ಲೋಕದರ್ಶನ ವರದಿ
ತಾಳಿಕೋಟೆ 07: ಸಾಧಿಸಬೇಕೆಂಬ ಛಲದಿಂದ ಮುಂದೆ ಸಾಗುತ್ತಿದ್ದರೆ ಅಂಗವಿಕಲತೆ ಎಂಬುದು ಸಾಧನೆಗೆ ಅಡ್ಡಿಯಾಗದು ಎಂಬದನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕುಮಾರಿ ಭಾಗಮ್ಮ ಹೆಬ್ಬಾಳ ಅವಳು ಕಾಲಿನಿಂದಲೇ ಪರೀಕ್ಷೆ ಬರೆಯುವದರೊಂದಿಗೆ ನೋಡುಗ ವಿದ್ಯಾರ್ಥಿಗಳ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾಳೆ.
ಯಾರ ಆಸರೆಯೂ ಇಲ್ಲದೇ ಪರಿಕ್ಷೆಯನ್ನು ಎದುರಿಸುತ್ತಿರುವ ವಿದ್ಯಾಥರ್ಿನಿ ಭಾಗಮ್ಮಳು ತನ್ನ ಕಾಲಿನ ಮೂಲಕವೇ ಪುಟ ತೀರುವದು, ಪ್ರಶ್ನೇ ಪತ್ರಿಕೆಯನ್ನು ನೋಡಿಕೊಳ್ಳುವದು, ಕಾಲಿನಲ್ಲಿ ಹಿಡಿದ ಪೆನ್ನಿನ ಮೂಲಕವೇ ಉತ್ತರ ಬಿಡಿಸುತ್ತಿರುವದು ಪರಿಕ್ಷರ್ಥ್ಗಳಿಗೆ ಸಂಚಲವನ್ನು ಮೂಡಿಸಿದೆ. ಸದ್ಯ ಎಸ್.ಕೆ.ಪಧವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಶಿಕ್ಷಣ ಪಡೆದು ಪಟ್ಟಣದ ಎಚ್.ಎಸ್.ಪಾಟೀಲ ಪಧವಿಪೂರ್ವ ಮಹಾ ವಿದ್ಯಾಲಯದಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ವಾಷರ್ಿಕ ಪರಿಕ್ಷೆಯನ್ನು ಎದುರಿಸುತ್ತಿದ್ದಾಳೆ. ಅಂಗವಿಕಲತೆ ಹೊಂದಿದ ವಿದ್ಯಾಥರ್ಿಗಳಿಗೆ ಪರಿಕ್ಷಾ ಸಮಯದಲ್ಲಿ ಅವರ ಬೇಡಿಕೆಯಂತೆ ಕೂಡ್ರಲು ಬೆಂಚ್ ಗೋಡೆಯ ಆಸರೆಯನ್ನು ವಿದ್ಯಾಥರ್ಿನಿ ಭಾಗಮ್ಮ ಹೆಬ್ಬಾಳ ಅವಳಿಗೆ ಎಚ್.ಎಸ್.ಪಾಟೀಲ ವಿದ್ಯಾ ಸಂಸ್ಥೆಯಿಂದ ವ್ಯವಸ್ಥೆ ಮಾಡಿಕೊಡಲಾಗಿದೆ.
ವಿದ್ಯಾರ್ಥಿನಿ ಭಾಗಮ್ಮ ಹೆಬ್ಬಾಳ ಇವಳು ಹುಟ್ಟಿನಿಂದಲೇ ಅಂಗವಿಕಲತೆ ಹೊಂದಿದ್ದರೂ ಸಕರ್ಾರದಿಂದ ಸಿಗುವ ಅಂಗವಿಕಲತೆ ಭತ್ಯ 1200 ರೂ. ಮಾತ್ರ ಪಡೆದುಕೊಳ್ಳುತ್ತಾ ತನ್ನ ಶಿಕ್ಷಣದತ್ತ ಮುನ್ನಡೆದಿದ್ದಾಳೆ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದ ಭಾಗಮ್ಮಳು ಶಿಕ್ಷಣದ ಮೂಲಕ ಉನ್ನತ ಸ್ಥಾನವನ್ನು ತಲುಪಬೇಕು ನನ್ನ ಶಿಕ್ಷಣಕ್ಕೆ ಬಡತನ ಅಡ್ಡಿಯಾಗದಿರಲಿ ಎಂಬ ಆಸೆಯೊಂದಿಗೆ ಮುನ್ನಡೆದಿರುವ ವಿದ್ಯಾಥರ್ಿನಿಗೆ ಪಿಯುಸಿಯ ನಂತರದಲ್ಲಿ ಭಾಗಮ್ಮಳಿಗೆ ಸಕರ್ಾರದಿಂದಲೇ ಉಚಿತ ಶಿಕ್ಷಣ ಹಾಗೂ ಸಕರ್ಾರದ ಸೌಲತ್ತುಗಳನ್ನು ಒದಗಿಸುವದರೊಂದಿಗೆ ಛಲದೊಂದಿಗೆ ಶಿಕ್ಷಣದಲ್ಲಿ ಮುಂದೆ ಸಾಗಿದ ವಿದ್ಯಾರ್ಥಿನಿ ಭಾಗಮ್ಮಳಿಗೆ ಸರ್ಕಾರ ಆಸರೆಗೆ ಬರಬೇಕಾಗಿದೆ.
ಪರಿಕ್ಷಾ ಅಧಿಕ್ಷಕರಾಗಿ ಆರ್.ಎಲ್.ಲಮಾಣೆ, ಸದಲಾಪೂರ, ಸಹಾಯಕರಾಗಿ ಬಿ.ಆಯ್.ಹಿರೇಹೊಳಿ, ಎಸ್.ಎಂ.ಕಿಂಡಿಮನಿ, ಎಸ್.ಬಿ.ಮಂಗ್ಯಾಳ, ರಾಜಕುಮಾರ ಹೊಟಗಾರ ಅವರು ಕಾರ್ಯನಿರ್ವಹಿಸುತ್ತಿದ್ದಾರೆ