ಲೋಕದರ್ಶನ ವರದಿ
ವಿಜಯಪುರ 16: ಕನರ್ಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಪಂಚಾಯಿತಿ 16 ರಂದು ಆವರಣದ ಮುಂದೆ ಪ್ರತಿಭಟನಾ ಧರಣಿ ನಡೆಸಿ ಕನರ್ಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಕಾರ್ಯನಿವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನರ್ಾಟಕ ಪಂಚಾಯತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, 6 ತಿಂಗಳಿನ ಬಾಕಿ ವೇತನವನ್ನು ತಕ್ಷಣ ಕೊಡಬೇಕು. ಹೊಸ ವೇತನವನ್ನು ಅನುಮೋದನೆ ಇಲ್ಲದವರಿಗೂ ನೀಡಬೇಕು ಎಂದು ಒತ್ತಾಯಿಸಿದರು.
ಲಕ್ಷ್ಮಣ ಹಂದ್ರಾಳ ಮಾತನಾಡಿ, ಕನಿಷ್ಟ ವೇತನ 18000 ಕೊಡಬೇಕು, ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.ಸುರೇಖಾ ರಜಪೂತ ಮಾತನಾಡಿ, ಆರೋಗ್ಯ ಕಾಡರ್್ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ವರ್ಷಕ್ಕೆ 20 ದಿನಗಳು ಗಳಿಕೆ ರಜೆ ಮಂಜೂರು ಮಾಡಬೇಕು, ಭಾನುವಾರ ಕೆಲಸ ಮಾಡಿದವರಿಗೆ ಹೆಚ್ಚುವರಿ ವೇತನ ಕೊಡಬೇಕು. ಅಥವಾ ವಾರಕ್ಕೊಂದು ರಜೆ ಕೊಡಬೇಕು ಎಂದು ಒತ್ತಾಯಿಸಿದರು.
ನಿತ್ಯವೇತನವನ್ನು ನೀಡುವುದರಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದು ಕೂಡಲೇ ವೇತನವನ್ನು ಕೊಡುವ ವ್ಯವಸ್ಥೆ ಕಲ್ಪಿಸಬೇಕು ಎಂದರು. ತಾಲೂಕಾ ಅಧ್ಯಕ್ಷ ರಂಗಪ್ಪ ದಳವಾಯಿ ತಾಲೂಕ ಪಂಚಾಯತಿ ಅಧ್ಯಕ್ಷ ದಾನಪ್ಪ ಬಸಪ್ಪ ಚೌಧರಿ, ಹಾಗೂ ಅಧಿಕಾರಿ ಜಾಗೀರದಾರ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಾಲೂಕ ಪಂಚಾಯತ ಅಧ್ಯಕ್ಷ ದಾನಪ್ಪ ಬಸಪ್ಪ ಚೌಧರಿ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಇ.ಓ ಅವರ ಗಮನಕ್ಕೆ ತಂದು ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಯದಶರ್ಿ ರಫೀಕ ವಾಲೀಕಾರ, ಸಿದ್ದರಾಯ ಬಂಗಾರಿ, ಇಸಾಕ ಜಮಾದಾರ, ಸಿದ್ದು ಜಾಲಗೇರಿ, ಭೀಮು ಸಾರವಾಡ ಸೇರಿದಂತೆ ನೂರಾರು ಜನ ಪಂಚಾಯಿತಿ ಸಿಬ್ಬಂಧಿ ವರ್ಗದವರು ಭಾಗವಹಿಸಿದ್ದರು.