ಬೆಳಿಗ್ಗೆ ಉದ್ಘಾಟನೆಗೊಂಡ ಸೋಮಯ್ಯ ಕಾರ್ಖಾನೆಗೆ ಬರುತ್ತಿರುವ ಗಾಡಿಗೆ ಸಂಜೆ ಬೆಂಕಿ
A vehicle coming to the Somaiya factory, which was inaugurated in the morning, caught fire in the e
ಮಹಾಲಿಂಗಪುರ 13: ಬೆಳಿಗ್ಗೆ ತಾನೆ ಪೂಜೆ ಮಾಡಿ ಪ್ರಾರಂಭಿಸಿದ ಸೋಮಯ್ಯ ಸಕ್ಕರೆ ಕಾರ್ಖಾನೆಗೆ ಸಂಜೆ 4 ಗಂ.ವೇಳೆ ಏಕಾಏಕಿ ಮುಧೋಳ ಭಾಗದ ರೈತರು ಬಂದು ಅಲ್ಲಿರುವ ಟ್ರ್ಯಾಕ್ಟರಗಳನ್ನು ಕೆಡವಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಒಟ್ಟು 20 ಕ್ಕಿಂತ ಹೆಚ್ಚು ಕಬ್ಬು ತುಂಬಿದ ಟ್ರ್ಯಾಕ್ಟರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯೆಕ್ತಪಡಿಸಿದ ರೈತರು.
ಮುಧೋಳದ ಸುಮಾರು ಸಾವೀರಾರು ರೈತರು ಬಸ್ ತುಂಬಿಕೊಂಡು ಸಮೀರವಾಡಿಗೆ ಬಂದು ಅಲ್ಲಿ ರಸ್ತೆ ಮುಖಾಂತರ ಸೋಮಯ್ಯ ಕಾರ್ಖಾನೆಗೆ ತೆರಳುತ್ತಿದ್ದ ಟ್ರ್ಯಾಕ್ಟರಗಳನ್ನು ಉರುಳಿಸಿ ಪೇಟ್ರೋಲ್ ಸುರಿದು ಬೆಂಕಿ ಹಚ್ಚಿ ಕೂಗಾಡ ತೊಡಗಿದರು.ಅಲ್ಲಿಗೆ ಬಂದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಅಲ್ಲದೆ ಸೋಮಯ್ಯ ಸಕ್ಕರೆ ಕಾರ್ಖಾನೆಯ ಮುಂದಿನ ದೊಡ್ಡದಾದ ಗೇಟ ಮುಚ್ಚಿ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಸಾಕಷ್ಟು ರೈತರಿಗೂ ಸಹ ಗಾಯಗಾಳಾಗಿವೆ, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ಸರ್ಕಾರಿ ಕಾರ್ಖಾನೆ ಆವರಣವೆಲ್ಲ ಉದ್ವಿಘ್ನ ವಾತಾವರಣದಿಂದ ತುಂಬಿ ಸಾರ್ವಜನಿಕರು ಹೊರಗೆ ಬರದಹಾಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಧಾವಿಸಿದ ಎಸ್.ಪಿ ಮತ್ತು ಪೊಲೀಸ ಇಲಾಖೆ ಹಾಗೂ ಅಧಿಕಾರಿಗಳು, ಮತ್ತು ಅಗ್ನಿ ಶಾಮಕ ದಳ, ಅಂಬುಲೇನ್ಸಗಳು ಆಗಮಿಸಿ ಸೂಕ್ತ ಭದ್ರತೆ ನೀಡಲು ಪರದಾಡಬೇಕಾಯಿತು.
ರೈತರ ಬೇಡಿಕೆ: ಯಾವುದೇ ಕಾರಣಕ್ಕೂ ನಾವು ಸರ್ಕಾರ ಹೇಳಿದ ರೇಟ್‌ಗೆ ಒಪ್ಪುವುದಿಲ್ಲ. ನಮಗೆ ನ್ಯಾಯಯುತವಾದ 3500 ರೂಗಳೆ ಬೇಕು ಇದಕ್ಕೆ ಒಪ್ಪಿದರೆ ಮಾತ್ರ ಕಾರ್ಖಾನೆ ತೆಗೆಯಬೇಕು, ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಕಾರ್ಖಾನೆ ತೆಗೆಯಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 