ಬೀಳಗಿ ತಾಪಂ ಸಭಾಭವನದಲ್ಲಿ ಜರುಗಿದ ಪ್ರಗತಿ ಪರೀಶೀಲನಾ ಸಭೆ
ಬೀಳಗಿ,21 : ಒಂದು ಕಡತ ತಹಶೀಲ್ದಾರ್ ಟೇಬಲ್ ಗೆ ಹೋಗಬೇಕಾದರೆ ಒಂದು ತಿಂಗಳ ಸಮಯಬೇಕು. ಹಾಗೂ ಒಂದು ಆಸ್ತಿ ವರ್ಗಾವಣೆಗೆ ?1ರಿಂದ 1.5 ಲಕ್ಷ ಹಣ ನೀಡಿದರೆ ಮಾತ್ರ ಕೆಲಸವಾಗುತ್ತದೆ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸಾರ್ವಜನಿಕರಿಗೆ ಏನು ಉತ್ತರ ಕೊಡೋಣ ಎಂದು ಗ್ರೇಡ್ 2 ತಹಶೀಲ್ದಾರ್ ಆನಂದ ಕೋಲಾರ ಮೇಲೆ ಶಾಸಕ ಜೆ.ಟಿ ಪಾಟೀಲ್ ಗರಂ ಆದ ಘಟನೆ ನಡೆಯಿತು.
ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲ ಜೀವನ ಮಿಷನ್ ನಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹಳ್ಳಿ ಹಳ್ಳಿಯಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ರಸ್ತೆಗಳ ದುರಸ್ತಿ ಬಗ್ಗೆ ಮಾಹಿತಿ ನೀಡಬೇಕು . ಶಿಕ್ಷಣ ಇಲಾಖೆಯವರು ಎ??????ಲ್ ಸಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಬೇಕು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡದಂತೆ ಕ್ರಮವಹಿಸಿ, ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಹೇಳಿದರು.
ತಾಲ್ಲೂಕಿನ ಶಾಡದಾಳ ಕೆಇಬಿ ಸ್ಟೇಷನ್ ಪ್ರಾರಂಭವಾಗಿ ಒಂದು ವರ್ಷವಾದರೂ ಶಾಸಕರ ಗಮನಕ್ಕಿಲ್ಲ. ಸ್ಟೇಷನ್ ನನಗೆ ಸಂಬಂಧಿಸಿದ ಇಲಾಖೆ ಅಲ್ಲವೇ? ಚಿಕ್ಕಶೆಲ್ಲಿಕೆರೆಯಲ್ಲಿ ಪ್ರಾರಂಭವಾಗುವ ಕೆಇಬಿ ಸ್ಟೇಷನ್ ಗೆ ಸರ್ಕಾರಿ ಜಾಗ ಕೊಡುವಂತಿಲ್ಲ ಎಂದು ಅಧಿಕಾರಿಗೆ ಸೂಚಿಸಿದರು.
?1.47 ಕೋಟಿ ಬೀಳಗಿ ಸರ್ಕಾರಿ ಆಸ್ಪತ್ರೆಗೆ ಹಿಂದಿನ ಅವಧಿಯಲ್ಲಿ ಮಂಜೂರ ಆಗಿತ್ತು. ಈ ಹಣವನ್ನು ಯಾವ ಕೆಲಸಗಳಿಗೆ ಬಳಸಿಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಇಲ್ಲಿಯವರೆಗೂ ಕೊಡುತ್ತಿಲ್ಲ ಎಂದು ಶಾಸಕ ಜೆ.ಟಿ ಪಾಟೀಲ ಬೇಸರ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯ, ಬೆಡ್ ಶೀಟ್ ಹಾಗೂ ಆವರಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ತಿಳಿಸಿದರು.
ಗಿಡ ನೆಟ್ಟರೆ ಸಾಲದು ಅದನ್ನು ಪೋಷಿಸಿ ಬೆಳೆಸಿ ಹೆಮ್ಮರವಾಗಿ ಮಾಡಬೇಕು. ಇದರಿಂದ ಉತ್ತಮ ಮಳೆ ಬೆಳೆ ಸಾಧ್ಯ. ಈ ನಿಟ್ಟಿನಲ್ಲಿ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳು ಕಾಳಜಿ ವಹಿಸಬೇಕು. ಸಭೆಗೆ ತಪ್ಪು ಮಾಹಿತಿ ನೀಡಿದ ಬಾದಾಮಿಯ ಆರ್ ಎಫ್ ಒ ರನ್ನು ಸೇವೆಯಿಂದ ವಜಾಗೊಳಿಸಿ ಎಂದು ಸೂಚಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅರಣ್ಯದಲ್ಲಿರುವ ಹಣ್ಣುಗಳ ಮಾಹಿತಿ ಇಲ್ಲ. ಇನ್ನೂ ಸಾರ್ವಜನಿಕರಿಗೆ ಏನು ಮಾಹಿತಿ ಕೊಡುತ್ತೀರಿ ಕಾರಿಟಂಗ, ನಕ್ಕರಿಹಣ್ಣು, ಕವಳಿಹಣ್ಣಿನಂತಹ ಗಿಡಗಳನ್ನು ಉಳಿಸಿ ಬೆಳೆಸಿ ಎಂದು ಸೂಚಿಸಿದರು.
ಕ್ಷೇತ್ರದ ಸವಾಂರ್ಗೀಣ ಅಭಿವೃದ್ಧಿ ನನ್ನ ಗುರಿ. ಎಲ್ಲ ಇಲಾಖೆ ಅಧಿಕಾರಿಗಳು ಪ್ರತಿಯೊಂದು ಯೋಜನೆಗಳ ಸಮರ್ಕ ಅನುಷ್ಠಾನಕ್ಕೆ ಸ್ಪಂದಿಸಬೇಕು. ಅನುಷ್ಠಾನಾಧಿಕಾರಿಗಳು ಕೆ ಡಿ ಪಿ ಸಭೆಗಳಿಗೆ ಕಡ್ಡಾಯವಾಗಿ ಇಲಾಖೆಯ ಪ್ರಗತಿಯೊಂದಿಗೆ ಆಗಮಿಸಿ ಮಾಹಿತಿ ನೀಡಬೇಕು ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕಾ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಬೀಳಗಿ ಗ್ರೇಡ್2 ತಹಶೀಲ್ದಾರ್ ಆನಂದ ಕೋಲಾರ, ಬದಾಮಿ ತಹಶೀಲ್ದಾರ್ ಮಧುರಾಜ ಕೂಡಲಗಿ, ಬಾಗಲಕೋಟ ತಹಶೀಲ್ದಾರ್ ಅಮರೇಶ್ ಪಮ್ಮಾರ, ಬೀಳಗಿ ತಾಲ್ಲೂಕು ಪಂಚಾಯಿತಿ ಇಒ ಅಭಯ ಕುಮಾರ ಮೊರಬ, ಬದಾಮಿ ಇಒ ಸುರೇಶ ಕೊಕರೆ, ಬಾಗಲಕೋಟೆ ಇಒ ಸುಭಾಷ ಸಂಪಗಾಂವಿ, ವಿಶೇಷ ಭೂಸ್ವಾಧಿನಾಧಿಕಾರಿ ಉದಯ ಕುಂಬಾರ ಇದ್ದರು.
ಬಾಕ್ಸ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಹಾಂತೇಶ ನಾವಲಗಿ ಇಲಾಖೆಗೆ ಸಂಬಂಧಿಸಿದ ಖರೀದಿಗಳಲ್ಲಿ ಭಾಗವಹಿಸುವುದಲ್ಲದೆ ನೌಕರಿ ಮಾಡುವುದನ್ನು ಬಿಟ್ಟು ರಾಜಕಾರಣ ಮಾಡಲು ಬಿಟ್ಟಿದ್ದೀರಾ ಎಂದು ಸಿಡಿಪಿಒ ಅವರನ್ನು ತರಾಟೆಗೆ ತೆಗೆದುಕೊಂಡರು.
ಹಾಲಿನ ಪುಡಿ, ಅಕ್ಕಿ, ರೇಷನ್ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ಬಾಗಲಕೋಟೆಯಿಂದ ಬಾಂಬೆಗೆ ಕಾಳದಂದೆ ಸಪ್ಲಾಯಾಗುತ್ತದೆ ಇಂಥವರ ವಿರುದ್ಧ ನೀವು ಕ್ರಮ ಕೈಗೊಳ್ಳದಿದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆಹಾರ, ಶಿಶು ಅಭಿವೃದ್ಧಿ, ಶಿಕ್ಷಣ, ಮಧ್ಯಾಹ್ನ ಬಿಸಿಊಟದ ಯೋಜನೆ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.