ಗ್ಯಾರಂಟಿ ಯೋಜನೆಗಳ ಕುರಿತ ಬೀದಿ ನಾಟಕ

A street play on guarantee schemes

ಗ್ಯಾರಂಟಿ ಯೋಜನೆಗಳ ಕುರಿತ ಬೀದಿ ನಾಟಕ 

ಬಳ್ಳಾರಿ 17:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಚಿಗುರು ಕಲಾ ತಂಡ ವತಿಯಿಂದ ರಾಜ್ಯ ಸರ್ಕಾರದ ಮಹತ್ವಾಂಕ್ಷಿ ಐದು ಗ್ಯಾರಂಟಿ ಯೋಜನೆ ಹಾಗೂ ವಿವಿಧ ಯೋಜನೆಗಳ ಕುರಿತು ಸಂಡೂರು ತಾಲ್ಲೂಕಿನ ಹೊಸ ದರೋಜಿ ಗ್ರಾಮದಲ್ಲಿ ಸೋಮವಾರ ಬೀದಿ ನಾಟಕ ಹಮ್ಮಿಕೊಳ್ಳಲಾಗಿತ್ತು. 

ದರೋಜಿ ಗ್ರಾಪಂ ಅಧ್ಯಕ್ಷೆ ಕೆ.ಗೀತ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಳಿಕ ಮಾತನಾಡಿದ ಅವರು, ಜನ ಸಾಮಾನ್ಯರು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. 

ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಿದ್ದಲಿಂಗಪ್ಪ ಅವರು ಮಾತನಾಡಿ, ಸರ್ಕಾರದಿಂದ ಜನಸಾಮಾನ್ಯರಿಗೆ ದೊರೆಯುವ ವಿವಿಧ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜನೋಸ್ತಮದಿಂದ ಸೇರಿದ್ದು ವಿಶೇಷಗಿದ್ದು, ಬೀದಿ ನಾಟಕ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆ ಸಂದಿದೆ ಎಂದರು. 

ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯರಾದ ಮಾಯಣ್ಣ, ಕೊಟ್ರಮ್ಮ, ಗ್ರಾಮದ ಹಿರಿಯರು, ಚಿಗುರು ತಂಡದ ಕಲಾವಿದರಾದ ಹುಲುಗಪ್ಪ ಎಸ್‌.ಎಂ., ಎಚ್‌.ರಮೇಶ, ಬಿ.ಆನಂದ, ಹೆಚ್‌.ಎರಿಸ್ವಾಮಿ, ಎಂ.ನವೀನ್, ವೈ.ತಾಯಪ್ಪ, ಎಚ್‌.ಗಂಗಮ್ಮ, ವೈ.ರುತಮ್ಮ ಸೇರಿದಂತೆ ಸಾರ್ವಜನಿಕರು ಇದ್ದರು.