ಕಾಂಗ್ರೆಸ್ ಅಧಿವೇಶನದ ಅಂಗವಾಗಿ ಪೂರ್ವ ಭಾವಿ ಸಭೆ

A preliminary meeting as part of the Congress session

ಕಾಂಗ್ರೆಸ್ ಅಧಿವೇಶನದ ಅಂಗವಾಗಿ ಪೂರ್ವ ಭಾವಿ ಸಭೆ

ಬೆಳಗಾವಿ 24: ಮಹಾತ್ಮ ಗಾಂಧೀಜಿಯವರು ಈ ಹಿಂದೆ 1924 ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿವೇಶನವನ್ನು ನಡೆಸಿ 100 ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಕಾಂಗ್ರೆಸ್ ಪಕ್ಷದ ವತಿಯಿಂದ ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸುತ್ತಿದ್ದು  ಸಮಾವೇಶದಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರು ,ವಿಧಾನ ಸಭೆಯ ಸದಸ್ಯರು  ವಿಧಾನ ಪರಿಷತ್ ನ ಸದಸ್ಯರು,ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರು, ರಾಜ್ಯದ ವಿವಿಧ ಭಾಗಗಳಿಂದ ಬರುವ ಜನರಿಗೆ  ಆಹಾರ ವ್ಯವಸ್ಥೆ ಯನ್ನು ಮಾಡುವುದರಿಂದ ಆಹಾರ ಸಮಿತಿ ಯ ಅಧ್ಯಕ್ಷರಾಗಿ ಆಹಾರ ಸಚಿವ .ಕೆಹೆಚ್‌. ಮುನಿಯಪ್ಪ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್,ಗಣಿ ಮತ್ತು ಭೂ ವಿಜ್ಞಾನ ಸಚಿವ ಮಲ್ಲಿಕಾರ್ಜುನ ರವರ ನೇತೃತ್ವದ ಸಮಿತಿಯ ಮೂಲಕ ಆಹಾರ ವಿತರಣೆ ಜವಾಬ್ದಾರಿಯನ್ನು ನೀಡಲಾಗಿದೆ. 

ಮಹಾತ್ಮ ಗಾಂಧಿಯವರು ಅಧ್ಯಕ್ಷತೆಯಲ್ಲಿ ನೆಡದ  ಕಾಂಗ್ರೆಸ್ ಅಧಿವೇಶನವು 100 ವರ್ಷ ಗಳು ಪೂರೈಸಿದ್ದು ಅವರ ತತ್ವ ಆದರ್ಶಗಳು  ,ಚಿಂತನೆ ಅವರು ನಡೆಸಿದಂತಹ ಹೋರಾಟಗಳು ಹಾಗೂ ಅವರು ಸರ್ವ ಧರ್ಮಗಳ ಪರವಾಗಿ ಯಾವುದೇ ಜಾತಿ ಧರ್ಮ ಎಂಬ ಬೇದ ಬಾವವಿಲ್ಲದೆ ಹೋರಾಟ ಮಾಡಿ ಸ್ವಾತಂತ್ರ ವನ್ನು ಈ ದೇಶಕ್ಕೆ ತಂದು ಕೊಟ್ಟ ಮಾಹಾನ್  ಚೇತನ ಮಹಾತ್ಮ ಗಾಂಧಿಯವರನ್ನು   ಈ ದೇಶದ. ಉದ್ದಗಳಕ್ಕೂ ಸ್ಮರಿಸುವುದು ಪ್ರತಿ ಯೊಬ್ಬ ನಾಗರಿಕನ ಆದ್ಯ  ಕರ್ತವ್ಯವಾಗಿದೆ ಎಂದರು.ಸುಭಾಷ್ ಚಂದ್ರ ಬೋಸ್,ವಲ್ಲಬಾಯಿಪಟೇಲ್,ಮೌಲಾನಾ ಆಜಾಧ್ ಎಂಬ ಮಹಾನ್ ಚೇತನರ ತ್ಯಾಗ ಬಲಿದಾನಗಳಿಂದ ಈ ದೇಶಕ್ಕೆ ಸ್ವಾತಂತ್ರ ಬಂತು. 

ಪಂಡಿತ್ ಜವಹರಲಾಲ್ ನೆಹರೂ ರವರು  ಈ ದೇಶಕ್ಕೆ  ಸಂವಿಧಾನ ರಚಿಸಬೇಕಾದರೆ ಮಾಹಾತ್ಮ ಗಾಂಧಿಯವರ ಸಲಹೆ ಮೇರೆಗೆ  ಅಂಬೇಡ್ಕರ್ ರವರನ್ನು ರಚನಾ ಸಮಿತಿಯ ಅಧ್ಯಕ್ಷರಾಗಿ ನೇಮಿಸಿ ಈ ದೇಶಕ್ಕೆ ಒಂದು ಮಹತ್ವದ ಸಂವಿಧಾನ ರಚಿಸುವ ಜವಾಬ್ದಾರಿಯನ್ನು ವಹಿಸಿದರು. 

ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಭಾಗವಹಿಸುವ ಹಿನ್ನಲೆಯಲ್ಲಿ ನಾಮ್ಮ ಪಕ್ಷದವತಿಂಯಿಂದ ಸಮರ​‍್ಕವಾಗಿ ಆಹಾರ ವ್ಯವಸ್ಥೆ ಹಾಗೂ ವಾಹನಗಳ ನಿಲುಗಡೆ ಸ್ಥಳಗಳು ಜನರಲ್ಲಿ ಗೊಂದಲ ಉಂಟಾಗದೆ ಇರುವ ಹಾಗೆ ಅದರ ಸಮರ​‍್ಕ ನಿರ್ವಹಣೆ ಗಾಗಿ ನಮ್ಮ ನೇತೃತ್ವದಲ್ಲಿ ಎಲ್ಲಾ ವಿಭಾಗಗಳನ್ನು ನಿಗಾವಹಿಸಿ ಸೂಕ್ತ ರೀತಿಯಲ್ಲಿ ಯಶಸ್ವಿಯಾಗಿಸುವ ಸಲುವಾಗಿ ಇಂದಿನ ಪೂರ್ವ ಭಾವಿ ಸಭೆಯಲ್ಲಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರದಲ್ಲಿ ಭಾಗವಹಿಸಿದ ಎಲ್ಲರಿಗೂ ಪಕ್ಷಾತೀತವಾಗಿ  ಆಹ್ವಾನ ನೀಡುತ್ತಿದ್ದು ಈ ಐತಿಹಾಸಿಕ ಕಾರ್ಯಕ್ರಮ ನಡೆಸುತ್ತಿದ್ದು ನಮ್ಮ ಅಧ್ಯಕ್ಷರಾದ ಡಿಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ನಡೆಸುತ್ತಿದ್ದೇವೆ ಎಂದರು.