ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಯೋಧ ಸಾವು

A soldier who had come to the village on leave died

ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಯೋಧ ಸಾವು 

ದೇವರಹಿಪ್ಪರಗಿ, 03;  ರಜೆಯ ಮೇಲೆ ಸ್ವ-ಗ್ರಾಮಕ್ಕೆ ಬಂದಿದ್ದ ಯೋಧ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಮ್ಮನಜೋಗಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಮಲ್ಲಿಕಾರ್ಜುನ ಪೂಜಾರಿ ಮೃತ ಯೋಧ. ಸೋಮವಾರ ಬೆಳಗ್ಗೆ ಸಾವನ್ನಪ್ಪಿದ್ದು. ತಾಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಮಾರು 17 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಅನಾರೋಗ್ಯದಿಂದ ಗ್ರಾಮಕ್ಕೆ ಬಂದಿದ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. 

     ಮೃತ ಯೋಧ ಮಲ್ಲಿಕಾರ್ಜುನ ಈ ಪೂಜಾರಿ ಸುಮಾರು 17 ವರ್ಷಗಳ ಕಾಲ ದೇಶದ ಅರುಣಾಚಲ ಪ್ರದೇಶ, ಕೊಲ್ಕತ್ತಾ, ಜಮ್ಮು ಕಾಶ್ಮೀರ ಸೇರಿದಂತೆ ಹಲವಾರು ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದು. ಸದ್ಯ ಶಶಸ್ತ್ರ ಸೀಮಾ ಬಲದಲ್ಲಿ ಸೇವೆಯನ್ನು ಉನ್ನತ ಹುದ್ದೆಯ ಅಧಿಕಾರಿಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಂದೆ ತಾಯಿ, ಇಬ್ಬರು ಅಣ್ಣಂದಿರು, ಒಬ್ಬರು ಅಕ್ಕ, ಪತ್ನಿ ಸೇರಿದಂತೆ ಮೂರು ಜನ ಹೆಣ್ಣುಮಕ್ಕಳನ್ನು ಯೋದ ಅಗಲಿದ್ದಾರೆ. 

ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ತಾಲೂಕ ಆಡಳಿತದಿಂದ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ರಾಜಕೀಯ ಮುಖಂಡರುಗಳಾದ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ (ಸಾಸನೂರ), ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ), ಜೆಡಿಎಸ್ ಮುಖಂಡರುಗಳಾದ ಸಚಿನಗೌಡ ಪಾಟೀಲ ಕುದುರಿ ಸಾಲವಾಡಗಿ ಸೇರಿದಂತೆ ಗಣ್ಯರು, ಯೋಧರು, ಗ್ರಾಮದ ಪ್ರಮುಖರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು