ಸಂಸ್ಕೃತಿ ಪರಿಚಯವಾಗಲು ಪುಸ್ತಕಗಳ ದಾಖಲೆ ಅವಶ್ಯ: ಗವಿಶ್ರೀ

ಲೋಕದರ್ಶನ ವರದಿ

ಕೊಪ್ಪಳ 21: ಪುಸ್ತಕದಲ್ಲಿನ ಬರಹ ಸಮಾಜದಲ್ಲಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇತಿಹಾಸ ದಾಖಲೆಯಾಗುತ್ತಿದ್ದು, ಮುಂದಿನ ಜನಾಂಗಕ್ಕೆ ಆಯಾ ಭಾಗದ ಸಂಸ್ಕೃತಿ ಪರಿಚಯವಾಗುವಲ್ಲಿ ಪುಸ್ತಕ ದಾಖಲೆ ಅವಶ್ಯವಾಗುತ್ತದೆ ಎಂದು ಗವಿಮಠದ ಗವಿಶ್ರೀಗಳು ಅಭಿಪ್ರಾಯಪಟ್ಟರು. 

ಗವಿಶ್ರೀಗಳ ಜಲಸೇವೆ ಕುರಿತು ಹಾಗೂ ನಾಡಿನ ವಿವಿಧ ಸಾಧಕರ ಕುರಿತು ಹನುಮಸಾಗರದ ಲೇಖಕ ಕಿಶನರಾವ್ ಕುಲಕಣರ್ಿಯವರು ಬರೆದ 'ಅನುಗಾಲದ ಅನುಭಾವ' ಪುಸ್ತಕ ಸ್ವೀಕರಿಸಿ ಅವರು ಮಾತನಾಡಿದರು. 

ವಿವಾಹಿತರಿಗೆ ಪುತ್ರೋತ್ಸವ ಎಷ್ಟು ಖುಷಿ ತರುತ್ತದೆಯೋ ಅಷ್ಟೆ ಖುಷಿಯನ್ನು ಸನ್ಯಾಸಿಗಳಿಗೆ ಪುಸ್ತಕೋತ್ಸವ ಖುಷಿ ತರುತ್ತದೆ, ಅವರವರ ವಿಚಾರಗಳಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಕನಿಷ್ಠ,  ಮದ್ಯಮ, ಶ್ರೇಷ್ಠ ವರ್ಗದ ವ್ಯಕ್ತಿಗಳು ನಿಮರ್ಾಣವಾಗುತ್ತಾರೆ, ಇವರೆಲ್ಲರನ್ನೂ ಸರಿದಾರಿಗೆ ತರುವ ಪ್ರಯತ್ನವನ್ನು ಪುಸ್ತಕ ಸಾಹಿತ್ಯ ಮಾಡುತ್ತದೆ ಎಂದು ಹೇಳಿದರು. 

ಲೇಖಕ ಒಂದು ಪುಸ್ತಕ ಹೊರತರುವುದು ಸುಲಭದ ಮಾತಲ್ಲ, ತನ್ನೆಲ್ಲ ವಿಚಾರಗಳನ್ನು ಅಳೆದು, ತೂಗಿ ಸಮಾಜಕ್ಕೆ ಉಪಯುಕ್ತವಾಗಬಲ್ಲ ಸಂದೇಶಗಳನ್ನು ನೀಡುವುದು ಅದೊಂದು ಸಾಧನೆಯೇ ಸರಿ ಎಂದರು. ಕೊಪ್ಪಳದ ರಾಮಕೃಷ್ಣ ವಿವೇಕಾನಂದ ಆಶ್ರಮದ ಚೈತನ್ಯಾನಂದ ಶ್ರೀಗಳು ಮಾತನಾಡಿ, ಪುಸ್ತಕದ ವಿಶ್ಲೇಷಣೆ ನೀಡಿದರು. 

ಹಿರಿಯರಾದ ಸುರೇಶಬಾಬು ಜಮಖಂಡಿಕರ, ರುದ್ರಗೌಡ ಗೌಡಪ್ಪನವರ, ವಿಶ್ವನಾಥ ನಾಗೂರ, ಸಹಕಾರಿ ಸಂಘದ ಉಪನಿಬಂಧಕ ಶ್ರೀನಿವಾಸ ಸಿದ್ದನಕೊಪ್ಪ ಇವರನ್ನು ಶ್ರೀಗಳು ಸನ್ಮಾನಿಸಿದರು.  ಕಾರ್ಯಕ್ರಮದಲ್ಲಿ ಎಂ.ಪಿ. ಸೆಲ್ಲಿಕೇರಿ, ಬಿ.ಎ. ಕೇಸರಿಮಠ, ರಾಘವೇಂದ್ರ ಹಲಗೇರಿ, ವಿಶ್ವನಾಥ ಅಗಡಿ, ಎಮ್. ಮೋಹನ್, ನಾಗರಾಜ, ವಿಶ್ವನಾಥ ಕನ್ನೂರ, ಮಲ್ಲಯ್ಯ ಕೋಮಾರಿ, ಶ್ರೀನಿವಾಸ್ ಜಹಗೀರದಾರ, ಚಂದಪ್ಪ ಹಕ್ಕಿ, ಲಂಕೇಶ ವಾಲಿಕಾರ, ವಸಂತ ಸಿನ್ನೂರ, ಏಕನಾಥ ಮೇದಿಕೇರಿ, ಸತಿಶ್ ಜಮಖಂಡಿಕರ, ಪ್ರಶಾಂತ ಕುಲಕಣರ್ಿ, ಗುರುರಾಜ ಬಿಸರಳ್ಳಿ,  ಬಸವರಾಜ ಗೌರಿಮಠ, ಯಮನಪ್ಪ ಭೋವಿ, ಕಿಶನ್ ಕಾಟ್ವಾ ಉಪಸ್ಥಿತರಿದ್ದರು. 

ಹನಮಸಾಗರದ ಅರ್ಬನ್ ಕೊ- ಅಪರೇಟಿವ್ ಬ್ಯಾಂಕ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಘವೇಂದ್ರ ಜಮಖಂಡಿಕರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಿವಾಸ ಜಹಗಿರಿದಾರ ವಂದಿಸಿದರು