ಒಂದು ವಿದ್ಯಾಸಂಸ್ಥೆಯ ಹೆಜ್ಜೆಯ ಗುರುತಿನಲ್ಲಿ ಪ್ರಾಧ್ಯಾಪಕರ ಪತ್ರ ಅತಿಮುಖ್ಯ
ಕಂಪ್ಲಿ 12: ಪಟ್ಟಣದ ಸಣಾಪುರ ರಸ್ತೆಯಲ್ಲಿರುವ ರೈನ್ ಬೋ ಗ್ಲೋಬಲ್ ಸ್ಕೂಲ್ ಮತ್ತು ಪಿಯುಸಿ ಕಾಲೇಜಿನಲ್ಲಿ ಶಾಲಾ ಮತ್ತು ಕಾಲೇಜಿನ ಜಂಟಿ ವಾರ್ಷಿಕೋತ್ಸವದ ಕಾರ್ಯಕ್ರಮ ಮಕ್ಕಳ ಸಾಂಸ್ಕೃತಿಕ ಕಲರವದೊಂದಿಗೆ ವಿಜೃಂಭಣೆಯಿಂದ ಶನಿವಾರ ಸಂಜೆ ಜರುಗಿತು. ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಒಂದು ವಿದ್ಯಾಸಂಸ್ಥೆಯ ಹೆಜ್ಜೆಯ ಗುರುತಿನಲ್ಲಿ ಪ್ರಾಧ್ಯಾಪಕರ ಪತ್ರ ಅತಿಮುಖ್ಯವಾಗಿದೆ.
ವ್ಯಕ್ತಿತ್ವ ವಿಕಾಸ ಮತ್ತು ವೈಜ್ಞಾನಿಕ ಮನೋಭಾವ ಮಕ್ಕಳಲ್ಲಿ ಬೆಳೆಸಬೇಕು. ಕಲಿಕೆಯ ಅಭಿರುಚಿಯನ್ನು ಕಲಿಸುತ್ತಾ, ಅವರಲ್ಲಿ ಜ್ಞಾನದ ಅರಿವು ಮೂಡಿಸಲಾಗುತ್ತಿದೆ. ಮನೋಬಲ ಮತ್ತು ಆತ್ಮಸ್ಥೈರ್ಯದೊಂದಿಗೆ ಸಂಸ್ಥೆಯ ಸ್ಥಾಪಕ ಕೆ.ಎಸ್.ಚಾಂದ್ ಬಾಷಾ ಅವರು ಶಾಲಾ ಕಾಲೇಜು ನಡೆಸುತ್ತಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿ, ಪ್ರಾಧ್ಯಾಪಕರ, ಶಿಕ್ಷಕರ ಪರಿಶ್ರಮದಿಂದ ಬರುವ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ ಎಂದರು. ಕೆಸಿಬಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯ ಕೆ.ಎಸ್.ಚಾಂದ್ ಬಾಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಂಪ್ಲಿಗೆ ಸೈನ್ಸ್ ಕಾಲೇಜು ತಂದಿದ್ದು, ನಿಮ್ಮೆಲ್ಲರ ಸಹಕಾರದಿಂದ ಕಾಲೇಜಿಗೆ ಮಕ್ಕಳನ್ನು ಕಳುಹಿಸುವ ಮೂಲಕ ಬೆಂಬಲ ನೀಡುತ್ತಿದ್ದೀರಿ. ಇನ್ನೂ ಕೆಲವೇ ದಿನಗಳಲ್ಲಿ ಐಸಿ, ಎಸಿ ಅಂತಹ ಉತ್ಕೃಷ್ಟ ದರ್ಜೆಯ ಸೆಲೆಬಸ್ ತಂದು, ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಕೊಡಿಸಲು ಇಷ್ಟಪಡುವೆ. ನಾವು ಆರಂಭಿಕ ಹಂತದಲ್ಲಿದ್ದು, ಬಹುದೂರ ಸಾಗಬೇಕಾಗಿದೆ.
ಆದರೆ, ಆರ್ಥಿಕ ಮುಗ್ಗಟ್ಟು ಹೊರ ಜಗತ್ತಿಗೆ ಅರ್ಥವಾಗುವುದಿಲ್ಲ. ನಮ್ಮ ಶಕ್ತಿ ಮೀರಿ ಸಂಸ್ಥೆ ನಿರ್ಮಾಣವಾಗಿದೆ. ಒಳ್ಳೆಯ ಕೆಲಸಕ್ಕೆ ಹೆಗಲು ಬೇಕಾಗಿರುವುದು ನಿಮ್ಮೆಲ್ಲರ ಸಹಕಾರ, ಕಾಯುವ ತಾಳ್ಮೆ, ಒಂದಿಷ್ಟು ಪ್ರೋತ್ಸಾಹ ಅಗತ್ಯವಾಗಿದೆ. ಕಂಪ್ಲಿ ಸೇರಿದಂತೆ ಈ ಭಾಗದ ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಹಂಬಲದಿಂದಾಗಿ ಕಾಲೇಜು ನಿರ್ಮಿಸಿದ್ದು, ಅದರಂತೆ ಪ್ರತಿಯೊಬ್ಬರು ಸಹಕಾರ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣದೊಂದಿಗೆ ಭವಿಷ್ಯ ರೂಪಿಸುವ ಕಡೆಗೆ ಸಂಸ್ಥೆಗೆ ಮುಗ್ಗುತ್ತಿದೆ ಎಂದರು. ನಂತರದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಮತ್ತು ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ತದನಂತರ ನಡೆದ ಮಕ್ಕಳ ಸಾಂಸ್ಕೃತಿಕ ಕಲರವ. ನೋಡುಗರ ಮನಸೆಳೆದ ವಿದ್ಯಾರ್ಥಿಗಳು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪುರಸಭೆ ಸದಸ್ಯ ಎಂ.ಉಸ್ಮಾನ್, ಲೊಡ್ಡು ಹೊನ್ನೂರವಲಿ, ವೀರಾಂಜನೇಯ, ಕೆಸಿಬಿ ಟ್ರಸ್ಟ್ ಅಧ್ಯಕ್ಷ ಶಾರುಖ್ ಕೆ.ಎಸ್, ಖಜಾಂಚಿ ಕೆ.ಎಸ್.ಮೆಹಬೂಬ್ ಬಾಷಾ, ಅಕಾಡೆಮಿಕ್ ನಿರ್ದೇಶಕ ಮಹೇಶ ಕಟ್ಟ, ಪ್ರಾಚಾರ್ಯ ಬಿ.ಶ್ರೀನಿವಾಸುಲು, ಮುಖ್ಯಗುರು ಜೆ.ಉಮೇಶ, ಮುಖಂಡರಾದ ಪಿ.ಮೂಕಯ್ಯಸ್ವಾಮಿ, ಸೈಯದ್ ಉಸ್ಮಾನ್, ಡಾ.ಎ.ಸಿ.ದಾನಪ್ಪ, ಜಿ.ರಾಮಣ್ಣ, ಸದಾಶಿವಪ್ಪ, ಬಿ.ಮಹೇಶಗೌಡ, ಕೆ.ಷಣ್ಮುಕಪ್ಪ, ಶ್ರೀನಿವಾಸ, ಬಾಲಕೃಷ್ಣ, ಸುರೇಶರೆಡ್ಡಿ, ಅಕ್ಕಿ ಜಿಲಾನ್, ಬೂದಗುಂಪಿ ಹುಸೇನ್ಸಾಬ್, ಭಾಸ್ಕರ್ರೆಡ್ಡಿ, ಬಿ.ದೇವೇಂದ್ರ, ಬಿ.ನಾಗೇಂದ್ರ, ಯುಗಾದಿ ಶಿವರಾಜ, ಮಾನ್ವಿ ಮಹೇಶ, ವೆಂಕಟರಮಣ, ಮಸ್ತಾನ್, ಅತ್ತಾವುಲ್ಲಾ ರೆಹಮಾನ್ ಸೇರಿದಂತೆ ಅನೇಕರಿದ್ದರು.