ಸ್ನೇಹಿತರ ಯಶಸ್ಸಿಗೆ ಕಾರಣೀಕರ್ತನಾಗುವವನೇ ನಿಜವಾದ ಗೆಳೆಯ: ಹೂಗಾರ
A true friend is one who is responsible for the success of his friends: Florist
ಸ್ನೇಹಿತರ ಯಶಸ್ಸಿಗೆ ಕಾರಣೀಕರ್ತನಾಗುವವನೇ ನಿಜವಾದ ಗೆಳೆಯ: ಹೂಗಾರ
ಮುದ್ದೇಬಿಹಾಳ 07: ಪ್ರತಿಯೊಬ್ಬ ಸ್ನೇಹಿತರ ಗೆಲುವನ್ನು ಕಣ್ತುಂಬ ನೋಡಿಕೊಂಡು ಅವನ ಯಶಸ್ಸಿಗೆ ಕಾರಣೀಕರ್ತನಾಗುವವನೇ ನಿಜವಾದ ಗೆಳೆಯನೆಂದು ಎಂ.ಜಿ.ವ್ಹಿ.ಸಿ. ಕಾಲೇಜ್ ನಿವೃತ್ತ ಪ್ರಾಧ್ಯಾಪಕ ಎಸ್.ಎಸ್. ಹೂಗಾರ ಅವರು ಹೇಳಿದರು.
ಪಟ್ಟಣದ ಎಪಿಎಂಸಿಯ ಕರ್ನಾಟಕ ಬ್ಯಾಂಕ್ ಮಂಗಲಭವನದಲ್ಲಿ ಎಳೆಯರು ನಾವು ಗೆಳೆಯರು ಸಂಘದ ವತಿಯಿಂದ ಏರಿ್ಡಸಲಾದ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸ್ನೇಹಿತರ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಕಷ್ಟಸುಖದಲ್ಲಿ ಸಮಭಾಗಿಯಾಗಿ ಸಾಗುವ ಮೂಲಕ ಸ್ನೇಹಿತನ ಕಷ್ಟವನ್ನು ತಿದ್ದಿತೀಡುವಲ್ಲಿ ಸ್ನೇಹಿತನ ಪಾತ್ರ ಬಹಳ ಮುಖ್ಯವಾದುದ್ದಾಗಿದೆ. ಗೆಳೆತನ ಎಂದರೆ ಪ್ರೀತಿ ವಿಶ್ವಾಸ ಮಮತೆ ಅನುಕಂಪ ಓದಾರ್ಯ ನಾನು ನಮ್ಮವರು ಎಂಬ ಭಾವನೆ ನಿಜವಾದ ಗೆಳೆತನವಾಗಿದೆ. ಇಲ್ಲಿ ಶ್ರೀಮಂತಿಕೆಯೆಂಬುದು ಇರುವುದಿಲ್ಲವೆಂದರು. ಇಲ್ಲಿ ಕೂಡಿರುವ ಎಲ್ಲ ಸ್ನೇಹಿತರ ಗೆಳೆತನದ ಬಾಂಧವ್ಯ ಇನ್ನಷ್ಟು ಹೆಚ್ಚಲಿ ಎಂದು ಶುಭ ಹಾರೈಸಿದರು.
ಗೆಳೆಯರ ಬಳಗದ ಸದಸ್ಯ ರಾಜನಾರಾಯಣ ನಲವಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಕ್ತ ಸಂಬಂಧಕ್ಕಿಂತಲೂ ಸ್ನೇಹಸಂಬಂಧ ಶಾಶ್ವತವಾದದ್ದಾಗಿದೆ. ಸ್ನೇಹಿತನ ಪ್ರತೀ ಆಪತ್ತಿಗೆ ಸ್ನೇಹಿತರು ಸಹಾಯಹಸ್ತ ಮಾಡುವ ಮೂಲಕ ಜೀವನ ಪರ್ಯಂತ ಈ ಸ್ನೇಹಿತರು ಯಾವತ್ತೂ ಇರುತ್ತಾರೆಂಬ ವಿಶ್ವಾಸ ನನಗಿದೆ ಎಂದು ಹೇಳಿದರು. 1983ರ ಈ ಸ್ನೇಹಿತರ ಬಳಗ ಬೇರೆ ಬೇರೆ ಕಡೆ ಶಿಕ್ಷಣದ ಸಲುವಾಗಿ ಬೇರೆಯಾದರೂ ಈ ಗೆಳೆತನ ಸುಮಾರು 42 ವರ್ಷಗಳ ಕಾಲದ ಗೆಳೆತನ ಇನ್ನೂ ಗಟ್ಟಿಯಾಗಿಯೇ ಉಳಿದಿದೆ ಎಂದು ಹೇಳಿದರಲ್ಲದೇ ಸಂಘದ ಸ್ಥಾಪನೆ ಮಾಡಿ 7 ವರ್ಷಗಳ ಕಳೆದಿದ್ದು 250ಕ್ಕಿಂತ ಹೆಚ್ಚು ಸ್ನೇಹಿತರು ಭಾಗಿಯಾಗಿದ್ದು ಅದೇ ಪೋಟೋ ನಮ್ಮ ಸಂಘದ ಲೋಗೋವಾಗಿ ಮಾಡಿದ್ದೇವೆ ಎಂದರು. ಪ್ರತಿಯೊಬ್ಬ ಶಿಕ್ಷಕರ ಋಣವನ್ನು ಅವರಿಗೆ ಗೌರವ ನೀಡುವ ಮೂಲಕ ಅವರ ಋಣವನ್ನು ತೀರಿಸಬೇಕೆಂದು ಹೇಳಿದರು.
ಹಿರಿಯ ನಿವೃತ್ತ ದೈಹಿಕ ಶಿಕ್ಷಕಕ ಎಸ್.ಎಲ್. ಗುರವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವ್ಹಿಬಿಸಿ ಹೈಸ್ಕೂಲ್ ನಿವೃತ್ತ ಮುಖ್ಯೋಪಾಧ್ಯಾಯ ಎ.ಸಿ. ಹಿರೇಮಠ, ಅತಿಥಿಗಳಾಗಿ ನಿವೃತ್ತ ಚಿತ್ರಕಲಾ ಶಿಕ್ಷಕ ಆರ್.ವಿ. ಮಾದಿಹಾಳ ಅವರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ಎಳೆಯರು ನಾವು ಗೆಳೆಯರು ಸಂಘದ ಅಧ್ಯಕ್ಷ ಜಗದೀಶ ಲಕ್ಷಟ್ಟಿ ಅವರು ವಹಿಸಿದ್ದರು.
ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಅಧ್ಯಕ್ಷರನ್ನಾಗಿ ಜಗದೀಶ ಲಕ್ಷಟ್ಟಿ, ಉಪಾಧ್ಯಕ್ಷರಾಗಿ ಹಣಮಂತ ಮೇಲಿನಮನಿ, ಡಾ. ಮಹಾಂತೇಶ ಹಿರೇಮಠ, ಪ್ರ. ಕಾರ್ಯದರ್ಶಿಯನ್ನಾಗಿ ನಿಸಾರಹ್ಮದ ಅತ್ತಾರ, ಖಜಾಂಚಿಯನ್ನಾಗಿ ಸಂತೋಷ ಪಾಟೀಲ, ಸಹಕಾರ್ಯದರ್ಶಿಯನ್ನಾಗಿ ಮಹಾಂತೇಶ ಕಂಠಿ, ಸಂಘಟನಾ ಕಾರ್ಯದರ್ಶಿಯನ್ನಾಗಿ ಬಂದಗೀಸಾಬ ನಾಯ್ಕೋಡಿ, ಸಾಂಸ್ಕೃತಿಕ ಕಾರ್ಯದರ್ಶಿಯನ್ನಾಗಿ ವಾಸುದೇವ ಬಡಿಗೇರ, ಮಾಧ್ಯಮ ಸಲಹೆಗಾರರನ್ನಾಗಿ ಶಂಕರ ಬಳ್ಳೊಳ್ಳಿ ಅವರನ್ನು ನೇಮಕ ಮಾಡಲಾಯಿತು.
ಎಂ.ಎ. ತಳ್ಳಕೇರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 