ಲೋಕದರ್ಶನ ವರದಿ
ಕೊಪ್ಪಳ 11: ಕೊರೊನಾ ವೈರಸ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ದೇಶವೇ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಭಾಗ್ಯನಗರದಲ್ಲಿ ಯಲಬುಗರ್ಾ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ಸರೋಜಾ ಬಾಕಳೆ ಅವರು ಬಡವರ ನೆರವಿಗೆ ಬಂದು ಶಕ್ತಿ ಅನುಸಾರ ಸಹಾಯ ಮಾಡಿ ಮಾನವೀಯತೆ ತೋರುತ್ತಿದ್ದಾರೆ.
ಭಾಗ್ಯನಗರದ ಕೆಎಚ್ಡಿಸಿ ಕಾಲೋನಿ,ವಿಜಯನಗರ ಬಡಾವಣೆ, ದುರಗಮುರಗಿಯವರ ಕಾಲೋನಿಯ ಪ್ರತಿನಿತ್ಯ ದುಡಿಮೆಯ ಮೇಲೆ ಅವಲಂಬಿತವಾದ ಬಡವರು, ಕೂಲಿಕಾರರು, ಅಲೇಮಾರಿ ಕುಟುಂಬಗಳ ಮಹಿಳೆಯರಿಗೆ-ಮಕ್ಕಳಿಗೆ, ವೃದ್ಧರಿಗೆ ಊಟ, ನೀರಿನಬಾಟಲ್, ಬ್ರೇಡ್, ಕೆಲವು ನಿತ್ಯ ಬಳಕೆಯ ಸಾಮಗ್ರಿಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಭಾಗ್ಯನಗರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಬಿ.ಬಾಬು, ಸಮುದಾಯ ಸಂಘಟನಾ ಅಧಿಕಾರಿ ಮಂಗಳಾ ಕುಲಕಣರ್ಿ, ಆರೋಗ್ಯ ನಿರೀಕ್ಷಕಿ ಅಕ್ಕಮಹಾದೇವಿ ಮತ್ತೀತರರು ಪಾಲ್ಗೊಂಡಿದ್ದರು.