ಜಿಲ್ಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ 76ನೇ ನರೇಗಾ ಯೋಜನೆ ಕುರಿತು ಮೂರು ದಿನದ ತರಬೇತಿ ಕಾರ್ಯಗಾರ

A three-day training workshop on 76th NREGA scheme at Commerce and Industry Institute in the distri

ಜಿಲ್ಲೆಯಲ್ಲಿ  ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ 76ನೇ  ನರೇಗಾ ಯೋಜನೆ ಕುರಿತು ಮೂರು ದಿನದ ತರಬೇತಿ ಕಾರ್ಯಗಾರ  

ರಾಣೇಬೆನ್ನೂರು 26:  ಗ್ರಾಮೀಣ ಭಾಗದಲ್ಲಿ ಕೂಲಿ ಕಾಮಿರ್ಕರನ್ನು ಸಂಘಟಿಸಿ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುವಂತೆ ಮಾಡುವಲ್ಲಿ ಕಾಯಕ ಬಂಧುಗಳು ಪಾತ್ರ ಬಹಳ ಮಹತ್ವದ್ದಾಗಿದೆ ಮತ್ತು ಅವರು ಯೋಜನೆಗೆ ಆಧಾರ ಸ್ಥಂಭವಾಗಿದ್ದಾರೆ ಎಂದು ತಾಪಂ ಇಒ ಪರಮೇಶ ಕರೆ ನೀಡಿದರು. ತಾಲೂಕಿನ ಕೃಷ್ಣಮೃಗ ಅಭಯಾರಣ್ಯದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾಮ ಸ್ವರಾಜ್ ಅಭಿಯಾನದಡಿ ಮತ್ತು ಜಿಪಂ, ತಾಪಂ ವತಿಯಿಂದ ತಾಲೂಕು ಮಟ್ಟದ ಕಾಯಕ ಬಂಧುಗಳಿಗಾಗಿ ಏರಿ​‍್ಡಸಿದ್ದ ನರೇಗಾ ಯೋಜನೆ ಕುರಿತು ಮೂರು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.  

ನರೇಗಾ ಯೋಜನೆ ಗ್ರಾಮೀಣ ಭಾಗದಲ್ಲಿ ಸುಸ್ತಿರವಾಗಿ ಅನುಷ್ಠಾನಗೊಳ್ಳಬೇಕಾದರೆ, ಯೋಜನೆಯ ಮಾಹಿತಿ ಕಾಯಕ ಬಂಧುಗಳಿಗೆ ಅತ್ಯಾವಶ್ಯವಾಗಿದೆ. ಮೂರು ದಿನದ ತರಬೇತಿಯಲ್ಲಿ ಯೋಜನೆಯ ನಡೆದು ಬಂದ ಹಾದಿ ಕಾಯಕ ಬಂಧುಗಳ ಪಾತ್ರ, ಕ್ರಿಯಾ ಯೋಜನೆ ತಯಾರಿಕೆ, ಸಮುದಾಯ ಆಸ್ತಿಗಳ ಅಭಿವೃದ್ಧಿ, ಕೂಲಿ ಕಾರ್ಮಿಕರ ಹಾಜರಾತಿ, ದಾಖಲಾತಿಗಳ ನಿರ್ವಹಣೆ ಮಾಡುವ ಕುರಿತು 3 ದಿನದಲ್ಲಿ ಒಂದು ದಿವಸ ಕ್ಷೇತ್ರ ಭೇಟಿಯಲ್ಲಿ ಕೂಲಿ ಕಾಮಿರ್ಕರೊಂದಿಗೆ ಸಂವಾದ ಕಾರ್ಯಕ್ರಮವಿದ್ದು, ಎರಡು ದಿನ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ಕಾಯಕ ಬಂಧುಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.  

ನೀಡ್ಸ್‌ ಸಂಸ್ಥೆಯ ಮುಖ್ಯಸ್ಥ ಎಚ್‌.ಎಫ್‌. ಅಕ್ಕಿ ಮಾತನಾಡಿ, ರಾಜ್ಯದಲ್ಲಿ ಗ್ರಾಮ ಸ್ವರಾಜ್ ಅಡಿಯಲ್ಲಿ ರಾಜ್ಯದ 20 ಜಿಲ್ಲೆ 50 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಪ್ರತಿ ತಾಲೂಕಿನಿಂದ 300 ಜನ ಕಾಯಕ ಬಂಧುಗಳಿಗೆ ತರಭೇತಿಯನ್ನು ಸುಮಾರು ಏಳು ಬ್ಯಾಚಗಳಲ್ಲಿ ಪ್ರತಿ ಬ್ಯಾಚಗೆ 3 ದಿನಗಳವರೆಗೆ ತರಬೇತಿ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.  

ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ವಿಜಯಕುಮಾರ ಹನಗೋಡಿಮಠ, ವನ್ಯಜೀವಿ ವಿಭಾಗದ ಎಸಿಎಫ್ ಸತೀಶ ಪೂಜಾರ, ಸಂಪನ್ಮೂಲ ವ್ಯಕ್ತಿಗಳಾದ ದಿಂಗಾಲೇಶ ಅಂಗೂರ, ಪರಶುರಾಮ ಅಂಬಿಗೇರ, ಶಿವಕುಮಾರ ಜಾಧವ, ಬಿಎಫ್‌ಟಿ ಪುಟ್ಟಪ್ಪ ಒಡೆಯರ, ಶ್ರೀನಿವಾಸ ಕೊಣ್ಣೂರ, ನಾಗಪ್ಪ ಪಾರ್ವತೇರ, ಹೊನ್ನಪ್ಪ ಅಜ್ಜೇರ, ಕಾಂತೇಶ ಐರಣಿ ಮತ್ತಿತರರು ಉಪಸ್ಥಿತರಿದ್ದರು.  

ಗಣರಾಜ್ಯೋತ್ಸವ ಆಚರಣೆ                      

ಬಳ್ಳಾರಿ 26:  ನಗರದಲ್ಲಿ  ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ರಾಷ್ಟೊಪಿತ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಧ್ವಜಾರೋಹಣವವನ್ನು ನೆರವೇರಿಸಿದರು.ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀ ಯಶವಂತರಾಜ್ ನಾಗಿರೆಡ್ಡಿ ಅವರು, ದೇಶದಲ್ಲಿ ಸಂವಿಧಾನ ಜಾರಿಯಾದ ದಿನ ಇದಾಗಿದ್ದು, ಬಲಿಷ್ಠ ಮತ್ತು ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ಭಾರತ ದೇಶದ್ದಾಗಿದೆ ಎಂದರು. ಭಾರತ ಸಂವಿಧಾನವು 1949ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂತು. ಪ್ರತಿ ವರ್ಷ ಜನವರಿ 26 ರಂದು ಭಾರತ ದೇಶವು ಸಂವಿಧಾನ ಜಾರಿಗೆ ಬಂದ ದಿನವನ್ನು ಸ್ಮರಿಸಲು ಗಣರಾಜ್ಯೋತ್ಸವ ಎಂದು ಆಚರಣೆ ಮಾಡಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ  ಬಿ. ಮಹಾರುದ್ರಗೌಡ, ನಿಕಟಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರಾದ, ಗಿರಿಧರ ಸೊಂತ, ಗೌರವ ಕಾರ್ಯದರ್ಶಿಗಳಾದ ಕೆ.ಸಿ.ಸುರೇಶಬಾಬು, ಜಂಟಿ ಕಾರ್ಯದರ್ಶಿಗಳಾದ ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಉಪ ಕಮಿಟಿಗಳ ಚೇರ್‌ಮನ್‌ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಮತ್ತು ವಿಶೇಷ ಸಮನ್ವಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.