ಬಜೆಟ್ ಮಂಡನೆಯಲ್ಲಿ ಮುಸ್ಲಿಮರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಮನವಿ

A request to provide more facilities to Muslims in budget presentation

ಬಜೆಟ್ ಮಂಡನೆಯಲ್ಲಿ ಮುಸ್ಲಿಮರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಮನವಿ 

ಕೊಪ್ಪಳ 20: 2025-26 ರ ಸಾಲಿನ 16ನೇ ಬಜೆಟ್ ಮಂಡನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಬೇಡಿಕೆಗಳನ್ನು ಸೇರೆ​‍್ಡ ಮಾಡಬೇಕೆಂದು ಮುಖ್ಯಮಂತ್ರಿವರಿಗೆ ಮನವಿ ಮಾಡಿಕೊಂಡು ಕೊಪ್ಪಳ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಅರ​‍್ಿಸಿ ಒತ್ತಾಯಿಸಿದ್ದಾರೆ.ಸಾಚಾರ ವರದಿಯ ಪ್ರಕಾರ ಮುಸ್ಲಿಂ ಸಮುದಾಯ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಇತರೇ ಸಮುದಾಯಕ್ಕಿಂತ ತುಂಬಾ ಹಿಂದುಳಿದ ಸಮುದಾಯವಾಗಿದೆ.ಮುಸ್ಲಿಂ ಸಮುದಾಯವು ಸರ್ವತೋಮುಖ ಅಭಿವೃದ್ಧಿ ಹಾಗೂ ಎಲ್ಲಾ ಕ್ಷೇತ್ರದ ಸಬಲೀಕರಣದ ಅವಶ್ಯಕತೆ ಇದ್ದು ಜನಸಂಖ್ಯೆಯ ಅನುಗುಣವಾಗಿ ಬಜೆಟ್ನಲ್ಲಿ 10 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತ ಬಜೆಟ್ನಲ್ಲಿ ಮೀಸಲಿಡಬೇಕೆಂದು ಒತ್ತಾಯಿಸುತ್ತೇವೆ.  

ಚುನಾವಣಾ ಪ್ರಚಾರದ ಸಮಯದಲ್ಲಿ ಇಡೀ ರಾಜ್ಯದಲ್ಲಿ  ಕಾಂಗ್ರೇಸ್ ಪಕ್ಷದ ಸರ್ಕಾರ ಬಂದಲ್ಲಿ ಮುಸ್ಲಿಂ ಸಮುದಾಯಕ್ಕೆ ಬಜೆಟ್ನಲ್ಲಿ 10 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದು ಮತ್ತು 2ಬಿ ಮೀಸಲಾತಿಯನ್ನು ಮರಳಿ ಯಥಾಸ್ಥಿತಿ ಜಾರಿ ಮಾಡುತ್ತೀರೆಂದು ಅಶ್ವಾಸನೆ ನೀಡಿದ್ದು, ಅದರಂತೆ ಕರ್ನಾಟಕ ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಶೇ. 99 ರಷ್ಟು ಪ್ರತಿಶತ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿ ಕಾಂಗ್ರೇಸ್ ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತರಲು ಬಹುದೊಡ್ಡ ಅಮೂಲ್ಯ ಕೊಡುಗೆ ನೀಡಿದ್ದು ಇತಿಹಾಸ. ಆದಕಾರಣ 138 ಶಾಸಕರು ಮತ್ತು 09 ಲೋಕಸಭಾ ಸದಸ್ಯರುಗಳನ್ನು ಆಯ್ಕೆಗೊಳಿಸುವಲ್ಲಿ ನಮ್ಮ ಸಮುದಾಯ ಮಹತ್ವದ ಪಾತ್ರವಹಿಸಿದೆ. 

ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನ ವಿಶ್ವವಿದ್ಯಾಲಯ ಮತ್ತು ಕೊಪ್ಪಳದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು.ಆರ್ಥಿಕ ಅಭಿವೃದ್ಧಿಗಾಗಿ ಮತ್ತು ಸಮುದಾಯದ ಸಬಲೀಕರಣಕ್ಕೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ 10 ಎಕರೆ ಜಮೀನನ್ನು ಒದಗಿಸಬೇಕು. ಯುವಕರಿಗೆ ರೂ. 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ  ನೀಡಬೇಕು.ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಯುನಾನಿ ಆಸ್ಪತ್ರೆ ಘಟಕಗಳನ್ನು ಸ್ಥಾಪಿಸಬೇಕು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ  ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದು.  

ಬೇರೆ ಸಮುದಾಯ ವಿದ್ಯಾರ್ಥಿಗಳಿಗೆ ನೀಡುವಂತೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರೂ. 55,000/- ಗಳನ್ನು ನೀಡಬೇಕು. ಸ್ಪರ್ಧಾತ್ಮಕ ಕೋಚಿಂಗ್ ಸೆಂಟರ್ಗಳನ್ನು ಸ್ಥಾಪಿಸಬೇಕು. ಬೇಡಿಕೆಗಳನ್ನು ಬಜೆಟ್ ಮಂಡನೆಯಲ್ಲಿ ಈಡೇರಿಸಬೇಕೆಂದು ವಿಜನ್ ಚಾರಿಟೇಬಲ್ ಟ್ರಸ್ಟ್‌ ಹಾಗೂ ಎಲ್ಲಾ ಅಲ್ಪಸಂಖ್ಯಾತರ ಪರವಾಗಿ  ತಿಳಿಸಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯದ ಮುಸ್ಲಿಂ ಶಾಸಕರು ಗಳಾದ ಯು.ಟಿ.ಖಾದರ, ಶಾಸಕರು ಮಂಗಳೂರು ಹಾಗೂ ವಿಧಾನಸಭಾ ಸ್ಪೀಕರ್ಬಿ.ಜೆಡ್‌.ಜಮೀರ ಅಹಮದ್ ಖಾನ್, ಶಾಸಕರು ಚಾಮರಾಜಪೇಟ ಹಾಗೂ ಸಚಿವರು ವಸತಿ ್ಘ ವಕ್ಸ್‌ ಅಲ್ಪಸಂಖ್ಯಾತ ಇಲಾಖೆನಸೀರ ಅಹಮದ, ವಿಧಾನಪರಿಷತ್ ಸದಸ್ಯರು ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿರಹೀಮಖಾನ್, ಶಾಸಕರು ಬೀದರ ಹಾಗೂ ಪೌರಾಡಳಿತ ಸಚಿವರು ತನ್ ವೀರ ಸೇರ್, ಶಾಸಕರು ಮೈಸೂರು ಆಸಿಫ್ ಸೇರ್, ಶಾಸಕರು ಬೆಳಗಾವಿ ರಿಜ್ವಾನ್ ಅರ್ಶದ್, ಶಾಸಕರು ಶಿವಾಜಿನಗರಹೆಚ್‌.ಎ.ಎಕ್ಸಾಲ್ ಹುಸೇನ್, ಶಾಸಕರು ರಾಮನಗರಎನ್‌.ಎ.ಹಾರಿಸ್, ಶಾಸಕರು ಶಾಂತಿನಗರಕನೀಜ್ ಫಾತಿಮಾ, ಶಾಸಕರು ಗುಲಬರ್ಗಾಯಾಸಿರ್ ಅಹಮದ್ಖಾನ್ ಪಠಾನ್, ಶಾಸಕರು ವಿಷನ್ ಚಾರಿಟೇಬಲ್ ಟ್ರಸ್ಟ್‌ ಪದಾಧಿಕಾರಿಗಳಾದ ಶಾಹಿದ್ ಹುಸೇನ್ ತಾಸಿಲ್ದಾರ್ ಮೊಹಮ್ಮದ್ ಅಲಿ ಮುದ್ದೀನ್ ಮತ್ತು ಹಿರಿಯ ಉರ್ದು ಸಾಹಿತಿ ಅನ್ವರ್ ಹುಸೇನ್ ಮತ್ ಇತರರು ಪಾಲ್ಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರ ಅರ​‍್ಿಸಿ ಒತ್ತಾಯಿಸಿದ್ದಾರೆ.