ಮಾಯಕ್ಕ ಜಾತ್ರೆಗೆ ಹೈ ಮಾಸ್ಕ್‌ ಬಲ್ಬ್‌ ಅಳವಡಿಸಿ ಕೋಡಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿಯವರಿಗೆ ಮನವಿ

A request to Public Works Department Minister Satish Jarakiholi to install high mask bulb for Mayak

 ಮಾಯಕ್ಕ  ಜಾತ್ರೆಗೆ ಹೈ ಮಾಸ್ಕ್‌  ಬಲ್ಬ್‌ ಅಳವಡಿಸಿ ಕೋಡಬೇಕೆಂದು  ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿಯವರಿಗೆ ಮನವಿ 

 ರಾಯಬಾಗ   12 : ಚಿಂಚಲಿ ಗ್ರಾಮಸ್ಥರು ಹಾಗೂ ಪಟ್ಟಣ ಪಂಚಾಯಿತಿಯವರು ಬಹು ದಿನಗಳಿಂದ ಚಿಂಚಲಿ ಮಾಯಕ್ಕ  ಜಾತ್ರೆಗೆ ಹೈ ಮಾಸ್ಕ್‌  ಬಲ್ಬ್‌ ಅಳವಡಿಸಿ ಕೋಡಬೇಕೆಂದು  ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿಯವರಿಗೆ ಮನವಿ ಮಾಡಿದ್ದರು.ಆದೇಶದ  ಮೇರೆಗೆ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಸಚಿವರು ತಮ್ಮ ಸ್ವಂತ ಖರ್ಚಿನಲ್ಲಿಎರಡು ಹೈ ಮಾಸ್ಕ್‌ ಬಲ್ಪ್‌ ಗಳನ್ನು ಪಟ್ಟಣದಲ್ಲಿ ಅಳವಡಿಸಿ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಲೋಕಸಭಾ ಸದಸ್ಯ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.     ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಇಂದು ಅಳವಡಿಸಲಾಗ ಹೈ ಮಾಸ್ಕ್‌ ಬಲ್ಬ್‌  ಉದ್ಘಾಟಿಸಿ ಮಾತನಾಡಿದ ಅವರು, ನೂರಾರು ವರ್ಷಗಳಿಂದ ನಡೆಯುವ ಈ ಜಾತ್ರೆಗೆ ಲಕ್ಷಾಂತರ ಭಕ್ತರು ಭೇಟಿ ನೀಡುವ ಕಾರಣ  ಭಕ್ತರ ಪವಿತ್ರ ಸ್ನಾನಕ್ಕಾಗಿ ಈಗಾಗಲೇ ಹಾಲದ ಹಳ್ಳಕ್ಕೆ ನೀರನ್ನು ಕೂಡ ಹರಿಸಲಾಗಿದ್ದು  ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು.  

ಎಂದರು ಈ ಸಂದರ್ಭದಲ್ಲಿ ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ,ಸಚಿವರ ಆಪ್ತ ಕಾರ್ಯದರ್ಶಿ ಶಿವನಗೌಡ ಪಾಟೀಲ, ಪಟ್ಟಣ ಪಂಚಾಯತ ಅಧ್ಯಕ್ಷೆ ಕವಿತಾ ಯಡ್ರಾವಿ, ದೀಲೀಪ ಜಮಾದಾರ, ಬಾಳಕೃಷ್ಣ ಕೌಜಲಗಿ, ಜ್ಯೋತಿ ಕೆಪ್ಪಟ್ಟಿ,  ಪ್ರವೀಣ ಹುಕ್ಕೇರಿ, ಅಬ್ಬಾಸ ಮುಲ್ಲಾ, ಅಶೋಕ ಬನಗೆ, ಹಾಜಿ ಮುಲ್ಲಾ, ಅರ್ಜುನ ನಾಯಕವಾಡಿ, ಶಂಕರಗೌಡ ಪಾಟೀಲ,  ಸುಲ್ತಾನ ಹೆಗಡೆ, ಯೂನಿಸ ದಳವಾಯಿ, ಗೋವಿಂದ ಕುಲಗುಡೆ,  ಮಹಾದೇವ ನಾಯಿಕ, ತಮ್ಮಾನಿ ನಿಂಗನೂರೆ, ಅರ್ಜುನ್ ಬಂಡಗರ್, ಶ್ರವಣ ಕಾಂಬಳೆ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿದ್ದರು. ರಾಯಬಾಗ: ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಅಳವಡಿಸಲಾದ ಹೈ ಮಾಸ್ಕ್‌ ಬಲ್ಬ್‌ ಗೆ ಚಾಲನೆ ನೀಡುವಾಗ ಲೋಕಸಭೆ ಸದಸ್ಯೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಇನ್ನಿತರರು.