ಸ್ಲಂ ಜನರ ಸಮಸ್ಯಗಳ ಪರಿಹಾರಕ್ಕಾಗಿ ಕುಂದು-ಕೊರತೆಗಳ ಸಭೆ ಕರೆಯಲು ಆಗ್ರಹಿಸಿ ಮನವಿ
ಗದಗ 15: ಗದಗ-ಬೆಟಗೇರಿ ನಗರದ ಸುಮಾರು 48 ಗುಡಿಸಲು ಪ್ರದೇಶಗಳನ್ನು ಕರ್ನಾಟಕ ಕೊಳಚೆ ಪ್ರದೇಶಗಳ ಅಧಿಯನಿಮ 1973 ಪ್ರಕಾರ ಘೋಷಣೆ ಮಾಡಿದ್ದು ಇರುತ್ತದೆ, ಇನ್ನು ಸುಮಾರು 25 ಕ್ಕೊ ಹೆಚ್ಚು ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡಬೇಕಾಗಿದೆ, ಗದಗ ಜಿಲ್ಲೆಯ ಸುಮಾರು 200 ಕ್ಕೊ ಹೆಚ್ಚು ಕೊಳಚೆ ಪ್ರದೇಶಗಳಲ್ಲಿ ಸಾವಿರಾರು ಕುಟುಂಬಗಳು ವಸತಿ, ನಾಗರೀಕ ಸೌಲಭ್ಯ, ಹಕ್ಕುಪತ್ರ ಹಾಗೂ ಇನ್ನು ಹಲವಾರು ತೊಂದರೆಯನ್ನು ಅನುಭವಿಸುತ್ತಿದ್ದು, ಇದರ ಪರಿಹಾರಕ್ಕಾಗಿ ತಕ್ಷಣ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕುಂದು-ಕೊರತೆಗಳ ಸಭೆಯನ್ನು ಕರೆಯಬೇಕೆಂದು ಆಗ್ರಹಿಸಿ ಸ್ಲಂ ಜನಾದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ,
ನೂತನವಾಗಿ ಗದಗ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವಿಕಾರ ಮಾಡಿರುವ ಸಿ.ಎನ್.ಶ್ರೀಧರ ಅವರಿಗೆ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಸನ್ಮಾನ ಮಾಡಲಾಗಿದೆ, ಜಿಲ್ಲಾಧಿಕಾರಿಗಳಿಗೆ ಸ್ಲಂ ಜನರ ಬೇಡಿಕೆಗಳ ಮನವಿಯನ್ನು ಸಲ್ಲಿಸಿ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ ಗದಗ-ಬೆಟಗೇರಿ ನಗರದಲ್ಲಿಯ ಸುಮಾರು ಸ್ಲಂ ಪ್ರದೇಶಗಳು ಘೋಷಣೆಯಾಗಿ 4 ದಶಗಳು ಕಳೆದರು ಸಹ ಸ್ಲಂ ಕಾಯ್ದೆ ಪ್ರಕಾರ ಸ್ಥಳೀಯವಾಗಿ ಮೂಲಭೂತ ಸೌಲಭ್ಯ ಹಾಗೂ ವಸತಿ ಕಲ್ಪಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ, ಗದಗ-ಬೆಟಗೇರಿ ನಗರದಲ್ಲಿ ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಡಿಯಲ್ಲಿ 863 ಮನೆಗಳನ್ನು ಮಂಜೂರಾಗಿದ್ದು, ಇದೇ ರೀತಿ ಗದಗ ಜಿಲ್ಲೆಯ ತಾಲೂಕ ಕೇಂದ್ರಗಳ ಸ್ಲಂ ಪ್ರದೇಶಗಳಲ್ಲಿ ವಸತಿಗಾಗಿ ಸರ್ಕಾರದಿಂದ ಸಾವಿರಾರು ಮನೆಗಳನ್ನು ಮಂಜೂರು ಮಾಡಲಾಗಿದೆ,
ಆದರೆ ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯ ಮನೆಗಳ ನಿರ್ಮಾಣ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ, ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಕಳೆದ 2014 ರಿಂದ ಗದಗ-ಬೆಟಗೇರಿ ಅವಳಿ ನಗರದ 348 ವಸತಿರಹಿತ ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡಬೇಕೆಂದು ನಿರಂತರ ಹೋರಾಟಗಳನ್ನು ನಡೆಸುವ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ, ಈಗ ಗಂಗಿಮಡಿ ಹತ್ತಿರ ನಿರ್ಮಾಣ ಹಂತದಲ್ಲಿರುವ ಮನೆಗಳಲ್ಲಿ ವಸತಿರಹಿತ ಕುಟುಂಬಗಳಿಗೆ ವಸತಿ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು, ಇನ್ನು ಹಲವಾರು ಸ್ಲಂ ಜನರ ಹಕ್ಕೋತ್ತಾಯಗಳ ಮನವಿಯನ್ನು ಸಲ್ಲಿಸಿದ್ದು ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಲಂ ಸಮಿತಿ ಮುಖಂಡರೊಂದಿಗೆ ಕುಂದು-ಕೊರತೆಗಳ ಸಭೆಯನ್ನು ನಡೆಸಿ ಸ್ಲಂ ಪ್ರದೇಶಗಳ ಅಭಿವೃದ್ದಿ ಮತ್ತು ಸಮಸ್ಯಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಡಂಬಳ, ಮೌಲಾಸಾಬ ಗಚ್ಚಿ, ಇಬ್ರಾಹಿಂ ಮುಲ್ಲಾ, ಮೈಮುನ ಬೈರಕದಾರ, ಪ್ರೇಮಾ ಮಣವಡ್ಡರ, ಮೆಹಬೂಬಸಾಬ ಬಳ್ಳಾರಿ, ಖಾಜಾಸಾಬ ಇಸ್ಮಾಯಿಲನವರ, ಮಕ್ತುಮಸಾಬ ಮುಲ್ಲಾನವರ, ಮಂಜುನಾಥ ಶ್ರೀಗಿರಿ, ದುರ್ಗಪ್ಪ ಮನವಡ್ಡರ, ಶಂಕ್ರ್ಪ ಪೂಜಾರ, ಸಾಕ್ರುಬಾಯಿ ಗೋಸಾವಿ ಮುಂತಾದ ಮುಖಂಡರು ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.