ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ

A protest march led by various pro-Dalit organizations of the taluk

ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ 

ಮುದ್ದೇಬಿಹಾಳ 21: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್‌. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಕಾರಣ ಅವ ರನ್ನು ಸಂಪುಟದಿಂದ ಕೈಬಿಡಬೇಕು  ಎಂದು ಆರೋಪಿಸಿ ಪಟ್ಟಣದ ವಿವಿಧ ದಲಿತ ಸಂಘಟನೆಯ ಮುಖಂಡರ ಶುಕ್ರವಾರ  ಪ್ರತಿಭಟನೆ  ನಡೆಸುವ ಮೂಲಕ ತಹಶಿಲ್ದಾರ ಬಲರಾಮ ಕಟ್ಟಿಮನಿ ಯವರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು. 

ಈ ವೇಳೆ ಪಟ್ಟಣದ ಅಂಬೇಡ್ಕರ ವೃತ್ತದರಿಂದ ಬ್ರಹತ್ ಪ್ರತಿಭಟನಾ ಮೆರವಣೆಗೆ ಪ್ರಾರಂಭಿಸಿ ಹುಡ್ಕೋ ಬಡಾವಣೆಯಲ್ಲಿರುವ ಮಿನಿ ವಿದಾನ ಸೌಧಕ್ಕೆ ತೆರಳಿ ಮನವಿ ಸಲ್ಲಿಸಿದರು ಈ ವೇಳೆ ಕೇಂದ್ರ ಗ್ರಹಸಚಿವ ಅಮೀತ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. 

ದಲಿತ ಮುಖಂಡ ಹರೀಷ ನಾಟಿಕಾರ ಹಾಗೂ ಸಿ ಜಿ ವಿಜಯಕರ , ಡಿ ಬಿ ಮೂದೂರ, ತಿಪ್ಪಣ್ಣ ದೊಡಮನಿ, ಅವರು ಮಾತನಾಡಿ ಡಾ, ಬಿ ಆರ್ ಅಂಬೇಡ್ಕರ್ ವರು ಇಡಿ ಮಾನವ ಕುಲಕ್ಕೆ ಒಳಿತಾಗುವ ಸಮಾನತೆ ಆದಾರದ ಮೇಲೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮ ಪಾಲು ಎನ್ನುವ ತತ್ವದಡಿಯಲ್ಲಿ ಸಂವಿಧಾನ ರಚಿಸುವ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಭಾರತದ ಸಂವಿದಾನ ಮೆಚ್ಚಿ ಇಡೀ ವಿಶ್ವದ ಎಲ್ಲ ರಾಷ್ಟ್ರಗಳು ಗೌರವಿಸುವುದರೊಂದಿಗೆ ಕೊಂಡಾಡುವಂತೆ ಮಾಡಿದ್ದಾರೆ ಆದರೇ ಸಂವಿದಾನದ ಆಡಿಯಲ್ಲಿ ಜನಪ್ರತಿನಿಧಿಯಾಗಿ ಕೇಂದ್ರದ ಗ್ರಹ ಸಚಿವರಾಗಿ ಸಂವಿದಾನ ರಕ್ಷಣೆ ಮಾಡಬೇಕಾದ ಅತುನ್ನತ ಹುದ್ದೆಗಳಲ್ಲಿದ್ದು ಕೇಂದ್ರದ ಸಂಸತ್‌ನಲ್ಲಿ ಮಾತನಾಡುವ ವೇಳೆ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿ ವ್ಯಂಗ್ಯವಾಡಿ ಅಪಮಾನ ಮಾಡಿರುವುದು ನಿಜವಾದ ದೇಶದ್ರೋಹದ ಕೃತ್ಯವಾಗಿದೆ ಮಾತ್ರವಲ್ಲದೇ ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಪ್ರತಿನಿತ್ಯವೂ ಸ್ಮರಿಸುತ್ತದೆ. ಅವರು ನೀಡಿರುವ ಸಂವಿಧಾನವನ್ನು ಎಲ್ಲರೂ ಸ್ಮರಿಸುತ್ತಾರೆ. ಆದರೆ, ದೇಶದ ಆಡಳಿತ ನಡೆಸುತ್ತಿರುವ ಕೋಮುವಾದಿಗಳು ಅವರನ್ನೇ ಅಪಮಾನ ಮಾಡುತ್ತಿದ್ಧಾರೆ’ ಇವರೋಬ್ಬ ಪಕ್ಕಾ ಕೋಮುವಾದಿ ಮಾತೇತ್ತಿದರೆ ಮುಸ್ಲೀಂ ಹಿಂದೂ ಎನ್ನುವ ಮೂಲಕ ಇದೀಗ ದಲಿತರ ಟಾರ್ಗೇಟ್ ಮಾಡಿ ಜಾಆತಿ ಧರ್ಮಗಳ ಮದ್ಯೆ ಕೋಮು ಭಾವನೆ ಸೃಷ್ಠಿಸುವ ಮೂಲಕ ದೇಶದಲ್ಲಿ ಅಶಾಂತಿ ಮೂಡಿಸುವ ಹುನ್ನಾರ ಅಡಗಿದೆ. ಜತೆಗೆ ಇಂತಹ ಕೀಳುಮಟ್ಟದ ಅಭಿರುಚಿವುಳ್ಳ ವ್ಯಕ್ತಿ ದೇಶದ ಗೃಹ ಸಚಿವ ಆಗಿರುವುದು ದೊಡ್ಡದುರಂತವಾಗಿದೆ.  ‘ಅಮಿತ್ ಶಾ ಅವರನ್ನು ಗಡಿಪಾರು ಮಾಡಬೇಕು. ಅವರು ದೇಶದ ಜನರ ಕ್ಷಮೆ ಕೇಳಬೇಕು’ ಅಮಿತ್ ಶಾ ಕೂಡಲೇ ಕೇಂದ್ರ ಸಚಿವ ಸಂಪುಟ ಸ್ಥಾನಕ್ಕೆ ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಲಾಯಿತು. 

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪ್ರಶಾಂತ ಕಾಳೆ,ಪ್ರಕಾಶ ಸರೂರ ಸಿದ್ದು ಕಟ್ಟಿಮನಿ, ಶಿವಪತ್ರ​‍್ಪ ಅಜಮನಿ, ಎಸ್ ಡಿ ಪಿ ಮಹಮ್ಮದ, ಸದ್ದಾಂಹುಸೇನ ನದಾಫ, ಸಮೀರ ಕುಂಟೋಜಿ, ಗುಂಡಪ್ಪ ಚಲವಾದಿ, ಆನಂದ ಮೂದೂರ, ಶೇಖು ಆಲೂರ, ದೇವರಾಜ ಹಂಗರಗಿ, ಕೆ ಎಂ ರಿಸಾಲ್ದಾರ, ನೀಲಮ್ಮ ಚಲವಾದಿ, ಲಕ್ಷ್ಮೀಬಾಯಿ ಕಂದಗನೂರ, ಭಾರತಿ ಮಾದರ, ಅರುಣ ತಿಳಗೊಳ, ಕೈಮ್ ಚೌಧರಿ, ಹಣಮಂತ ಬೆಳಗಲ್ಲ,  ಈರಣ್ಣ ತಾರನಾಳ, ರಾಮು ತಂಬೂರಿ, ಭಗವಂತೆ ಕಬಾಡೆ, ಮೈಬೂಬ ಕುಂಟೋಜಿ, ಯಮಮನಪ್ಪ ನಾಯ್ಕೋಡಿ, ಮಂಜುನಾಥ ನಾಲತವಾಡ, ಸಂಗಮೇಶ ನೇಬಗೇರಿ, ಶಿವಾನಂದ ದೊಡಮನಿ ಸೇರಿದಂತಗೆ ಹಲವರು ಇದ್ದರು.