ಬೈಲಹೊಂಗಲ: ಕೆಂಪು ಬಟ್ಟೆ ಕಟ್ಟಿಕೊಂಡು ಸಾಂಕೇತಿವಾಗಿ ಪ್ರತಿಭಟನೆ

ಬೈಲಹೊಂಗಲ 08:  ಬೆಂಗಳೂರ ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ವಕೀಲ ಮುನಿರೆಡ್ಡಿ ಅವರ ಮೇಲಿನ ಹಲ್ಲೆಯನ್ನು  ಖಂಡಿಸಿ, ರಾಜ್ಯ ವಕೀಲರ ಪರಿಷತ್ ಕರೆಯ ಮೇರೆಗೆ  ಸ್ಥಳೀಯ ವಕೀಲರ ಸಂಘ ತೋಳಿಗೆ ಕೆಂಪು ಬಟ್ಟೆ ಕಟ್ಟಿಕೊಂಡು ಸಾಂಕೇತಿವಾಗಿ ಪ್ರತಿಭಟಿಸಿ, ಉಪವಿಭಾಗಾಧಿಕಾರಿಗಳ ಮೂಲಕ ಸಕರ್ಾರಕ್ಕೆ  ಶನಿವಾರ ಮನವಿ ಸಲ್ಲಿಸಿದರು.

    ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ ಮಾತನಾಡಿ, ಇತ್ತಿಚಿನ ದಿನಮಾನಗಳಲ್ಲಿ ವಕೀಲರ ಮೇಲೆ ರಾಷ್ರ್ಟ ಮತ್ತು ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆ ನಡೆಯುತ್ತಿದ್ದು ತೀವೃ ಖಂಡನೀಯವಾಗಿದೆ. ಕೇಂದ್ರ ಸಕರ್ಾರ ವಕೀಲರ ರಕ್ಷಣಾ ಕಾಯ್ದೆಯನ್ನು ತುತರ್ಾಗಿ ಜಾರಿಗೆ ತರಲು ಸಂಭಂದಪಟ್ಟ ಕಾನೂನು ಇಲಾಖೆಗೆ ಸೂಕ್ತ ನಿದರ್ೇಶನ ನೀಡಬೇಕೆಂದು ಪ್ರಧಾನ ಮಂತ್ರಿ ಅವರಿಗೆ ಮನವಿ ಮಾಡಲು ಸಭೆಯಲ್ಲಿ ತಿಮರ್ಾನಿಸಲಾಗಿದೆ. ಅಲ್ಲದೇ ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಲು ಕೇಂದ್ರಕ್ಕೆ ಒತ್ತಾಯಿಸಿ, ಶಿಪಾರಸ್ಸು ಮಾಡಲು ಠರಾವು ಮಾಡಲಾಗಿದೆ ಎಂದರು.

  ಉಪಾಧ್ಯಕ್ಷ ಕೆ.ಎಸ್.ಕುಲಕಣರ್ಿ, ಪ್ರಧಾನ ಕಾರ್ಯದಶರ್ಿ ದುಂಡೇಶ ಗರಗದ, ಎಸ್.ಬಿ.ಆನಿಗೋಳ, ಎಸ್.ಬಿ.ಪಾಟೀಲ, ಪಿ.ಎಸ್.ಪಠಾತ, ಎಸ್.ಬಿ.ರೊಟ್ಟಿ, ಎಸ್.ಜಿ.ಬೂದಯ್ಯನವರಮಠ, ವ್ಹಿ.ಸಿ.ಸಂಗೊಳ್ಳಿ, ಬಿ.ಬಿ.ಹುಲಮನಿ, ಎಂ.ಎಂ.ಅಬ್ಬಾಯಿ, ಬಿ.ಆರ್.ಶಿವಬಸವನ್ನವರ, ವ್ಹಿ.ಸಿ.ಪೂಜೇರ, ಎಸ್.ಸಿ.ಕರೀಕಟ್ಟಿ, ಆಯ್.ಎಫ.ತಡಸಲ, ಎಂ.ಎಂ.ಅಲ್ಲಯ್ಯನವರಮಠ, ಎಸ್.ಆರ್.ಸೋಮನ್ನವರ, ಎಸ್.ಬಿ.ರಾಯಪ್ಪಗೋಳ, ಆರ್.ಎಫ.ಕುರುಬರ ಇದ್ದರು.