ಶಿವಕುಮಾರಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ

ಲೋಕದರ್ಶನವರದಿ

ಹುಬ್ಬಳ್ಳಿ25 : ಶತಾಯುಷಿ ತುಮಕುರಿನ ಸಿದ್ಧಗಂಗಾಮಠದ ಪೀಠಾಧ್ಯಕ್ಷ ಡಾ. ಶಿವಕುಮಾರ ಸ್ವಾಮಿಜಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ, ನುಡಿ ನಮನ ಕಾರ್ಯಕ್ರಮ ಬನಶಂಕರಿ ದೇವಸ್ಥಾನದ ಆವರಣದಲ್ಲಿ ನಡೆಯಿತು. ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕನರ್ಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾಯರ್ಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಅವರು ಡಾ. ಶಿವಕುಮಾರ ಸ್ವಾಮಿಜಿಯವರ ಭಾವಚಿತ್ರಕ್ಕೆ ಪುಷ್ಪ ಸಮಪರ್ಿಸಿ, ಶ್ರದ್ಧಾ ಭಕ್ತಿಯಿಂದ ಗೌರವದ ನಮನ ಸಲ್ಲಿಸಿ ಮಾತನಾಡಿದರು. ಡಿ.ಡಿ.ಹೊರಕೇರಿ, ಆನಂದ ಕುರ್ತಕೋಟಿ, ಸುರೇಶ ಲಿಂಬಿಕಾಯಿ, ಎಸ್.ಬಿ.ತಿಗಡಿ, ಮೃತ್ಯುಂಜಯ ಮಟ್ಟಿ, ಮುಂತಾದವರು ಇದ್ದರು.