ಶಾಂತೇಶ, ಸಿದ್ದು,ರವಿ  ಭಾಗವಹಿಸಿದ್ದರು.